Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಚಿತ್ರದುರ್ಗದಲ್ಲಿ ನಾಥಪಂಥ ಜೋಗಿ ಸಂಸ್ಥಾನ ಮಠ ಸ್ಥಾಪನೆ ಆಗಲಿ

ಚಂದ್ರವಳ್ಳಿ ನ್ಯೂಸ್, ಚಿತ್ರದರ್ಗ:
ಚಿತ್ರದುರ್ಗ ಜಿಲ್ಲೆಯ ನಾಥಪಂಥ ಜೋಗಿ ಸಂಸ್ಥಾನ ಮಠದ ಪೂರ್ವಭಾವಿ ಸಭೆಯನ್ನು ನಗರದ ಐಶ್ವರ್ಯ ಫೋರ್ಟ್‌ನಲ್ಲಿ ಕರೆಯಲಾಗಿತ್ತು.

ಅಖಿಲ ಕರ್ನಾಟಕ ಜೋಗಿ ಮಹಾಮಂಡಳದ ರಾಜ್ಯಾಧ್ಯಕ್ಷ ಶಿವಾಜಿ ಮಧುಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಅನೇಕ ಮಠಗಳು ನಮ್ಮ ಕೈತಪ್ಪಿ ಹೋಗಿರುವುದರಿಂದ ಚಿತ್ರದುರ್ಗ ರಾಜ್ಯದ ಮಧ್ಯಭಾಗವಾಗಿರುತ್ತದೆ ಆದ್ದರಿಂದ ಇಲ್ಲಿ ನಾಥಪಂಥ ಜೋಗಿ ಸಂಸ್ಥಾನ ಮಠ ಸ್ಥಾಪನೆ ಮಾಡುವುದರಿಂದ ನಮ್ಮ ಸಮಾಜವನ್ನು ಸಂಘಟನೆಯ ಜೊತೆಗೆ ರಾಜಕೀಯ, ಶೈಕ್ಷಣಿಕವಾಗಿ ಮಕ್ಕಳನ್ನು ಮುಖ್ಯವಾಹಿನಿ ತರುವಲ್ಲಿ ಪಾತ್ರವಹಿಸಬಹುದು ಎಂದರು.

ಚಿತ್ರದುರ್ಗ ಜಿಲ್ಲೆಯ ಉಪ್ಪನಾಯಕನಹಳ್ಳಿ ಜೋಗಿ ಸಮಾಜದ ಮಕ್ಕಳು ಪಿಯುಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ, ಕುಸ್ತಿಪಟುವಿನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ ಎಂದರು.

ಶ್ರೀ ಮಠ ಸ್ಥಾಪನೆಯಿಂದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿರುವುದರಿಂದ ಸಮಾಜದ ಮಕ್ಕಳು ಐಎಎಸ್, ಕೆಎಎಸ್ ಅಧಿಕಾರಿಗಳು ಆಗಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಜೋಗಿ ಸಮಾಜದ 27 ಉಪಜಾತಿಗಳನ್ನು ಒಟ್ಟುಗೂಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಶ್ರೀಮಠವು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತದೆ ಎಂದು ಅವರು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ನಾಥ ಪರಂಪರೆಯ ಮಠ ಸ್ಥಾಪನೆಯಿಂದ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಠ ಸ್ಥಾಪನೆಯಾಗಲು ೧ ಎಕರೆ ಜಮೀನನ್ನು ನೀಡಲು ಸಮಾಜದ ಅಧ್ಯಕ್ಷರಾದ ಡಾ.ಜಗದೀಶ್ ಒಪ್ಪಿರುವುದನ್ನು ಸ್ವಾಗತಿಸಿದರು. ಸಮಾಜದ ಏಳಿಗೆಗೆ ಜಿಲ್ಲೆಯ ಎಲ್ಲ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಶ್ರಮಿಸಬೇಕೆಂದು ಕೋರಿದರು. ಜೋಗಿ ಜನಾಂಗದ ಅಧ್ಯಕ್ಷ ಡಾ.ಜಗದೀಶ್ ಮಾತನಾಡಿ ನಾನು ವಿದ್ಯಾರ್ಥಿಯಾದಂತಹ ಸಂದರ್ಭದಲ್ಲಿ ಪವರ್ಗ-೧ ಜೋಗಿ ಸಮಾಜದವನಾಗಿದರಿಂದ ನನಗೆ ವಿದ್ಯಾರ್ಥಿಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಎಂ.ಬಿ.ಬಿ.ಎಸ್ ಸೀಟ್ ಸಹ ಸಿಕ್ಕಿರುವುದನ್ನು ಸ್ಮರಿಸಿದರು.

ಕಿರಣ್‌ಕುಮಾರ್, ವೇದಾವತಿ, ಶೋಭಾ ರವರು ರಾಜ್ಯಮಟ್ಟದಲ್ಲಿ ತನ್ನದೇ ಆದ ರೀತಿಯಲ್ಲಿ ಗುರುತಿಸಿಕೊಂಡರು ಸಹ ಸರ್ಕಾರದಿಂದಾಗಲಿ ಯಾವುದೇ ರೀತಿ ಉಪಯೋಗವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಒಗ್ಗಟ್ಟಾಗಿದ್ದರೆ ರಾಜಕೀಯ ವ್ಯಕ್ತಿಗಳಾಗಲಿ, ಸರ್ಕಾರವಾಗಲಿ ನಮ್ಮ ಕಡೆ ಗಮನ ಹರಿಸುತ್ತದೆ. ನಾನು ೧ ಎಕರೆ ಜಮೀನನ್ನು ಶ್ರೀಮಠಕ್ಕೆ ಕೊಡಲು ಒಪ್ಪಿದ್ದು, ಕಾರಣ ನಮ್ಮ ಸಮಾಜದ ಮಕ್ಕಳು ರಾಜಕೀಯ, ಶೈಕ್ಷಣಕವಾಗಿ ಮುಂದುವರೆಯಲಿ ಎಂದು ಆಶಾಮನೋಭಾವದಿಂದ ನೀಡುತ್ತೇನೆ. ಸಮಾಜ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿರುತ್ತೇನೆ ಎಂದು ಭರವಸೆ ನೀಡಿದರು.

ಪ್ರೊ.ಚಂದ್ರಪ್ಪ ಮಾತನಾಡಿ ಈ ಐತಿಹಾಸಿಕ ದಿನವಾಗಿದ್ದು, ನಾನು ಸಹ ಪ್ರಾಧ್ಯಾಪಕರಾದ ಸಂದರ್ಭದಲ್ಲಿ ಎಷ್ಟೋ ಜೋಗಿ ಸಮಾಜದ ಮಕ್ಕಳಿಗೆ ಶುಲ್ಕ ಕಟ್ಟಲು ಅಥವಾ ವಸತಿ ಇಲ್ಲದೆ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಜೋಗಿ ಸಮಾಜದ ಮಕ್ಕಳಿಗೆ ಶ್ರೀಮಠ ಅವಶ್ಯಕತೆ ಎಂದು ತಿಳಿಸಿದರು.

ವಕೀಲ ಪ್ರತಾಪ್‌ ಜೋಗಿ ಮಾತನಾಡಿ ಜೋಗಿ ಸಮಾಜ ಆರ್ಥಿಕವಾಗಿ ಹಿಂದುಳಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅನೇಕ ಬಾರಿ ನಮ್ಮ ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಪ್ರಸ್ತುತ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಶ್ರೀಮಠಕ್ಕೆ ಜಮೀನು ಕಲ್ಪಿಸಿಕೊಡಲಿ ಎಂದು ಕೇಳಿಕೊಂಡಾಗ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ರವರು ಸಕರಾತ್ಮಕಾವಾಗಿ ಒಪ್ಪಿಕೊಂಡಿರುವುದರಿಂದ ಜಿಲ್ಲಾಡಳಿತವನ್ನು ಶ್ಲಾಘಿಸಿದರು.

ಶ್ರೀಮಠದಿಂದ ಎಷ್ಟೋ ಕುಟುಂಬಗಳಿಗೆ ಉನ್ನತ ಶಿಕ್ಷಣ, ವಿವಾಹವಾಗಲು ಸಮಾಜದ ಸಮಸ್ಯೆಗಳನ್ನು ಆಲಿಸಲು ಮತ್ತು ರಾಜಕೀಯವಾಗಿ ಪ್ರಾತಿನಿದ್ಯ ಸಿಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕುಂದಾಪುರ ರಮೇಶ್, ತುಮಕೂರಿನ ಶಿವುಕುಮಾರ್, ತೋಟಪ್ಪ, ಹೊನ್ನಪ್ಪ, ಮಂಜುನಾಥ್, ಯರ್ರಿಸ್ವಾಮಿ, ರಾಮು ಹಾವೇರಿ, ಚಂದ್ರು ದಾವಣಗೆರೆ, ಮಂಜುನಾಥ್ ನೆರ್‍ಲಗಿ, ಮಂಜುನಾಥ್ ಶಿವಪುರ, ಸಿದ್ದರಾಜು ಜೋಗಿ, ಶಿವುಕುಮಾರ್, ಗುರುಸ್ವಾಮಿ, ಯೋಗಿಶ್, ಕೃಷ್ಣಮೂರ್ತಿ, ರವಿಕಿರಣ್, ಶೋಭಾ, ವೇದಾವತಿ, ಕವಿತಾ, ಬಸವರಾಜ್ ಭಂಡಾರಿ, ನಾಗರಾಜು, ರವಿ, ತ್ಯಾಗರಾಜು, ಪ್ರಖ್ಯಾತ್‌ಜೋಗಿ, ವಿಜಯ್‌ಕುಮಾರ್ ಬೆಂಗಳೂರು ಇನ್ನಿತರರು ಇದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!