Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ವಿಶೇಷವಾಗಿ ಮನೆಯಲ್ಲೇ ಹೊಸ ವರ್ಷ ಆಚರಿಸೋಣ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಯಲ್ಲಿ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸೋಣ:
ಕ್ಯಾಲೆಂಡರ್ ವರ್ಷ 2025 ಕೊನೆಯಾಗುತ್ತಿದೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಬರುತ್ತಿದೆ. ಈ ನಿಟ್ಟಿನಲ್ಲಿ ಜನಸಂದಣಿಯಿಂದ ದೂರ ಉಳಿಯುವ ಮೂಲಕ ಮನೆಯಲ್ಲೇ ಹೊಸ ವರ್ಷದ ಆಚರಣೆಯನ್ನು ಸ್ಮರಣೀಯವಾಗಿಸಲು ಕೆಲವು ಯೋಜನೆಗಳಿವೆ. ಇದರಿಂದ ವೆಚ್ಚವೂ ಹೆಚ್ಚುವುದಿಲ್ಲ ಮತ್ತು ಕುಟುಂಬದೊಂದಿಗೆ ಖುಷಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು.

 ಜನರು ಈಗಾಗಲೇ ಹೊಸ ವರ್ಷವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವರು ಪರ್ವತಗಳಿಗೆ ಪ್ರವಾಸದ ಕುರಿತು ಯೋಚಿಸುತ್ತಿದ್ದರೆ, ಇತರರು ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಇನ್ನು ಕೆಲವರು ಮನೆಯಲ್ಲೇ ಕುಟುಂಬದೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯಲು ಯೋಜಿಸುತ್ತಿದ್ದಾರೆ.


ಪೈಜಾಮ ಪಾರ್ಟಿ:
ಹೊಸ ವರ್ಷದ ಮುನ್ನಾದಿನ ಮನೆಯಲ್ಲಿ ಪೈಜಾಮ ಪಾರ್ಟಿ ಆಯೋಜಿಸಬಹುದು. ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ನೀವು ಮನೆಯಲ್ಲಿ ಸಂಭ್ರಮಾಚರಣೆಯ ಸಂಜೆಯನ್ನು ಕಳೆಯಬಹುದು. ಈ ರೀತಿಯಲ್ಲಿ ಹೊಸ ವರ್ಷದ ಮುನ್ನಾದಿನವನ್ನು ಆಚರಿಸುವುದು ಯಾವುದೇ ಒತ್ತಡ ಇಲ್ಲವೇ ಕಿರಿಕಿರಿ ಒಳಗೊಂಡಿರುವುದಿಲ್ಲ. ಹೊಸ ವರ್ಷವನ್ನು ನಿರಾಳ ಹಾಗೂ ಆರಾಮದಾಯಕ ರೀತಿಯಲ್ಲಿ ಸ್ವಾಗತಿಸಬಹುದು.

ನಿಮ್ಮ ಸಿನಿಮಾ ನೋಡಿ:
 ಜನಸಂದಣಿಯಿಂದ ದೂರವಾಗಿ ನಿಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದರೆ ಚಲನಚಿತ್ರವನ್ನು ವೀಕ್ಷಿಸಬಹುದು. ಇದಕ್ಕಾಗಿ ನೀವು ತಿಂಡಿಗಳನ್ನು ಸೇವಿಸುತ್ತಾ ಮಂದ ಬೆಳಕಿನ ಮಧ್ಯೆ ನಿಮ್ಮ ಮನೆಯಲ್ಲಿ ಚಿಕ್ಕ ಚಿತ್ರಮಂದಿರವನ್ನು ಸ್ಥಾಪಿಸಬಹುದು. ಹೊಸ ವರ್ಷದ ಮುನ್ನಾದಿನ ನಿಮ್ಮ ಕುಟುಂಬದೊಂದಿಗೆ ಚಲನಚಿತ್ರಗಳನ್ನು ನೋಡುವುದು ವಿಶ್ರಾಂತಿ ನೀಡುವುದಲ್ಲದೆ ತುಂಬಾ ವಿಶೇಷವೂ ಆಗಿರುತ್ತದೆ. ಇದು ಗದ್ದಲದ ಪ್ರಪಂಚದ ಒತ್ತಡಗಳಿಲ್ಲದೆ ವರ್ಷದ ನೆನಪುಗಳನ್ನು ಒಟ್ಟಿಗೆ ಪ್ರತಿಬಿಂಬಿಸಲು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಸಂಬಂಧವನ್ನೂ ಬಲಪಡಿಸುತ್ತದೆ.


 ಆಟದ ರಾತ್ರಿಗಳನ್ನು ಪ್ಲಾನ್​ ಮಾಡಿ:
ಈ ಹೊಸ ವರ್ಷದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಆಟದ ರಾತ್ರಿಗೆ ಆಹ್ವಾನಿಸಬಹುದು. ಸುತ್ತುಗಳಲ್ಲಿ ಆಟಗಳನ್ನು ಆಡುವುದು ಮೋಜಿನಿಂದ ಕೂಡಿರುತ್ತದೆ. ತಂಡ ಆಧಾರಿತ ಆಟಗಳಿಂದ ಪ್ರಾರಂಭಿಸಿ ಹಾಗೂ ಬಳಿಕ ವೈಯಕ್ತಿಕ ಆಟಗಳನ್ನು ಮುಂದುವರೆಸಿರಿ.


ಡಿನ್ನರ್ ಪಾರ್ಟಿ ಮಾಡಿ:
ಡಿನ್ನರ್ ಪಾರ್ಟಿಯನ್ನು ಆಯೋಜಿಸುವುದು ಹೊಸ ವರ್ಷವನ್ನು ಆಚರಿಸಲು ಉತ್ತಮ ಮಾರ್ಗ. ನೀವು ನಿಮ್ಮ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಬಹುದು. ರುಚಿಕರವಾದ ಆಹಾರದ ಜೊತೆಗೆ ಬೆಳಕಿನ ಅಲಂಕಾರಗಳು, ಮೇಣದಬತ್ತಿಯ ಬೆಳಕು ಮತ್ತು ಸಂಗೀತವನ್ನು ವ್ಯವಸ್ಥೆ ಮಾಡುವ ಮೂಲಕ ನೀವು ವಿಶೇಷ ವಾತಾವರಣವನ್ನು ಸೃಷ್ಟಿಸಬಹುದು. ಪಾರ್ಟಿಯನ್ನು ಇನ್ನಷ್ಟು ಮೋಜಿನ ಹಾಗೂ ಸ್ಮರಣೀಯವಾಗಿಸಲು ಡಿನ್ನರ್ ನಂತರ ಆಟಗಳನ್ನು ಆಡಲು, ಚಲನಚಿತ್ರ ವೀಕ್ಷಿಸಲು ಸಮಯವನ್ನೂ ಸಹ ಪ್ಲಾನ್​ ಮಾಡಬಹುದು.

ಹೊಸ ವರ್ಷ ತರಲಿ ಹರ್ಷ:
ಹೊಸ ವರ್ಷವೆಂದರೆ ಅದು ಬರಿ ಒಂದು ಹೊಸ ಕ್ಯಾಲೆಂಡರ್ ಬದಲಾವಣೆ ಅಲ್ಲ. ನಮ್ಮ ಬದುಕಿನ ಹೊಸ ನಿರ್ಣಯ ತೆಗೆದುಕೊಳ್ಳಲೊಂದು ಸುಸಮಯ.

ಅದು ನಮ್ಮ ಹಳೆಯ ನೋವುಗಳನ್ನು ಮರೆಯಲು, ಹೊಸತನ್ನು ಸಂಭ್ರಮಿಸಲು ಕಾರಣ. ಇದು ನಮ್ಮ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಹಾಗು ಇತರರಿಗೆ ಸಂದೇಶಗಳನ್ನು ಕಳುಹಿಸಿ, ನಮ್ಮ ಸಂಬಂಧಗಳನ್ನು ನೆನಪಿಸಲು ಇರುವ ಉತ್ತಮ ಅವಕಾಶ. ನಮ್ಮ ನಡುವಿನ ಎಲ್ಲಾ ವೈಮನಸ್ಸುಗಳನ್ನು ದೂರ ಮಾಡಿ, ಹೊಸ ಸಂಬಂಧದ ಬೆಸುಗೆ ರೂಪಿಸಲು ಅತ್ಯುತ್ತಮ ಸಮಯ. ಶುಭ ನುಡಿದು, ಅವರ ಮನಸ್ಸು ಗೆಲ್ಲಲು ಇರುವ ಅವಕಾಶ. ಆ ಮೂಲಕ ಹೊಸ ವರ್ಷವನ್ನು ನಾವು ಸಾರ್ಥಕವಾಗಿ ಎದುರುಗೊಳ್ಳಬಹುದು.

ಹೊಸ ವರ್ಷದ ನೆನಪಿನಲ್ಲಿ ನಮ್ಮ ವಯಸ್ಸಿನಷ್ಟು ಸಂಖ್ಯೆಯ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡೋಣ.
ಲೇಖನ:ರಾಘವೇಂದ್ರ ಪ್ರಭು ಕರ್ವಾಲು, ಲೇಖಕರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!