Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾಹಿತಿ ಮಾ. ಚಿ. ಕೃಷ್ಣರವರಿಗೆ ನುಡಿನಮನ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಹಿರಿಯ ಸಾಹಿತಿ
, ನಾಟಕಕಾರ‌ ಮತ್ತು ಪತ್ರಕರ್ತ ದಿವಗಂತ ಮಾ.ಚಿ.ಕೃಷ್ಣ. ಅವರಿಗೆ   ನುಡಿನಮನ ಕಾರ್ಯಕ್ರಮ  ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಮಾತನಾಡಿ ಮಾ.ಚಿ.ಕೃಷ್ಣ ಅವರು  ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು.

ಕರ್ನಾಟಕ ರಾಜ್ಯದ ಎಲ್ಲೆಡೆಯಿರುವ ಹಲವಾರು    ಸಾಹಿತಿ ಮತ್ತು  ಕಲಾವಿದರಿಗೆ ಆತ್ಮೀಯ ಒಡನಾಡಿಯಾಗಿದ್ದರು.  ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ  ಸಾಮಾಜಿಕ‌ ನಾಟಕಗಳು ನಿರಂತರವಾಗಿ ನಡೆಯಲು ಕಾರಣಕರ್ತರಾಗಿದ್ದರು.  ನೂರಾರು  ಮಂದಿ ಯುವ ಕಲಾವಿದರನ್ನು  ನಾಟಕ ರಂಗಕ್ಕೆ ಪರಿಚಯಿಸಿದರು. 

Advertisement

ನೂರಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದರು. ಅನೇಕ ಜನ ಹಿರಿಯ ಕಿರಿಯ ಸಾಧಕರಿಗೆ ಪ್ರೋತ್ಸಾಹ ನೀಡುತ್ತಿದ್ದ ಮ.ಚಿ.ಕೃಷ್ಣ ಅವರು, ಹಲವು ಸಾಧಕರ  ಜೀವನ ಚರಿತ್ರೆಗಳನ್ನು ಪುಸ್ತಕ ರೂಪದಲ್ಲಿ ತಂದರು. ಕನ್ನಡ ನಾಡು, ನುಡಿ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿ  ಮುಖಂಡತ್ವ ವಹಿಸಿದ್ದ ಅವರು ಯುವ ಕನ್ನಡಪರ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು ಎಂದರು.

   ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ  ತಾಲ್ಲೂಕಿನ ಹಿರಿಯ ಕನ್ನಡಪರ ಹೋರಾಟಗಾರರಾದ   ತ.ನ.ಪ್ರಭುದೇವ್, ಸಂಜೀವನಾಯಕ್,   ಕೆ.ಮಹಾಲಿಂಗಯ್ಯ,   ಪ್ರೊ.ಕೆ.ಆರ್.ರವಿಕಿರಣ್, ಗಂಗರಾಜ ಶಿರವಾರ, ತೂಬಗೆರೆ ಷರೀಫ್, ಟಿ.ಜಿ.ಮಂಜುನಾಥ್, ಚೌಡರಾಜ್,  ಎಂ.ಸಿ.ಮಂಜುನಾಥ್, ಜಿ.ಸುರೇಶ್, ಕಂಟನುಕುಂಟೆ ಅಶ್ವಥ್,  ವೆಂಕಟರಾಜು, ಅಣ್ಷಯ್ಯ,  ಕನ್ನಡ ಜಾಗೃತ ಪರಿಷತ್ತು ಮಾಜಿ ಅಧ್ಯಕ್ಷ   ಬಿ.ಜಿ.ಅಮರನಾಥ್, ಕಾರ್ಯದರ್ಶಿ  ಡಿ.ಪಿ.ಆಂಜನೇಯ,

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್,  ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ನಾಗರತ್ನಮ್ಮ, ಪುನೀತ್, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಂಎಲ್‌ಸಿ ಚುನಾವಣೆಯಲ್ಲಿ ಎ. ಪಿ. ರಂಗನಾಥ್ ಗೆಲುವಿಗೆ ಮೈತ್ರಿ ಪಕ್ಷಗಳು ಶ್ರಮಿಸಬೇಕಿದೆ:ನಿಖಿಲ್ ಕುಮಾರಸ್ವಾಮಿಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಓಗಳು ತಪ್ಪು ಮಾಡಿದರೆ ಕಠಿಣ ಕ್ರಮ: ಕೆ. ಎನ್. ಅನುರಾಧಸಾಹಿತಿ ಮಾ. ಚಿ. ಕೃಷ್ಣರವರಿಗೆ ನುಡಿನಮನ​ಅಕ್ಟೋಬರ್ 3 ರಂದು ಹಿರಿಯೂರಿನಲ್ಲಿ ಜೆಡಿಎಸ್‌ನಿಂದ 'ರೈತ ಸ್ವಾಭಿಮಾನ ಯಾತ್ರೆ' ನಿಖಿಲ್ ಭಾಗಿಖೋಟಾನೋಟು ಜಾಲ ಭೇದಿಸಿದ ಪೊಲೀಸರು: 21 ಲಕ್ಷ ರೂ. ನಕಲಿ ನೋಟುಗಳು ಜಪ್ತಿ, 7 ಜನರ ಬಂಧನಮತದಾರರ ಪಟ್ಟಿಯಿಂದ 50-60 ಲಕ್ಷ ಹೆಸರು ಕೈಬಿಡಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ: ಸಿಎಂ ಶಿವಕುಮಾರ್ಸಾಲು ಸಾಲು ರಜೆ: ಬಿಎಂಟಿಸಿಯಿಂದ 150 ವಿಶೇಷ ಬಸ್‌ಗಳ ಸಂಚಾರ ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ವರದಿ ಬಿಡುಗಡೆ: ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ವೇಣುಗೋಪಾಲ್ ಮಹತ್ವದ ಸಭೆಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ದೊಡ್ಡ ವಂಚನೆ: ಸಮಗ್ರ ತನಿಖೆಗೆ ಆಗ್ರಹ