Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಅವತಾರ ವರಿಷ್ಠ ಶ್ರೀರಾಮಕೃಷ್ಣರು: ಮಾತಾಜೀ ಚೈತನ್ಯಮಯೀ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅವತಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಅವತಾರವಾದ  ಶ್ರೀರಾಮಕೃಷ್ಣರು ಜಗತ್ತಿನ ಜನರ ಮೇಲಿನ ಕರುಣೆಯಿಂದ ಭೂಮಿಗೆ ಅವತಾರಿಸಿ ಬಂದು ಭವದ ದುಃಖವನ್ನು ಪರಿಹರಿಸಿದವರು ಎಂದು ಹಿರಿಯೂರಿನ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಚೈತನ್ಯಮಯೀ ತಿಳಿಸಿದರು.


ನಗರದ ವಾಲ್ಮೀಕಿ ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ "ಶ್ರೀರಾಮಕೃಷ್ಣ ಪರಮಹಂಸರ 191ನೇ ಜಯಂತ್ಯುತ್ಸವ"ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಭಜನೆ ಮತ್ತು ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಅವತಾರ ವರಿಷ್ಠ ಶ್ರೀರಾಮಕೃಷ್ಣ" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.


ಜಗತ್ತಿನ ಜನರ ಉದ್ಧಾರಕ್ಕಾಗಿ ಲೋಕಕಲ್ಯಾಣದ ಉದ್ದೇಶದಿಂದ ಪೂರ್ಣಾವತಾರರಾಗಿ ಹುಟ್ಟಿ ಬಂದ ಶ್ರೀರಾಮಕೃಷ್ಣರು ಅಂದಿನ ಬಂಗಾಳದ ಪ್ರಸಿದ್ಧ ಪಂಡಿತರಿಂದ ಅವತಾರ ಪುರುಷರೆಂದು ಕರೆಯಲ್ಪಟ್ಟವರು.ಅಲ್ಲದೆ ಪ್ರಿಯಶಿಷ್ಯ ಸ್ವಾಮಿ ವಿವೇಕಾನಂದರಿಂದ "ಅವತಾರ ವರಿಷ್ಠ" ಎಂದು ಸ್ತುತಿ ಮಾಡಲ್ಪಟ್ಟವರು ಶ್ರೀರಾಮಕೃಷ್ಣರು ಎಂದು ಅವತಾರ ವರಿಷ್ಠ ಎಂಬುದಕ್ಕೆ  ಅನೇಕ ಘಟನೆಗಳನ್ನು ಹೇಳಿದರು.

"ಸ್ವಾಮಿ ವಿವೇಕಾನಂದರ ಗುರು" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು  ಶ್ರೀರಾಮಕೃಷ್ಣರು ಸ್ವಾಮಿ ವಿವೇಕಾನಂದರ ಕುರಿತು ಹೇಳುತ್ತಾರೆ, ಅವನಲ್ಲಿ ಶಕ್ತಿಯ ಹದಿನೆಂಟು ಗುಣಗಳು ಪೂರ್ಣ ರೂಪದಲ್ಲಿ ಪ್ರಕಟಗೊಂಡಿವೆ.ಅವನು ಸಾಕ್ಷಾತ್ ನರ ನಾರಾಯಣ,ಶಿವ ಸ್ವರೂಪ, ಜ್ಞಾನಸೂರ್ಯ, ಧ್ಯಾನಸಿದ್ಧ   ಎಂದು  ಹೊಗಳಿಸಲ್ಟಟವರು, ಸ್ವಾಮಿ ವಿವೇಕಾನಂದರು ಅಧಿಕೃತವಾಗಿ ಶ್ರೀರಾಮಕೃಷ್ಣ ಪರಮಹಂಸರ ಕುರಿತಾಗಿ ಯಾವುದೇ ಜೀವನ  ಚರಿತ್ರೆ ಬರೆಯದಿದ್ದರೂ ಅವರೇ ಬರೆದ "ಖಂಡನ ಭವ ಬಂಧನ" ಆರತಿ ಸ್ತೋತ್ರ ಶ್ರೀರಾಮಕೃಷ್ಣರ ಜೀವನಕ್ಕೆ ಬರೆದ ಭಾಷ್ಯದಂತಿದೆ.ಈ ಸ್ತೋತ್ರ ಶ್ರೀರಾಮಕೃಷ್ಣರ ಸಮಗ್ರ ಜೀವನವನ್ನು ಹಾಡಿನ ರೂಪದಲ್ಲಿ ವರ್ಣನೆ ಮಾಡುತ್ತದೆ‌ ಎಂದರು.


ಕಾರ್ಯಕ್ರಮದ ಆರಂಭದಲ್ಲಿ ಬೆಂಗಳೂರಿನ ಶ್ರೀಶಾರದಾದೇವಿ ಪ್ರಗತಿ ಮಂದಿರದ ಕುಮಾರಿ ಚಿನ್ಮಯಿ ರಾವ್, ರಾಘವೇಂದ್ರ ರಾವ್, ಅನ್ನಪೂರ್ಣ, ಅನಘಾ, ಸೌಮ್ಯಶ್ರೀ, ಭಾರ್ಗವ ಕೃಷ್ಣ ಅವರಿಂದ ವಿಶೇಷ "ಶ್ರೀರಾಮಕೃಷ್ಣ ಗಾನಸುಧೆ" ಅದ್ಭುತ ಭಜನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ, ಶ್ರೀಶಾರದಾಶ್ರಮದಿಂದ ಪುಸ್ತಕ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಎಂ.ಗೀತಾ ನಾಗರಾಜ್ ಸ್ವಾಗತಿಸಿದರು. ಟಿ.ಎಂ.ವಿಜಯಕಲಾ ಗುರು ನಿರೂಪಸಿದರು. ಯತೀಶ್ ಎಂ ಸಿದ್ದಾಪುರ ವಂದಿಸಿದರು.


ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್, ಮುಕುಂದ, ವಿಶ್ವಾರಾಧ್ಯ, ವೆಂಕಟಸುಬ್ಬಣ್ಣ, ನಾಗಶಯನಾ ಗೌತಮ್, ರಾಧಮ್ಮ , ರವೀಂದ್ರನಾಥ್, ರಾಮಚಂದ್ರಪ್ಪ, ಎಚ್ ಲಕ್ಷ್ಮೀದೇವಮ್ಮ , ಎಂ ಗೀತಾ ನಾಗರಾಜ್, ಅನುಸೂಯ ರಾಘವೇಂದ್ರ,ಟಿ.ಎಂ.ವಿಜಯಕಲಾ, ಯತೀಶ್ ಎಂ ಸಿದ್ದಾಪುರ,ಸುನೀತಾ, ಪಂಕಜಾ, ಸರಸ್ವತಿ, ಗೀತಾ ಪ್ರಕಾಶ್,ಜಿ ಯಶೋಧಾ ಪ್ರಕಾಶ್, ಜಗದಂಬಾ,

ಸಂತೋಷ್, ಹೃತಿಕ್, ಮಾನ್ಯ, ಚೇತನ್, ಭಾಗ್ಯಲಕ್ಷ್ಮೀ,ವಾಣಿ, ಬಳ್ಳಾರಿ ರಶ್ಮಿ,ಶಾರದಾ, ಗೀತಾ ವೆಂಕಟೇಶರೆಡ್ಡಿ, ಬಿ.ಸಿ.ವೀಣಾ, ಸೌಮ್ಯ ಪ್ರಸಾದ್,ಪಿ.ಎಸ್.ಮಾಣಿಕ್ಯ, ಹೂವಿನ ಲಕ್ಷ್ಮೀದೇವಿ, ಮಹಾದೇವಿ, ಗೀತಾ ಸುಂದರೇಶ್ ದೀಕ್ಷಿತ್, ವಿಶಾಲಾಕ್ಷಿ,ಗಿರಿಜಾ, ಗಂಗಾಂಬಿಕೆ, ತಿಪ್ಪಮ್ಮ,ಸಿ.ಎಸ್.ಭಾರತಮ್ಮ, ಪ್ರಮೀಳಾ, ನಾಗರತ್ನಮ್ಮ, ಲೋಕಮಾನ್ಯ, ಸರ್ವಮಂಗಳಾ ಶಿವಣ್ಣ,ಮೋಹಿನಿ, ಶುಭ,ಚೆನ್ನಕೇಶವ,ಸುಮನಾ, ನಾಗೇಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!