ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಅವರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
ಹೆಸರು: ರಾಜು ಪಿ
ವಯಸ್ಸು: 55 ವರ್ಷ
ಎತ್ತರ: 6.0 ಅಡಿ
ಭಾಷೆಗಳು: ಕನ್ನಡ, ತಮಿಳು, ತೆಲುಗು, ಹಿಂದಿ
ದೈಹಿಕ ಚಹರೆ: ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಎಡಕಾಲಿಗೆ ಸರ್ಜಿಕಲ್ ಪಟ್ಟಿ ಕಟ್ಟಲಾಗಿದೆ (ಸ್ವಲ್ಪ ಕುಂಟುತ್ತಾರೆ).
ಧರಿಸಿದ್ದ ವಸ್ತ್ರ: ಕೇಸರಿ ಬಣ್ಣದ ಚೌಕಳಿ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್.
ಕಾಣೆಯಾದ ಸಂದರ್ಭ:
ದಿನಾಂಕ 03/09/2026 ರಂದು ಬೆಳಿಗ್ಗೆ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದ ಇವರು, ನಂತರ ಮನೆಗೆ ಹಿಂತಿರುಗಿರುವುದಿಲ್ಲ.
ಈ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ ದಯವಿಟ್ಟು ಹಿರಿಯೂರು ನಗರ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟವರನ್ನು ತಕ್ಷಣವೇ ಸಂಪರ್ಕಿಸಿ.




