ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದಸರಾ ಸಿಎಂ ಕಪ್-2026ರ 'ಆರ್ಟಿಸ್ಟಿಕ್ ಪೇರ್ ಯೋಗ' ವಿಭಾಗದ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಸಾಧಕರು ದ್ವಿತೀಯ ಸ್ಥಾನ ಪಡೆದು 'ಬೆಳ್ಳಿ ಪದಕ' ತಮ್ಮದಾಗಿಸಿಕೊಂಡಿದ್ದಾರೆ.
ನಿಸರ್ಗ ಯೋಗ ಕೇಂದ್ರದ ಅಭ್ಯರ್ಥಿಗಳಾದ ಕೆ.ಎನ್. ವಿಶ್ವನಾಥ್ ಹಾಗೂ ಎ. ಹಿತೇಶ್ ಅವರು ಜೋಡಿಯಾಗಿ ಕಠಿಣ ಆಸನಗಳನ್ನು ಪ್ರದರ್ಶಿಸುವ ಮೂಲಕ ತೀರ್ಪುಗಾರರ ಮೆಚ್ಚುಗೆ ಗಳಿಸಿ ಈ ಅದ್ಭುತ ಸಾಧನೆ ಮಾಡಿದ್ದಾರೆ.
ಯೋಗ ಪಟುಗಳಿಗೆ ಅಭಿನಂದನೆ: ದಸರಾ ಕ್ರೀಡಾಕೂಟದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಬೆಳ್ಳಿ ಪದಕ ಗೆದ್ದು ದೊಡ್ಡಬಳ್ಳಾಪುರ ತಾಲೂಕಿಗೆ ಕೀರ್ತಿ ತಂದ ಯೋಗ ಪಟುಗಳನ್ನು ನಿಸರ್ಗ ಯೋಗ ಕೇಂದ್ರದ ಗೌರವ ಕಾರ್ಯದರ್ಶಿ ಎ. ನಟರಾಜ್ (ಯೋಗ), ಅಧ್ಯಕ್ಷೆ ಶ್ರೀಮತಿ ಎಂ.ಎ ಲಕ್ಷ್ಮಿ ರವೀಂದ್ರ, ಖಜಾಂಚಿ ಕೆ.ಆರ್. ಶಾಮ ಸುಂದರ್ ಹಾಗೂ ಕೇಂದ್ರದ ಸಮಸ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮುಕ್ತಕಂಠದಿಂದ ಅಭಿನಂದಿಸಿ, ಮುಂದಿನ ಕ್ರೀಡಾ ಜೀವನಕ್ಕೆ ಶುಭ ಹಾರೈಸಿದ್ದಾರೆ.



