Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೆವಿಕೆಗೆ ರಾಷ್ಟ್ರೀಯ ಪ್ರಯೋಗಾಲಯದ ಎನ್ಎಬಿಎಲ್ ಮಾನ್ಯತೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ  ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಪ್ರಯೋಗಾಲಯಗಳ ಸತ್ಯಾಪನೆ ಮತ್ತು ಮಾನ್ಯತಾ ಮಂಡಳಿ (ಎನ್‌ಎಬಿಎಲ್)ಯ ಮಾನ್ಯತೆ ದೊರೆತಿದೆ.

ಪ್ರಯೋಗಾಲಯದ ತಾಂತ್ರಿಕ ಸಾಮರ್ಥ್ಯ ಹಾಗೂ ನಿಗದಿತ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಪರಿಗಣಿಸಿ ಮಾನ್ಯತೆ ದೊರೆತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಜಿ.ಈಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಈ ಬಗ್ಗೆ ಮಾತನಾಡಿ ಮಣ್ಣು ಮತ್ತು ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಆಧಾರದ ಮೇಲೆ ಸೂಕ್ತ ನಿರ್ವಹಣಾ ಕ್ರಮ ಕೊಳ್ಳುವುದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ. ಹಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ, ಮಣ್ಣಿನ ರಸಸಾರ (ಪಿ.ಎಚ್), ವಿದ್ಯುತ್‌ ವಾಹಕತೆ ಸೇರಿದಂತೆ ಸುಮಾರು 16 ಪ್ರಮುಖ ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದರಿಂದ ಬೆಳೆಗೆ ಅಗತ್ಯವಾದ ಪೋಷಕಾಂಶಗಳ ‌ ನಿರ್ವಹಣಾ ಕ್ರಮ ರೂಪಿಸಲು ನೆರವಾಗುತ್ತದೆ.

ನೀರಿನ ಪಿ.ಎಚ್‌, ವಿದ್ಯುತ್‌ ವಾಹಕತೆ ಸೇರಿದಂತೆ ಸುಮಾರು 12 ಪ್ರಮುಖ ಗುಣಲಕ್ಷಣಗಳನ್ನು ವಿಶ್ಲೇಷಿಸುವುದರಿಂದ ನೀರಾವರಿಗೆ ನೀರು ಸೂಕ್ತವಾಗಿದೆಯೇ ಹಾಗೂ ಅದರಲ್ಲಿರುವ ವಿವಿಧ ರಾಸಾಯನಿಕ ಗುಣಲಕ್ಷಣಗಳು ಕೃಷಿಯ ಮೇಲೆ ಬೀರುವ ಪರಿಣಾಮವನ್ನು ತಿಳಿಯಲು ಸಹಕಾರಿಯಾಗಿದೆ.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯದ ಮೂಲಕ ಇದುವರೆಗೆ ರೈತರಿಂದ ಸಂಗ್ರಹಿಸಲಾದ 10,825 ಮಣ್ಣು ಮಾದರಿ ಹಾಗೂ 7,939 ನೀರಿನ ಮಾದರಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ ಎಂದು ತಿಳಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋಮಾಳ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ನೀಡಿ.. ಬಡ ನಿರಾಶ್ರಿತರಿಂದ ಉಗ್ರ ಹೋರಾಟದ ಎಚ್ಚರಿಕೆ....!ಕೆವಿಕೆಗೆ ರಾಷ್ಟ್ರೀಯ ಪ್ರಯೋಗಾಲಯದ ಎನ್ಎಬಿಎಲ್ ಮಾನ್ಯತೆಚಿನ್ನಾಭರಣ ಕಳ್ಳತನ ಆರೋಪಿ ಬಂಧನ... ಬಂದಿತನಿಂದ 25ಲಕ್ಷ ಮೌಲ್ಯದ ಚಿನ್ನಾಭರಣ ವಶಸಮಾಜಮುಖಿ ಕಾರ್ಯ ಮಾಡುತ್ತಿರುವ ಜಯಂಟ್ಸ್ ಕೇರ್ ಫೌಂಡೇಶನ್ ಬಿಗ್ ಬಾಸ್ ಸೀಸನ್-13: ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಲ್ಲೇ ಅಬ್ಬರಿಸಿದ 'ಘಾಟಿ ಗಾನವಿ'!ಭೀಕರ ಉಗ್ರರ ಸಂಚು ಭೇದಿಸಿದ ರಾಜ್ಯ ಪೊಲೀಸರು: ಪ್ರಮುಖ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್‌!ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆಬಿಜೆಪಿಯವರದ್ದು ಕಪಟ ನಾಟಕ; ಕೇಂದ್ರಕ್ಕೆ ಮನವಿ ಸಲ್ಲಿಸಲು ಬಾರದಿದ್ದರೆ ರೈತರ ಪರ ನಾವೇ ಕ್ರಮ: ಡಿ.ಕೆ. ಶಿವಕುಮಾರ್ಸಿಎಂ ಆಗುವ ಆಸೆ ಇದೆ: ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಮಾತುಗಳು! ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಸ್ವಂತ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕೇಂದ್ರ ಸಚಿವ