Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿತ್ರದುರ್ಗದಲ್ಲಿ ಅ.13 ರಂದು ನಾಡಪ್ರಭು ಮದಕರಿ ನಾಯಕ ಜಯಂತೋತ್ಸವ, ನಟ ಕಿಚ್ಚ ಸುದೀಪ್ ಭಾಗಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
​ನಾಡಪ್ರಭು ರಾಜವೀರ ಮದಕರಿ ನಾಯಕ ಜಯಂತಿ 2026ರ ಅಂಗವಾಗಿ ನೀಡಲಾಗುವ 'ರಾಜವೀರ ಮದಕರಿ ನಾಯಕ ಪ್ರಶಸ್ತಿ'ಯನ್ನು ಈ ವರ್ಷದ ಸಾಹಿತಿಗಳಾದ ಬಿ.ಎಲ್. ವೇಣು, ಡಾ. ಲಕ್ಷ್ಮಣ ತಿಲಗಾವಿ ಹಾಗೂ ಭಾರತಿ ವಿಷ್ಣುವರ್ಧನ್ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ಕಾರ್ಯಾಧ್ಯಕ್ಷ ಶ್ರೀನಿವಾಸ ನಾಯಕ ತಿಳಿಸಿದ್ದಾರೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,   ​

​ಪ್ರಶಸ್ತಿ ವಿಜೇತರಾದ ಬಿ.ಎಲ್. ವೇಣು, ಡಾ. ಲಕ್ಷ್ಮಣ ತಿಲಗಾವಿ ಮತ್ತು ಭಾರತಿ ವಿಷ್ಣುವರ್ಧನ್ ಇವರಿಗೆ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು. 
​ಚಿತ್ರದುರ್ಗದ ಕೋಟೆನಾಡಿನಲ್ಲಿ ಈ ವರ್ಷವೂ ಕೂಡ ನಾಡಪ್ರಭು ರಾಜವೀರ ಮದಕರಿ ನಾಯಕ ಜಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ
, ಅರ್ಥಗರ್ಭಿತವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ತಿಳಿಸಿದ್ದಾರೆ.

Advertisement

​ಇದೇ ತಿಂಗಳು ಅಕ್ಟೋಬರ್ 13 ರಂದು ಮಂಗಳವಾರ ಬೆಳಿಗ್ಗೆ 10:30ಕ್ಕೆ ರಾಜವೀರ ಮದಕರಿ ನಾಯಕರೂ ಸೇರಿದಂತೆ ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸರು, ಬಸವೇಶ್ವರರು, ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀಕೃಷ್ಣ ಚಿತ್ರದುರ್ಗದ ಎಲ್ಲಾ ಮಹಾತ್ಮರ ಪ್ರತಿಮೆಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ 11:00 ಗಂಟೆಗೆ ಕನಕ ವೃತ್ತದಿಂದ ವಿಶೇಷವಾದ ವರ್ಣರಂಜಿತ ಮೆರವಣಿಗೆ ಆರಂಭವಾಗಲಿದೆ. ರಾಜ್ಯದ ವಿವಿಧ ಕಡೆಯಿಂದ ಆಗಮಿಸುವ ಜಾನಪದ ಕಲಾತಂಡಗಳು ಹಾಗೂ ಧ್ವನಿವರ್ಧಕಗಳ ಮೂಲಕ ಕಾರ್ಯಕ್ರಮಕ್ಕೆ ಕಳೆ ಬರಲಿದೆ. ಮಧ್ಯಾಹ್ನ 1:00 ಗಂಟೆಯಿಂದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

​ವೇದಿಕೆ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೋಟೆನಾಡಿನ ಕಣ್ಮಣಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಶೇಷ ಆತಿಥಿಯಾಗಿ ಭಾಗವಹಿಸಲಿದ್ದು, ಅವರಿಗೆ ವಿಶೇಷ ಗೌರವ ಸನ್ಮಾನವನ್ನು ನೆರವೇರಿಸಲಾಗುತ್ತದೆ.

ಈ ವರ್ಷದಿಂದ ಸಾಹಿತಿಗಳಾದ ಬಿ.ಎಲ್. ವೇಣು, ಡಾ. ಲಕ್ಷ್ಮಣ್ ತಿಲಕಾವಿ ಅವರಿಗೆ ಹಾಗೂ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಗೆ 'ನಾಡಪ್ರಭು ರಾಜವೀರ ಮದಕರಿ ನಾಯಕ ಜಯೋತ್ಸವ-2026' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಸಂಜೆ 6:30ರ ಸುಮಾರಿಗೆ ಮದಕರಿ ನಾಯಕನ ಪುತ್ಥಳಿ ಸುತ್ತಲೂ ತಾತ್ಕಾಲಿಕ ಕೋಟೆಯನ್ನು ಡಿಜಿಟಲ್ ಸ್ವರೂಪದಲ್ಲಿ ನಿರ್ಮಿಸಿ, ಲೇಸರ್ ಶೋ ಮತ್ತು ಪಟಾಕಿ ಸಿಡಿಸುವ ಮೂಲಕ ಮೈಸೂರು ದಸರಾ ಮಾದರಿಯಲ್ಲಿ ಅದ್ಧೂರಿ ಪ್ರದರ್ಶನ ಏರ್ಪಡಿಸಲಾಗಿದೆ.

​ಕೋಟೆನಾಡಿನ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರು ಒಟ್ಟಾಗಿ ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಸಮಿತಿಯು ಮನವಿ ಮಾಡಿದೆ.

​​ಐತಿಹಾಸಿಕ ಕೋಟೆ ನಿರ್ಮಾಣ ಮತ್ತು ಡಿಜಿಟಲ್ ಸ್ವರೂಪ: ಸಂಜೆ 6:30ಕ್ಕೆ ಮದಕರಿ ನಾಯಕನ ಪುತ್ಥಳಿಯ ಸುತ್ತಲೂ ತಾತ್ಕಾಲಿಕ ಕೋಟೆಯನ್ನು ಇತಿಹಾಸ ಮರುಕಳಿಸುವ ರೀತಿಯಲ್ಲಿ ಡಿಜಿಟಲ್ ಸ್ವರೂಪ ಹಾಗೂ ಲೇಸರ್ ಶೋ ಮೂಲಕ ನಿರ್ಮಿಸಿ ಪ್ರದರ್ಶಿಸಲಾಗುತ್ತಿದೆ.  ​

 ಈ ಅದ್ಭುತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. 

​ಸಮಿತಿಯ ಮುಖಂಡತ್ವ: ಸಮಿತಿ ಅಧ್ಯಕ್ಷರಾದ ತಿಪ್ಪಮ್ಮ ವೆಂಕಟೇಶ್ ಅವರ ಕುಟುಂಬದಿಂದ ಮೊದಲಿಗೆ ಪುಷ್ಪಾರ್ಚನೆ ನೆರವೇರಲಿದೆ. 
​ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ಗೌರವಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ
, ಅಧ್ಯಕ್ಷ ಬಿ. ವೆಂಕಟೇಶ್‌, ಖಜಾಂಚಿ ಬಿ.ಮಂಜುನಾಥ್, ಎ.ರವಿ ಮದಕರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಸ್, ಲಕ್ಷ್ಮಿಸಾಗರ ರಾಜಣ್ಣ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ, ಆತ್ಮವಿಶ್ವಾಸ ಬೆಳೆಸುವುದೇ ಕ್ರೀಡೆಯ ಉದ್ದೇಶ ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:ಮನಸ್ಸಿನ ಆರೋಗ್ಯಕ್ಕೆ ಅರಿವೇ ಮೊದಲ ಚಿಕಿತ್ಸೆ:ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ  ದೃಷ್ಟಿಕೋನ ಚಿಂತನೆ ಕಾರ್ಯಕ್ರಮ ಆಯೋಜನೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಸರ್ಕಾರದಿಂದ ಆಹ್ವಾನಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಶೀಘ್ರ ಬಿಡುಗಡೆಗೆ ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ ಶಿವಲಿಂಗಪ್ಪಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿರಾಹುಲ್ ಗಾಂಧಿ ಪ್ರಧಾನಿಯಾಗಲು ಹುಚ್ಚರಂತೆ ಓಡಾಡುತ್ತಿದ್ದಾರೆ: ಸಂಸದ ಗೋವಿಂದ್ ಕಾರಜೋಳ ವಾಗ್ದಾಳಿಅನುಭವ ಮತ್ತು ಜ್ಞಾನ ಎರಡೂ ನನ್ನಲ್ಲಿಲ್ಲ- ಸಂಸದ ಗೋವಿಂದ್ ಕಾರಜೋಳ