ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಭೆಯಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಚಳ್ಳಕೆರೆ ತಾಲೂಕ್ ಘಟಕಕ್ಕೆ ಅಧ್ಯಕ್ಷರಾಗಿ ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಗರಾಜ್ ಬೆಳಗಟ್ಟ ಪ್ರಧಾನ ಕಾರ್ಯದರ್ಶಿಯಾಗಿ ಎನ್. ಲೋಕೇಶ್ ಖಜಾಂಚಿಯಾಗಿ ನರಸಿಂಹಪ್ಪ ಕಾರ್ಯದರ್ಶಿಯಾಗಿ ಎಲ್. ಯಶವಂತ್ ನಾಯ್ಕ್ ಉಪಾಧ್ಯಕ್ಷರಾಗಿ ಬಿ. ಶಾಂತಕುಮಾರಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸಭೆಯಲ್ಲಿ ಪ್ರಾಚಾರ್ಯ ಕುಮಾರಸ್ವಾಮಿ ಭೀಮರೆಡ್ಡಿ ಶ್ರೀಮಂತ ಕುಮಾರ್ ಚಂದ್ರಣ್ಣ ಸೋಮಶೇಖರ್ ಎಸ್. ಉಮೇಶ್ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಎಂ.ಶ್ರೀನಿವಾಸ್ ಉಪನ್ಯಾಸಕರುಗಳಾದ ಹೆಚ್.ಆರ್ .ಜಬಿವುಲ್ಲಾ ಮಲ್ಲೇಶ್ ಮಂಜುನಾಥ್ ಸಹೀದ ಬೇಗಂ ಹೀನ ಕೌಸರ್ ಡಾ.ರೇಖಾ ಆಶಾ ರಾಣಿ ಲತಾ ರಾಣಿ ವೀರಣ್ಣ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ ಅಭಿನಂದಿಸಿದ್ದಾರೆ.



