LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮೂರ ಕೆರೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮೂರ ಕೆರೆ
ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ.
ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು
, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ.

ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು.

ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು.

ನೀತಿ: ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ.
ನೀತಿ ಪಾಠ
: ತೇಜಸ್, 7ನೇ ತರಗತಿ, ಅನೇಕಾಮ್ ಶಾಲೆ, ಬೆಂಗಳೂರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST