Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜೀವಸಂಕುಲ ಉಳಿವಿಗೆ ಪ್ರಕೃತಿದೊಡ್ಡ ಶಕ್ತಿ-ಎಸ್.ಬಸವರಾಜು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೀವಸಂಕುಲದ ಉಳಿವಿಗೆ ಪ್ರಕೃತಿದೊಡ್ಡ ಶಕ್ತಿಯಾಗಿದೆ ಎಂದು ಡಯಟ್‌ನ ಮಿಷನ್ ಪ್ರಕೃತಿ ಜಿಲ್ಲಾ ನೋಡಲ್‌ ಅಧಿಕಾರಿ ಎಸ್.ಬಸವರಾಜು ಹೇಳಿದರು.

ನಗರದ ಕವಾಡಿಗರಹಟ್ಟಿ ಪಿಎಂಶ್ರೀ ಶಾಲೆಗೆ ಭೇಟಿ ನೀಡಿ ಮಿಷನ್ ಪ್ರಕೃತಿ ಕಾರ್ಯಕ್ರಮ ಅನುಷ್ಟಾನ ಕುರಿತು ಮಾಹಿತಿ ನೀಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ.

Advertisement

ಅಂತರ್ಜಲ ಕಡಿಮೆಯಾಗುತ್ತಿದ್ದು ಶುದ್ಧ ಗಾಳಿ ಅಶುದ್ಧವಾಗುತ್ತಿದೆ. ನೀರು ಮಲಿನವಾಗುತ್ತಿದೆ. ಭವಿಷ್ಯದ ಪೀಳಿಗೆಗೆ ಶುದ್ಧ ಆಹಾರ, ಗಾಳಿ, ನೀರು ಸುಂದರ ಪರಿಸರ ಉಳಿಸುವಲ್ಲಿ ಜಾಗೃತಿ ಮೂಡಿಸುವುದುಅಗತ್ಯವಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಜೀವಸಂಕುಲ, ಜೀವ ವೈವಿಧ್ಯತೆ, ಪರಿಸರ ಪ್ರಜ್ಷೆ ಬೆಳೆಸಲು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಮಿಷನ್ ಪ್ರಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿತ್ತದುರ್ಗ ತಾಲೂಕಿನಿಂದ ೧೧ ಶಾಲೆಗಳು ಆಯ್ಕೆಯಾಗಿದ್ದು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ನಿರ್ವಹಿಸುವ ಥೀಮ್‌ ಆಧಾರಿತ ಪ್ರಾಯೋಗಿಕ ಚಟುವಟಿಕೆ ಕಾರ್ಯಕ್ರಮವಾಗಿದೆ.

ಶಾಲಾ ಹಂತದಲ್ಲಿ ಗ್ರೀನ್‌ ಕ್ಯಾಬಿನೆಟ್ (ಹಸಿರು ಸಂಪುಟ) ರಚಿಸಿಕೊಂಡು ಜೀವ ವೈವಿಧ್ಯ, ನೀರು, ಆಹಾರ, ತ್ಯಾಜ್ಯ ಮತ್ತು ಶಕ್ತಿ ವಿಷಯಗಳ ಥೀಮ್‌ ಕುರಿತು ಕಾರ್ಯಕ್ರಮ ರೂಪಿಸಿ ಹಸಿರು ಸಂಪುಟ, ಜೀವ ವೈವಿಧ್ಯ, ಶಾಲೆ ಮತ್ತು ಸಮುದಾಯದ ಪರಿಶೀಲನೆ, ಅನುಷ್ಟಾನ ಮತ್ತು ವರದಿ ಎಂಬ ೫ ಮೈಲಿಗಲ್ಲುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕಿ ಶಿವಲೀಲ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದಜತೆಗೆ ಸಹಪಠ್ಯ ಚಟವಟಿಕೆಗಳು ಮುಖ್ಯವಾಗಿವೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಮಿಷನ್ ಪ್ರಕೃತಿ ಕಾರ್ಯಕ್ರಮ ಪೂರಕವಾಗಿದೆ. ವಿದ್ಯಾರ್ಥಿಗಳು  ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಶಿಕ್ಷಕರು ಪ್ರೇರಣೆ ನೀಡಬೇಕುಎಂದು ತಿಳಿಸಿದರು.

ಮುಖ್ಯ ಶಿಕ್ಷಕ ರುದ್ರಮುನಿ, ಮಿಷನ್ ಪ್ರಕೃತಿ ಶಾಲಾ ನೋಡಲ್‌ ಅಧಿಕಾರಿ ಡಿ.ಕೆರಾಜಮ್ಮ, ಬಿ.ಪುಟ್ಟಮ್ಮ, ಜೆ.ಶೋಭಾ, ಬಿ.ಎಂ.ಜೀವರತ್ನಮ್ಮ, ಎಸ್.ಸರಸ್ವತಿ ಮತ್ತುಗ್ರೀನ್‌ಕ್ಯಾಬಿನೆಟ್‌ನ ವಿದ್ಯಾರ್ಥಿಗಳು ಇದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಯಲು ಸೀಮೆಗೆ ಭದ್ರೆ ಹೋರಾಟಗಾರರ ಕಿತ್ತಾಟ ಏಕೆ: ಎಂ.ಜಿ ರಂಗಸ್ವಾಮಿ ಪ್ರಶ್ನೆಸ್ವಾಭಿಮಾನಿ ಸಶಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ: ಶಾಂತಾ ಸುರೇಂದ್ರಜೀವಸಂಕುಲ ಉಳಿವಿಗೆ ಪ್ರಕೃತಿದೊಡ್ಡ ಶಕ್ತಿ-ಎಸ್.ಬಸವರಾಜುಜನಸಾಮಾನ್ಯರ ಪ್ರಗತಿಗಾಗಿ ಸರ್ಕಾರದ ಮಹತ್ವದ ಯೋಜನೆಗಳುಕೋಟೆನಾಡಿಗೆ ಹರಿದ ಭದ್ರಾ ನೀರು: ಗೊನೂರು ಕೆರೆಗೆ 'ಮೇಲ್ಭದ್ರಾ' ಸ್ಪರ್ಶ—ರೈತರ ಹರ್ಷ!ಕೆಪಿಎಸ್ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ—ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ!ಸರ್ಕಾರ ‘ಸರಿಯಾದ ದಿಕ್ಕಿನಲ್ಲಿ’ ಸಾಗುತ್ತಿದೆ; ಸಿದ್ದರಾಮಯ್ಯ! ಸಿಎಂ ಡಿ.ಕೆ ಶಿವಕುಮಾರ್‌ಸರ್ಕಾರಕ್ಕೆ 100 ದಿನದ ಸಂಭ್ರಮ: ಹೊಸ ಯೋಜನೆಗಳ ಮಹಾಪೂರ!ಸಚಿವ ಸತೀಶ್ ಜಾರಕಿಹೊಳಿ ಮತ್ತು ಆಪ್ತರ ನಿವಾಸಗಳ ಮೇಲೆ 2ನೇ ದಿನವೂ ಇ.ಡಿ ದಾಳಿ: ಸುದೀರ್ಘ ಪರಿಶೀಲನೆರಾಜ್ಯ ಕಾಂಗ್ರೆಸ್‌ಗೆ ನೂತನ 35 ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿ ಅಧಿಕೃತ ಪಟ್ಟಿ ಬಿಡುಗಡೆ