Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರು ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ: ರೈತರೊಂದಿಗೆ ನೇರ ಸಂವಾದ, ಬರ ವೀಕ್ಷಣೆ

​ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ವಾರ ಹಿರಿಯೂರು ತಾಲೂಕಿಗೆ ಪ್ರವಾಸ ಕೈಗೊಳ್ಳಲಿದ್ದು
, ಬರಪೀಡಿತ ಪ್ರದೇಶಗಳ ರೈತರ ಜಮೀನುಗಳಿಗೆ ನೇರ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಈ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. 

​ಈ ಕುರಿತು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಹಾಗೂ ಹಿರಿಯ ಮುಖಂಡ ಎಂ. ರವೀಂದ್ರಪ್ಪ ಜಂಟಿಯಾಗಿ ಮಾಹಿತಿ ನೀಡಿದ್ದು, ಕಾರ್ಯಕ್ರಮದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. 

Advertisement

​ರೈತರ ಜಮೀನಿಗೆ ಭೇಟಿ: ನಿಖಿಲ್ ಕುಮಾರಸ್ವಾಮಿ ಅವರು ತಾಲೂಕಿನ ಬರಪೀಡಿತ ಕೃಷಿ ಭೂಮಿಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ. 

​ಬೃಹತ್ ಸಂವಾದ ಕಾರ್ಯಕ್ರಮ: ಬರ ವೀಕ್ಷಣೆಯ ನಂತರ ಆಯೋಜಿಸಲಾಗುವ ವಿಶೇಷ ವೇದಿಕೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 3,000ಕ್ಕೂ ಹೆಚ್ಚು ರೈತರು ಹಾಗೂ ಕಾರ್ಯಕರ್ತರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 

​ಪೂರ್ವಭಾವಿ ಸಭೆ: ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಒಂದೆರಡು ದಿನಗಳಲ್ಲಿ ಜೆಡಿಎಸ್ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಕಾರ್ಯಕ್ರಮದ ನಿಖರ ದಿನಾಂಕ ಹಾಗೂ ಸ್ಥಳವನ್ನು ಆಖೈರುಗೊಳಿಸಿ ಅಧಿಕೃತವಾಗಿ ಪ್ರಕಟಿಸಲಾಗುವುದು.

​ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಯುವ ನಾಯಕರ ಈ ಭೇಟಿ ಮತ್ತು ರೈತರೊಂದಿಗಿನ ಸಂವಾದ ಸ್ಥಳೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಸ್ಪೀಟ್ ಅಡ್ಡೆ ಮೇಲೆ ಪೋಲೀಸರ ದಾಳಿ ಐದು ಜನರ ಬಂಧನಕೆವಿಕೆ ವತಿಯಿಂದ ರಾಸುಗಳ ಉಚಿತ ಆರೋಗ್ಯ ಶಿಬಿರರಸ್ತೆ ಒತ್ತುವರಿ ಯತ್ನ: ಗ್ರಾಮಸ್ಥರ ಆಕ್ರೋಶದ ಬಳಿಕ ಕಾಮಗಾರಿ ಸ್ಥಗಿತ40 ಲಕ್ಷ ರೈತರ ಖಾತೆಗೆ ತಲಾ 2,500 ರೂಪಾಯಿ ಪರಿಹಾರ ಜಮಾ ಮಾಡಲು ಸರ್ಕಾರದ ತೀರ್ಮಾನ!ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಕೆಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಹುನ್ನಾರ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಪ್ರಕಾಶ್ ರೈ ಆಗ್ರಹರೈತರಿಗೆ ತಕ್ಷಣವೇ ₹2,500 ಇನ್‌ಪುಟ್ ಸಬ್ಸಿಡಿ - ಡಿಸಿಎಂ ಜಿ.ಪರಮೇಶ್ವರ್ಅನುಕಂಪದ ನೇಮಕಾತಿ ನಿರಂತರ ಸೌಲಭ್ಯ ಪಡೆಯುವ ಹಕ್ಕಲ್ಲ: ಹೈಕೋರ್ಟ್ ಮಹತ್ವದ ತೀರ್ಪುಕೂಡಲೇ ರೈತರ ಸಾಲ ಮನ್ನಾ ಮಾಡಲಿ: ವಿಪಕ್ಷ ನಾಯಕ ಅಶೋಕ್ ಆಗ್ರಹನಂದಿನಿ ಹಾಲಿನ ದರ ಶೀಘ್ರದಲ್ಲೇ ಏರಿಕೆ ಸಾಧ್ಯತೆ: ಪ್ರಸ್ತಾವನೆ ಸಲ್ಲಿಸುವಂತೆ ಕೆಎಂಎಫ್‌ಗೆ ಡಿಕೆ ಶಿವಕುಮಾರ್ ಸೂಚನೆ!