Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಅಹಿಂಸೆ, ಸತ್ಯಾಗ್ರಹದ ದಾರಿಯಲ್ಲಿ ಸ್ವಾತಂತ್ರ್ಯ ತಂದು ಕೊಟ್ಟ ಪಿತಾಮಹ

ಚಂದ್ರವಳ್ಳಿ ನ್ಯೂಸ್, ತುಮಕೂರು:
ಸತ್ಯ, ಅಹಿಂಸೆ, ಸತ್ಯಾಗ್ರಹದ ದಾರಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಜಿಯವರು.
 ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನವಾದ ಜನವರಿ 30ರ ಇಂದು ಅವರ ಮೌಲ್ಯಾಧಾರಿತ ವಿಚಾರಗಳನ್ನು ಸ್ಮರಿಸಿ ನಮಿಸುತ್ತೇನೆ. ಮಹಾತ್ಮ ಗಾಂಧೀಜಿ ಅವರು ಗುಜರಾತಿನ ಪೋರಬಂದರಿನಲ್ಲೀ ಅಕ್ಟೋಬರ್ 2 ರಂದು ಜನಿಸಿದ್ದರು. ಗಾಂಧೀಜಿ ಅವರು ಕಾನೂನು ವಿಭಾಗದ ಉನ್ನತ ಶಿಕ್ಷಣದ  ಪದವಿಯನ್ನು ಇಂಗ್ಲೇಂಡ್ ದೇಶದ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಡೆದು  ಭಾರತಕ್ಕೆ ಹಿಂದಿರುಗಿದರು.

ಭಾರತ ದೇಶದ ಆಡಳಿತ ಬ್ರಿಟಿಷ್ ಆಳ್ವಿಕೆಯು ಅಧೀನದಲ್ಲಿತ್ತು, ಆ ಸಮಯದಲ್ಲಿ ಗಾಂಧೀಜಿ ಅವರ ಮುಖಂಡತ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಆಳ್ವಿಕೆಯನ್ನು ದೇಶದಿಂದ ಮುಕ್ತಾ ಗೊಳಿಸುವ ಸಲುವಾಗಿ ದೇಶದ ಜನಶಕ್ತಿಯನ್ನು ಸಂಘಟಿಸಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಗಾಂಧೀಜಿ ಅವರ ಹೋರಾಟದ ತತ್ವ ಸಿದ್ದಾಂತಗಳು ಶಾಂತಿ, ಅಹಿಂಸೆ , ಪಾದಯಾತ್ರೆ , ಇದರೊಂದಿಗೆ ಉಪವಾಸ ಸತ್ಯಾಗ್ರಹ ಈ ಹೋರಾಟಗಳ ಮೂಲಕ ಗಾಂಧಿ ಅವರು ವಿಶ್ವಮಟ್ಟದ ನಾಯಕರಾಗಿ ಗುರುತ್ತಿಸಿಕೊಂಡಿದರು. ಸ್ವತಂತ್ರ ಸಂಗ್ರಾಮದಲ್ಲಿ  ಬ್ರಿಟಿಷ್ ಸರ್ಕಾರ ಗಾಂಧೀಜಿಯವರನ್ನು  ಹಲವಾರು ಬಾರಿ ಬಂಧನದಲ್ಲಿ ಇರಿಸಿದ್ದರು.

ಗಾಂಧೀಜಿಯವರ ಮುಂದಾಳತ್ವದಲ್ಲಿ ನಡೆದ ಹೋರಾಟಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿ ಕಂಡಿರುವುದು ಸ್ವದೇಶಿ ಚಳುವಳಿ, ವಿದೇಶದಲ್ಲಿ ಉತ್ಪಾದಿಸುವ ವಸ್ತುಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುವುದಕ್ಕೆ ದಿಕ್ಕರಿಸಿ ಭಾರತದಲ್ಲಿ ಉತ್ಪಾದಿಸುವ ವಸ್ತುಗಳನ್ನು ಮಾತ್ರ ಬಳಸುವಂತೆ  ಜನತೆಗೆ ಕರೆನೀಡಿದರು, ಈ ಹಿನ್ನೆಲೆಯಲ್ಲಿ ದೇಶದಲ್ಲಿ  ಉತ್ಪಾದಿಸಿದ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯಲು ಸ್ವಾತಂತ್ರ ಸಂಗ್ರಾಮದ  ನಾಯಕರು ಕರೆನೀಡಿದರು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರಿಗೆ ಭಾಗವಹಿಸುವ ಅವಕಾಶ ಖಾದಿ ಬಟ್ಟೆ ನೇಯುವ ಕಾರ್ಯದಲ್ಲಿ  ಸಫಲವಾಗುತ್ತದೆ. ಈ ವಿಚಾರದಲ್ಲಿ ಮಹಾತ್ಮರು ಮಹಿಳೆಯರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

 ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹೋರಾಟದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರ ಹತ್ಯಾಕಾಂಡ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ,ಈ ಹಿನ್ನೆಲೆಯಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಶಾಂತಿಯುತವಾಗಿ ದೇಶದಾದ್ಯಂತ  ಮಾಡಲು ಜನತೆಗೆ ಕರೆಕೊಟ್ಟರು, ಮಹಾತ್ಮರ ನಿರ್ಧಾರದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಹೋರಾಟ ದಂಡಿ ಯಾತ್ರೆಯಾಗಿತ್ತು , ದೇಶದಲ್ಲಿ ಉಪ್ಪಿನ ಮೇಲೆ ಹೆಚ್ಚಿನ ಮಟ್ಟದಲ್ಲಿ ಬ್ರಿಟಿಷ್ ಸರ್ಕಾರ ತೆರಿಗೆ ವಿಧಿಸಿದ ಹಿನ್ನೆಲೆಯಲ್ಲಿ ಆ ದಿನಗಳಲ್ಲಿ ಉಪ್ಪಿನ ಬೆಲೆ ಹೆಚ್ಚಾಗುತ್ತದೆ, ದೇಶದ ಜನತೆ ಉಪ್ಪಿಗೆ ತೆರಿಗೆ ಕೊಡುವುದರ ಬದಲು ಜನರೇ ಉಪ್ಪನ್ನು ಉತ್ಪಾದಿಸಲು ಗಾಂಧೀಜಿ ಅವರು ಕರೆಕೊಟ್ಟರು.

ಗಾಂಧಿಜಿ ಅವರ ಆಜ್ಞೆಯಂತೆ ದೇಶದ ಸ್ವಾತಂತ್ರ್ಯ ಹೋರಾಟಗಾರರು ಸಮುದ್ರ ತೀರದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ ಉಪ್ಪನ್ನು ಉತ್ಪಾದಿಸುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು , ಈ ಒಂದು ಹೋರಾಟ ಉಪ್ಪಿನ ಸತ್ಯಾಗ್ರಹ ಹೆಸರಿನಲ್ಲಿ ಪ್ರಸಿದ್ಧವಾಗಿದೆ.. ಗಾಂಧೀಜಿ  ಸುಮಾರು 21 ದಿನಗಳ ಕಾಲ ಬ್ರಿಟಿಷ್ ದುರಾಡಳಿತವನ್ನು   ವಿರೋಧಿಸಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧಿವೇಶನಕ್ಕೆ ಗಾಂಧೀಜಿ ಅವರು ಅಧ್ಯಕ್ಷ ರಾಗಿದ್ದರು ( 2025ರ ಈ ವರ್ಷಕ್ಕೆ 100 ವರ್ಷ ಕಳೆದಿದೆ ಈ ನೆನಪಿನ ವಿಚಾರದಲ್ಲಿ ಶತಮಾನೋತ್ಸವದ ಅಧಿವೇಶನ ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದೆ ) ಬೆಳಗಾವಿಯಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ರಿಟಿಷ್ ಕೆಂಪು ಕೋತಿಗಳೇ ಭಾರತ ಬಿಟ್ಟು ತೊಲಗಿ ಎಂಬ ಕೂಗಿನ ಮೂಲಕ ಚಳುವಳಿ ಆರಂಭಿಸಲು ನಿರ್ಣಯವಾಗಿದೇ ಈ ಚಳುವಳಿಯ  ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆ ಗಾಂಧೀಜಿಯನ್ನು ಬಂಧಿಸಿದರು, ಎರಡು ವರ್ಷಗಳ ಸಮಯ ಮಹಾತ್ಮರನ್ನು ಬಂಧಿಸಿಡಲಾಗಿದೆ .

ಮಹಾತ್ಮರ ಮಾನವೀಯ ನೆಲೆಗಟ್ಟಿನ ತತ್ವ ಸಿದ್ಧಾಂತಕ್ಕೆ ಮನಸೋತ ಬ್ರಿಟಿಷ್ ಸರ್ಕಾರ 1947 ಆಗಸ್ಟ್ 15 ರ ಮಧ್ಯರಾತ್ರಿ ಭಾರತ ದೇಶಕ್ಕೆ ಸ್ವಾತಂತ್ರ್ಯ ನೀಡಿದೆ, ಮಹಾತ್ಮರ  ಅಹಿಂಸಾತ್ಮಕ ಚಳುವಳಿಗಳು ಶಾಂತಿ ಸೌಹಾರ್ದತೆಯ ಮೌಲ್ಯಗಳಲ್ಲಿ ಶ್ರೇಷ್ಠತೆ ಪಡೆದುಕೊಂಡಿವೆ. ಮಹಾತ್ಮರನ್ನು ಪಡೆದ ನಾವೇ ಧನ್ಯರು ಮಾನ್ಯರು. ಸ್ವತಂತ್ರದ ತರುವಾಯ ದೇಶದ ಕೆಲವೊಂದು ಆಂತರಿಕ ವಿಚಾರದ ಭಿನ್ನಾಭಿಪ್ರಾಯಕ್ಕೆ ಮಹಾತ್ಮರ ಎದೆಗೆ ಗುಂಡಿಟ್ಟರು.

ಮಹಾತ್ಮರು ಅರೇ ರಾಮ. ಅರೇ ರಾಮ ಎನ್ನುತ್ತಲೇ ಉಸಿರು ಚೆಲ್ಲಿದರು. ಭೂಮಂಡಲದ ಮನುಕುಲದ ಇತಿಹಾಸದಲ್ಲಿ  ಮಹಾತ್ಮರು ಎಂಬ ಗೌರವಕ್ಕೆ  ಪಾತ್ರರಾದವರು ಒಬ್ಬರೇ ಒಬ್ಬರು ಅವರೇ ನಮ್ಮ ದೇಶದ ಪಿತಾಮಹ ಮಹಾತ್ಮ ಗಾಂಧೀಜಿ, ಇದು ಕಥೆಯಲ್ಲ ಸ್ವತಂತ್ರ ಭಾರತದ ಇತಿಹಾಸ. ಈ ವಿಚಾರದ ಬರವಣಿಗೆಯಲ್ಲಿ ನನಗೆ ಹೆಮ್ಮೆಯಿದೆ.
ಲೇಖನ-ರಘು ಗೌಡ
, ಕೆ ಟಿ ಹಳ್ಳಿ, ಪಾವಗಡ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!