ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇಲ್ಲಿನ ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಸಂಸ್ಥೆವತಿಯಿಂದ ತನ್ನ ಕಾರ್ಮಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅದ್ದೂರಿ ದಸರಾ ಆಚರಣೆ ಆಯೋಜನೆ ಮಾಡಲಾಗಿತ್ತು.
ಅದ್ದೂರಿ ವೇದಿಕೆಯಲ್ಲಿ ಚಿತ್ರನಟಿ ಶೃತಿ ಸೇರಿದಂತೆ ಹಲವು ಕಲಾವಿದರು ಸಂಗೀತಗಾರರು ಸ್ಥಳೀಯ ಪ್ರಮುಖರು ದಸರಾ ಆಚರಣೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದರು.
ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಸಂಸ್ಥೆಯ ಉಪಾಧ್ಯಕ್ಷ ಉದಯ್ ಶೆಟ್ಟಿ ಮಾತನಾಡಿ ಸಾಮಾನ್ಯವಾಗಿ ಬೇರೆ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಇಂತಹ ಆಚರಣೆಗಳು ನಡೆಯುವುದಿಲ್ಲ ಆದರೆ ನಮ್ಮ ಸಂಸ್ಥೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿಶೇಷವಾಗಿ ದಸರಾ ಹಬ್ಬವನ್ನು ಸಂಭ್ರಮಿಸಲಾಗುತ್ತದೆ ಎಂದರು.
ದಸರಾ ಹಬ್ಬದ ಪ್ರಯುಕ್ತ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಜಯಗಳಿಸಿದ ಕಾರ್ಮಿಕರಿಗೆ ದಸರಾ ಸಂದರ್ಭದಲ್ಲಿ ಬಹುಮಾನ ಉಡುಗೊರೆ ನೀಡುವ ಪದ್ಧತಿ ನಮ್ಮಲಿ ಮೊದಲಿನಿಂದಲೂ ಇದೆ ಅಂತೇ ಇಂದು ಈ ವೇದಿಕೆಯಲ್ಲಿ ದಸರಾ ಹಬ್ಬವನ್ನು ಕಾರ್ಮಿಕರೊಂದಿಗೆ ಬೆರೆತು ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ ನಮ್ಮ ಸಂಸ್ಥೆಯಲ್ಲಿ ಗಣೇಶ ಚತುರ್ಥಿ, ವರಮಹಾಲಕ್ಷ್ಮಿ, ಈದ್ ಮಿಲಾದ್, ಕ್ರಿಸ್ಮಸ್ ಸೇರಿದಂತೆ ಎಲ್ಲಾ ಧರ್ಮಗಳಿಗೆ ಸಂಬಂಧಪಟ್ಟ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದರು.
ಶೇಕಡ 100ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ನಮ್ಮೆಲ್ಲರ ಆಶಯ: ನಮ್ಮ ಕಾರ್ಖಾನೆಗಳಲ್ಲಿ ಶೇಕಡ 100ರಷ್ಟು ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ ಆದರೆ ಕಾರ್ಮಿಕರು ಲಭ್ಯವಿಲ್ಲದ ಕಾರಣ ಶೇಕಡಾ 20ರಷ್ಟು ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಉತ್ತಮ ವಾತಾವರಣವಿದ್ದು ಕಾರ್ಮಿಕರಿಗೆ ಸಕಲ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ನಮ್ಮಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಇದೆ ಬನ್ನಿ ನಮ್ಮ ಜೊತೆ ಸೇರಿ ಎಂದರು.
ಕಾರ್ಯಕ್ರಮದಲ್ಲಿ ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಮ್ಯಾನೆಜಿಂಗ್ ಡೈರೆಕ್ಟರ್ ಫಲಪ್ ಬೆನರ್ಜಿ,ಉಪಾಧ್ಯಕ್ಷ ಉದಯ್ ಶೆಟ್ಟಿ, ಜನರಲ್ ಮ್ಯಾನೇಜರ್ ಅಥವುಲ್ಲಾ ಖಾನ್ , ವಿಜಯ್, ದೊಡ್ಡಬಳ್ಳಾಪುರ ನಗರಸಭಾ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಶಿವು, ಶಂಕರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.



