Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮತ್ತೆ ಮರುಕಳಿಸಿದ 'ಮಹಾಮಾರಿ' ಪ್ಲೇಗ್: 5 ಆಸ್ಪತ್ರೆಗಳು ಬಂದ್, 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್!

ಚಂದ್ರವಳ್ಳಿ ನ್ಯೂಸ್, ಮಾಸ್ಕೋ: 
ಶತಶತಮಾನಗಳ ಹಿಂದೆ ಲಕ್ಷಾಂತರ ಜನರ ಜೀವ ತೆಗೆದಿದ್ದ
'ಪ್ರಾಚೀನ ಮಹಾಮಾರಿ'ಯೊಂದು ರಷ್ಯಾದಲ್ಲಿ ಮತ್ತೆ ವಕ್ಕರಿಸಿದೆ. ಸೈಬೀರಿಯಾ ಪ್ರದೇಶದ ಇರ್ಕುಟ್ಸ್ಕ್‌ನಲ್ಲಿ ಪ್ಲೇಗ್‌ಸೋಂಕಿನ ಭೀತಿ ಎದುರಾಗಿದ್ದು, ಸೋಂಕಿನ ತೀವ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬರೋಬ್ಬರಿ 5 ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಶೆಲೆಖೋವ್‌ನ ಆ್ಯಂಟಿ-ಪ್ಲೇಗ್‌ರಿಸರ್ಚ್‌ಇನ್‌ಸ್ಟಿಟ್ಯೂಟ್‌ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. 28 ವರ್ಷದ ಪ್ರಯೋಗಾಲಯ ತಂತ್ರಜ್ಞೆ ದರ್ಯಾ ಶಿಪಿಲೋವಾ ಎಂಬವರು ನ್ಯುಮೋನಿಕ್ ಪ್ಲೇಗ್‌ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

ಘಟನೆಯ ಹಿನ್ನೆಲೆ ಏನು?
ಸೆಪ್ಟೆಂಬರ್‌29ರಂದು ತೀವ್ರ ನ್ಯುಮೋನಿಯಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದರ್ಯಾ ಶಿಪಿಲೋವಾ ಅವರನ್ನು ಶೆಲೆಖೋವ್‌ನ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್‌‌1ರಂದು ಅವರು ಕೊನೆಯುಸಿರೆಳೆದರು.

ಸೋಂಕಿತ ವ್ಯಕ್ತಿಯ ಮಾದರಿಗಳನ್ನು ಪರೀಕ್ಷಿಸುತ್ತಿದ್ದ ವೇಳೆ, ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಟೆಸ್ಟ್ ಟ್ಯೂಬ್ ಆಕಸ್ಮಿಕವಾಗಿ ಒಡೆದುಹೋಗಿದ್ದು, ಇದರಿಂದಲೇ ಸೋಂಕು ಪ್ರಸರಣಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದಾದ 200ಕ್ಕೂ ಹೆಚ್ಚು ಜನರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಲ್ಲದೆ, ಇರ್ಕುಟ್ಸ್ಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಹ ರದ್ದುಗೊಳಿಸಲಾಗಿದೆ.

ಅಧಿಕಾರಿಗಳ ಸ್ಪಷ್ಟನೆ ಮತ್ತು ಮುನ್ನೆಚ್ಚರಿಕೆ
ಇರ್ಕುಟ್ಸ್ಕ್‌ಗವರ್ನರ್‌ಇಗೋರ್‌ಕೊಬ್ಜೆವ್‌ಆರಂಭದಲ್ಲಿ
‘ಅತ್ಯಂತ ಅಪಾಯಕಾರಿ ಸೋಂಕು’ ಪತ್ತೆಯಾಗಿದೆ ಎಂದು ಹೇಳಿ ಸಾರ್ವಜನಿಕರಿಗೆ ಆತಂಕಪಡದಂತೆ ಮನವಿ ಮಾಡಿದ್ದರು. ಬಳಿಕ ಭಾನುವಾರ ಸ್ಪಷ್ಟನೆ ನೀಡಿ, ಇದು ಕಾರಣ ತಿಳಿಯದ ನ್ಯುಮೋನಿಯಾ ಪ್ರಕರಣವಾಗಿದ್ದು, ರೋಗಿಯ ಮಾದರಿಗಳಲ್ಲಿ ಆಕೆಯ ವೃತ್ತಿಗೆ ಸಂಬಂಧಿಸಿದ ಯಾವುದೇ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ ಎಂದು ಟೆಲಿಗ್ರಾಂ ಮೂಲಕ ತಿಳಿಸಿದ್ದಾರೆ.

ಸಂಸ್ಥೆಯ ಸಿಬ್ಬಂದಿಯಲ್ಲಿ ಯಾವುದೇ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ. ನೆರೆಯ ಬುರ್ಯಾಟಿಯಾ ಪ್ರದೇಶದ ಗವರ್ನರ್ ಅಲೆಕ್ಸಿ ಸಿಡೆನೊವ್ ಕೂಡ ತಮ್ಮ ಪ್ರದೇಶದಲ್ಲಿ ಯಾವುದೇ ಪ್ಲೇಗ್ ಹರಡುವಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯುಮೋನಿಕ್ ಪ್ಲೇಗ್ ಎಂದರೇನು? ಇದರ ಲಕ್ಷಣಗಳೇನು?
ಪ್ಲೇಗ್ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಚಿಗಟಗಳ ಕಡಿತ ಅಥವಾ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಇದರಲ್ಲಿ ನ್ಯುಮೋನಿಕ್ ಪ್ಲೇಗ್ ಅತ್ಯಂತ ಮಾರಕ ರೂಪವಾಗಿದ್ದು, ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.

ಪ್ರಮುಖ ಲಕ್ಷಣಗಳು: ಸೋಂಕು ತಗುಲಿದ 24 ಗಂಟೆಗಳಲ್ಲೇ ತೀವ್ರ ಉಸಿರಾಟದ ತೊಂದರೆ, ಕೆಮ್ಮು ಹಾಗೂ ರಕ್ತ ಮಿಶ್ರಿತ ಕಫ ಕಾಣಿಸಿಕೊಳ್ಳಬಹುದು.
ಚಿಕಿತ್ಸೆ: ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ
, ಈ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಮಾತ್ರ ರೋಗಿಯ ಪ್ರಾಣ ಉಳಿಸಲು ಮತ್ತು ಚೇತರಿಸಿಕೊಳ್ಳಲು ಸಾಧ್ಯ.

ಈ ಹಿಂದಿನ ಘಟನೆಗಳ ಹಿನ್ನೆಲೆಯಲ್ಲಿ ರಷ್ಯಾದ ಗ್ರಾಹಕ ಸುರಕ್ಷತಾ ಮೇಲ್ವಿಚಾರಣಾ ಸಂಸ್ಥೆ 'ರೋಸ್ಪೊಟ್ರೆಬ್ನಾಡ್ಜೋರ್' ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಬೈಲ್’ ಸಿನಿಮಾ ಯಶಸ್ಸಿನ ಬಗ್ಗೆ ಶಿವಣ್ಣ ಹಾಗೂ ಚಿತ್ರತಂಡದ ಮಾತುಬಜೆಟ್ ಮುಖ್ಯವಲ್ಲ, ಸಬ್ಜೆಕ್ಟ್ ಮುಖ್ಯ: ‘ಬೈಲ್’ ಸಿನಿಮಾ ಯಶಸ್ಸಿನ ಬಗ್ಗೆ ಶಿವಣ್ಣ ಹಾಗೂ ಚಿತ್ರತಂಡದ ಮಾತುಕಳ್ಳತನದ ವಿರುದ್ಧ ಎಚ್ಚರಿಕೆ ನೀಡುವ ಅಪರೂಪದ ಶಾಸನ ಪತ್ತೆ!ಮತ್ತೆ ಮರುಕಳಿಸಿದ 'ಮಹಾಮಾರಿ' ಪ್ಲೇಗ್: 5 ಆಸ್ಪತ್ರೆಗಳು ಬಂದ್, 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್!ಸ್ವಇಚ್ಛೆಯಿಂದ ಇಸ್ಲಾಂ ತೊರೆದು ಸನಾತನ ಧರ್ಮ ಸ್ವೀಕರಿಸಿದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ!ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 'ಫಾರ್ಮ್-7' ದುರ್ಬಳಕೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆಸುಪ್ರೀಂ ಕೋರ್ಟ್‌ನಲ್ಲಿ ನೈಸ್ ಸಂಸ್ಥೆಗೆ ಹಿನ್ನಡೆ: ಭೂಸ್ವಾಧೀನ ರದ್ದು ಆದೇಶಕ್ಕೆ ತಡೆ ನೀಡಲು ನಿರಾಕರಣೆಮುಖ್ಯ ಚುನಾವಣಾ ಆಯುಕ್ತರ ಅಮಾನತಿಗೆ ಸುಪ್ರೀಂಕೋರ್ಟ್ ನಕಾರ: ಕೇಂದ್ರ ಹಾಗೂ ಆಯೋಗಕ್ಕೆ ನೋಟಿಸ್‌ಜಾರಿಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಫಾರ್ಮ್-7 ದುರ್ಬಳಕೆ ಆರೋಪದ ಬಗ್ಗೆ ಸಿಇಒ ಅನ್ಬುಕುಮಾರ್ ಸ್ಪಷ್ಟನೆಬಿಜೆಪಿ ಬೃಹತ್ ಪ್ರತಿಭಟನೆ: ಪಾಲಿಕೆ ವಿಪಕ್ಷ ನಾಯಕ ಶ್ರೀನಿವಾಸ್ ಮೋದ್ಕರ್ ವಿರುದ್ಧದ ಎಫ್‌ಐಆರ್‌ಗೆ ತೀವ್ರ ಖಂಡನೆ