Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ 

ಚಂದ್ರವಳ್ಳಿ ನ್ಯೂಸ್, ನವದೆಹಲಿ: 
ಖಾಸಗಿ ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ಬಿಸಿನೆಸ್ ಮಾಡಿ ಲಾಭ ಗಳಿಸುವ ವಾಣಿಜ್ಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಎಚ್ಚರಿಸಿದೆ. ದೇಶಾದ್ಯಂತ ಇರುವ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ತಮ್ಮ ಹಣಕಾಸು ಹಾಗೂ ಆಡಳಿತಾತ್ಮಕ ಮಾಹಿತಿಯನ್ನು ಒದಗಿಸುವಂತೆ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.

6 ವಾರಗಳೊಳಗೆ ಆಡಿಟ್ ವಿವರ ಸಲ್ಲಿಕೆಗೆ ಸೂಚನೆ
ದೇಶದ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ಕಳೆದ 5 ವರ್ಷಗಳ ಸಂಪೂರ್ಣ ಆಡಿಟ್ ಲೆಕ್ಕಪತ್ರಗಳು, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ವಿವರಗಳು, ಹೆಚ್ಚುವರಿ ಹಣದ ಹೂಡಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗದ ವ್ಯಕ್ತಿಗಳಿಗೆ ನೀಡಲಾದ ಪಾವತಿಗಳ ಸಂಪೂರ್ಣ ಮಾಹಿತಿಯನ್ನು ಆರು ವಾರಗಳೊಳಗೆ ಕಡ್ಡಾಯವಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಖಡಕ್ ನಿರ್ದೇಶನ ನೀಡಿದೆ.
ಶಿಕ್ಷಣವೇ ಹೊರತು ವ್ಯಾಪಾರವಲ್ಲ: ಶಿಕ್ಷಣವು ಸಾರ್ವಜನಿಕ ಹಿತಾಸಕ್ತಿಯ ಸೇವೆಯಾಗಿದೆ. ಸಂಸ್ಥೆಯು ಸುಗಮವಾಗಿ ನಡೆಯಲು ಸಿಬ್ಬಂದಿಗೆ ಸೂಕ್ತ ವೇತನ ನೀಡಲು ಮಾತ್ರ ಆರ್ಥಿಕ ಸಂಪನ್ಮೂಲ ಬಳಸಬೇಕೇ ವಿನಃ ಇದನ್ನು ಲಾಭಕೋರ ಉದ್ಯಮವನ್ನಾಗಿ ಪರಿವರ್ತಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.

Advertisement

ಮಂಡಳಿಗೆ ಹಣ ಡೈವರ್ಟ್ ನಿಷೇಧ: ಆಡಳಿತ ಮಂಡಳಿಯ ನಿರ್ದೇಶಕರಿಗೆ ಅತಿ ಹೆಚ್ಚಿನ ವೇತನ ನೀಡುವುದು, ಟ್ರಸ್ಟಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸುವುದು ಅಥವಾ ಶೈಕ್ಷಣಿಕ ಕೆಲಸಗಳೊಂದಿಗೆ ಸಂಬಂಧವಿಲ್ಲದವರಿಗೆ ಸಂಸ್ಥೆಯ ಹಣವನ್ನು ಯಾವುದೇ ಹೆಸರಿನಲ್ಲಿ ವರ್ಗಾಯಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸರ್ಕಾರಿ ಸವಲತ್ತುಗಳ ಲೆಕ್ಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕಡಿಮೆ ದರದಲ್ಲಿ ಪಡೆದ ಭೂ ಹಂಚಿಕೆ, ಕಾನೂನು ವಿನಾಯಿತಿಗಳು ಹಾಗೂ ತೆರಿಗೆ ಸಡಿಲಿಕೆಗಳಂತಹ ವಿಶೇಷ ಸವಲತ್ತುಗಳ ಸಂಪೂರ್ಣ ವಿವರವನ್ನು ವಿಶ್ವವಿದ್ಯಾಲಯಗಳು ಒದಗಿಸಬೇಕು.
ಶುಲ್ಕ ಹಾಗೂ ತರಗತಿಗಳ ಆಡಿಟ್: ಪ್ರವೇಶ ಹಾಗೂ ಕೋರ್ಸ್ ಅವಧಿಯಲ್ಲಿ ಅಭಿವೃದ್ಧಿ ನಿಧಿ ಮತ್ತು ವಿಶೇಷ ಶುಲ್ಕದ ಹೆಸರಿನಲ್ಲಿ ಸಂಗ್ರಹಿಸಿದ ಹೆಚ್ಚುವರಿ ಹಣದ ವಿವರ, ಹಾಗೂ ಜನವರಿ 2025ರಿಂದ ಬೋಧಕ ಸಿಬ್ಬಂದಿ ತೆಗೆದುಕೊಂಡ ತರಗತಿಗಳ ನೈಜ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ನಿಯಂತ್ರಣ ಮಂಡಳಿಗಳಿಗೂ ನೋಟಿಸ್: ರಾಷ್ಟ್ರೀಯ ವೈದ್ಯಕೀಯ ಆಯೋಗ, ದಂತ ಮಂಡಳಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನರ್ಸಿಂಗ್ ಕೌನ್ಸಿಲ್ ಸೇರಿದಂತೆ ಇತರೆ ವೃತ್ತಿಪರ ನಿಯಂತ್ರಣ ಮಂಡಳಿಗಳು ಖಾಸಗಿ ಕಾಲೇಜುಗಳಲ್ಲಿ ನಡೆಸಿರುವ ತಪಾಸಣೆ ಮತ್ತು ಲೋಪದೋಷಗಳ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲು ಸೂಚಿಸಲಾಗಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಗಡುವು
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಂದ ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಆರು ವಾರಗಳೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ಕ್ಕೆ ನಿಗದಿಪಡಿಸಿದೆ.

ಪ್ರಕರಣದ ಹಿನ್ನೆಲೆ
ನೋಯ್ಡಾ ಮೂಲದ ಅಮಿಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರ ದಾಖಲೆ ತಿದ್ದುಪಡಿ ವಿಚಾರದಲ್ಲಿ ನಡೆದ ಕಿರುಕುಳದ ದೂರಿನಿಂದ ಈ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಇದನ್ನು ದೇಶದ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳ ಹಣಕಾಸು ಹಾಗೂ ಆಡಳಿತ ನಿಯಂತ್ರಣದ ಸಮಗ್ರ ತನಿಖೆಯಾಗಿ ವಿಸ್ತರಿಸಿದೆ. ಸರ್ಕಾರದ ಹೆಸರಿನಲ್ಲಿ ರಿಯಾಯಿತಿ ಪಡೆದು ಡೊನೇಶನ್ ಮತ್ತು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಕೋಟ್ಯಂತರ ರೂ. ಲಾಭ ಗಳಿಸುತ್ತಿರುವ ಖಾಸಗಿ ವಿವಿಗಳ ಅಕ್ರಮಗಳಿಗೆ ಈ ತೀರ್ಪು ದೊಡ್ಡ ಕಡಿವಾಣ ಹಾಕಲಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದ ನೂತನ ಎಸ್‌ಪಿಯಾಗಿ ಕುಶಾಲ್ ಚೌಕ್ಸೆ:ರಂಜಿತ್ ಕುಮಾರ್ ಬಂಡಾರು ಅವರ ವರ್ಗಾವಣೆಖಾಸಗಿ ವಿವಿಗಳು ಲಾಭಕೋರ ವ್ಯಾಪಾರಿ ಸಂಸ್ಥೆಗಳಲ್ಲ: ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ಪಿಎಸ್‌ಐಗೆ ಕಪಾಳಮೋಕ್ಷ: ಎಸ್‌ಐ ಸವಿತಾ ಪಾಟೀಲ್ ಬಳಿ ವಿಡಿಯೋ ಮೂಲಕ ಕ್ಷಮೆ ಕೋರಿದ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಗೌಡಸರ್ಕಾರಿ ಬಸ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ; 15 ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕದನ: 8 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ200 ರೂ. ಆಸೆಗೆ ಬಿದ್ದು 9.30 ಲಕ್ಷ ರೂ. ಕಳೆದುಕೊಂಡ ಯುವತಿ: 'ವರ್ಕ್ ಫ್ರಮ್ ಹೋಮ್' ಸೈಬರ್ ವಂಚನೆ ಬಯಲುಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ: ದಿಢೀರ್ ಹೆಚ್ಚಾದ ಅಕ್ಕಿ ದರ, ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹ