Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿನೇ ದಿನೇ ವೈಫಲ್ಯದ ಹಾದಿ ಹಿಡಿದ ಪ್ರಿಯಾಂಕ್ ಖರ್ಗೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವರಾದ ಪ್ರಿಯಾಂಕ್ ಖರ್ಗೆ
ಅವರು ದಕ್ಷಿಣ ಕನ್ನಡದಂತಹ ಜಿಲ್ಲೆಯ ಆದಾಯ ಹೆಚ್ಚಲು ಏನು ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ, ಖರ್ಗೆ ಅವರು ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ದಶಕಗಳ ಕಾಲ ಪ್ರತಿನಿಧಿಸಿದ, ಈಗ ಪ್ರಿಯಾಂಕ್ ಖರ್ಗೆಯವರು ಶಾಸಕರು, ಸಚಿವರಾಗಿರುವ ಕಲಬುರಗಿ ಕ್ಷೇತ್ರದ ಕಥೆ ಮಾತ್ರ ದಿನೇ ದಿನೇ ವೈಫಲ್ಯದ ಹಾದಿ ಹಿಡಿಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚುತ್ತಿದ್ದರೆ, ಕಲಬುರಗಿಯ ತಲಾ ಆದಾಯ ದಿನದಿಂದ ದಿನಕ್ಕೆ ಇಳಿಯುತ್ತಿದೆ ಎಂದು ಸಿ.ಟಿ ರವಿ ವಾಗ್ದಾಳಿ ಮಾಡಿದರು.

ಪ್ರಿಯಾಂಕ್ ಖರ್ಗೆಯವರು ಬೇರೆ ಜಿಲ್ಲೆಗಳ ಕುರಿತು ಮಾತನಾಡುವ ಮುನ್ನ, ತಾನು ಪ್ರತಿನಿಧಿಸುತ್ತಿರುವ ಕಲಬುರಗಿ ಹೇಗಿದೆ ಎಂದು ಗಮನ ಹರಿಸಬೇಕು. ದಶಕಗಳ ಕಾಲ ಆಡಳಿತ ನಡೆಸಿ, ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ಯಾವ ಒಂದು ಕ್ಷೇತ್ರದಲ್ಲೂ ಕಲಬುರಗಿಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದವರು ಯಾವ ರೀತಿಯ ಮಾದರಿ ನಿರ್ಮಿಸಬಲ್ಲರು? ಎಂದು ರವಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ಅನ್ನು ದೆವ್ವ ಎನ್ನುವ, ಬಿಜೆಪಿಯನ್ನು ಬಾಯಿಗೆ ಬಂದಂತೆ ನಿಂದಿಸುವ ಪ್ರಿಯಾಂಕ್ ಖರ್ಗೆಯವರನ್ನು ಕಲಬುರಗಿಯ ಜನರು ಏನೆಂದು ಬೈಯಬೇಕು? ದೇಶಕ್ಕೆ ಬುದ್ಧಿವಾದ ಹೇಳುವ ಪ್ರಿಯಾಂಕ್ ಖರ್ಗೆಯವರ ಬಳಿ ಕಲಬುರಗಿ ಅಭಿವೃದ್ಧಿಗೆ ಯಾವ ಸ್ಪಷ್ಟ ಯೋಜನೆಗಳಿವೆ? ಬಹುಶಃ ಶೂನ್ಯ! ಎಂದು ರವಿ ಅವರು ವ್ಯಂಗ್ಯವಾಡಿದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST