Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ಕಡ್ಡಾಯವಾಗಿ ಟಿಡಿ ಲಸಿಕೆ ಹಾಕಿಸಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಹಾರಾಣಿ ಪ್ರೌಢಶಾಲೆ ಮತ್ತು ಭೀಮಪ್ಪ ನಾಯಕ ಪ್ರೌಢಶಾಲೆಯ 4ನೇ ತರಗತಿ ಮತ್ತು 10ನೇ ತರಗತಿ ಮಕ್ಕಳಿಗೆ ಗುರುವಾರ ಟಿಡಿ ಲಸಿಕೆ ನೀಡಲಾಯಿತು.


ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣ ನಾಯಕ್, ಟಿಡಿ ಎಂದರೆ ಟೆಟನಸ್ ಮತ್ತು ಡಿಪ್ತೀರಿಯಾ ವಿರುದ್ಧದ ಲಸಿಕೆ. ಇದು ಧನುರ್ವಾಯು, ನರಮಂಡಲ ಮೇಲೆ ಪರಿಣಾಮ ಬೀರುವ ಗಂಭೀರ ಬ್ಯಾಕ್ಟೀರಿಯಾ

ಸೋಂಕು ಮತ್ತು ಗಂಟಲು-ಮೂಗಿನ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ಸೋಂಕು ವಿರುದ್ಧ ಟಿಡಿ ಲಸಿಕೆ ಹಾಕಲಾಗುವುದು. 10 ವರ್ಷದ ಮಕ್ಕಳಿಗೆ ಮತ್ತು 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.


ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 61 ಮಕ್ಕಳಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ವೈ.ಬೋರಪ್ಪ, ಚಂದ್ರಗೌಡ, ಉಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಏಕಾಂತಮ್ಮ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST