LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ದಾಖಲೆ ಮಟ್ಟದ ರೈತರ ನೋಂದಣಿ

Advertisement
Advertisement

ಚಂದ್ರವಳ್ಳಿ ನ್ಯೂಸ್ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಎದುರಾಗುವ ಬೆಳೆ ನಷ್ಟದಿಂದ ರಕ್ಷಣೆ ಪಡೆಯಲು ತೋಟಗಾರಿಕೆ ಇಲಾಖೆಯ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ (RWBCIS) ಯೋಜನೆಗೆ ಪ್ರಸ್ತುತ 2026-27ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ರೈತರು ನೋಂದಾಯಿಸಿಕೊಂಡಿದ್ದಾರೆ.

​ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕರಿಮೆಣಸು, ಹಸಿರು ಮೆಣಸಿನಕಾಯಿ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. 

2016-17ನೇ ಸಾಲಿನಿಂದ ಜಾರಿಯಲ್ಲಿರುವ ಈ ಯೋಜನೆಗೆ ಪ್ರಸ್ತುತ ವರ್ಷದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 65,608 ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

​ವರ್ಷವಾರು ರೈತರ ನೋಂದಣಿ ವಿವರ:
​2016-17: 22,358 ರೈತರು
​2017-18: 11,293 ರೈತರು
​2018-19: 8,926 ರೈತರು
​2019-20: 10,852 ರೈತರು
​2020-21: 18,584 ರೈತರು
​2021-22: 31,616 ರೈತರು
​2022-23: 26,186 ರೈತರು
​2023-24: 22,171 ರೈತರು
​2024-25: 39,509 ರೈತರು
​2025-26: 44,905 ರೈತರು
​2026-27: 65,608 ರೈತರು
​2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಾರು ನೋಂದಣಿ ಮಾಡಿಸಿದ್ದಾರೆ 

ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಡಿಕೆ ಬೆಳೆಗೆ ಅತಿ ಹೆಚ್ಚು ಅಂದರೆ 48,325 ರೈತರು ನೋಂದಾಯಿಸಿಕೊಂಡಿದ್ದಾರೆ. ಉಳಿದಂತೆ ಕರಿಮೆಣಸು ಬೆಳೆಗೆ 17,148 ರೈತರು, ದಾಳಿಂಬೆಗೆ 67, ಮಾವು ಬೆಳೆಗೆ 39 ಹಾಗೂ

ಹಸಿರು ಮೆಣಸಿನಕಾಯಿ ಬೆಳೆಗೆ 29 ರೈತರು ವಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಭಾವ: ದಾಖಲೆ ಮಟ್ಟದಲ್ಲಿ ಬೆಳೆ ವಿಮೆಗೆ ರೈತರ ನೋಂದಣಿಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ದಾಖಲೆ ಮಟ್ಟದ ರೈತರ ನೋಂದಣಿಜಲ ವಿವಾದಗಳು ಹಾಗೂ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ.ಭ್ರಷ್ಟಾಚಾರದ ಆರೋಪಿಗಳಿಗೆ ಮಂತ್ರಿಗಿರಿ: ಸಿ.ಟಿ. ರವಿ ಕಿಡಿಕಾರಿದ್ದು ಹೀಗೆಅಭಿಮನ್ಯು ಆನೆಯ ನಿವೃತ್ತಿಗೆ ಸಿ.ಟಿ. ರವಿ ಬೇಸರ: ಅರಣ್ಯ ಸಚಿವರಿಗೆ ಮನವಿಪ್ರಧಾನಿ ಮೋದಿ ಸಾರ್ವಜನಿಕ ಜೀವನದ 25 ವರ್ಷ: ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರ ವಿಸ್ತೃತ ಸಭೆಎಚ್.ಡಿ. ಕುಮಾರಸ್ವಾಮಿ ಸಂತಸ: ಎಚ್‌ಎಂಟಿ ವಾಚ್‌ಗಳಿಗೆ ಅಭೂತಪೂರ್ವ ಸ್ಪಂದನೆ, ಮರುಜೀವ ಪಡೆದ ಭಾರತದ ಸ್ವದೇಶಿ ಕಿರೀಟಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ  ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿದರು.ತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆ