Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್ ಆಂತರಿಕ ಕಚ್ಚಾಟ ಬಹಿರಂಗ: ಆರ್. ಅಶೋಕ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
​ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಹಾಗೂ ಸಚಿವರ ನಡುವಿನ ಒಳಜಗಳದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಇ.ಡಿಗೆ ದೂರು ನೀಡಿದವರ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ "ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಸ್ವಪಕ್ಷದವರೇ ಈ ಹುನ್ನಾರ ನಡೆಸಿದ್ದಾರೆಯೇ ಎಂದು ಹುಡುಕುತ್ತಿದ್ದೇನೆ" ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಅಶೋಕ್ ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ.

Advertisement

​​ಬಟಾಬಯಲಾದ ಒಳಜಗಳ: ಸಚಿವರುಗಳೇ ತಮ್ಮ ವಿರುದ್ಧವೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಿರುವ ಆಂತರಿಕ ಕಾಳಗವನ್ನು ಜಗಜ್ಜಾಹೀರುಗೊಳಿಸಿದೆ.

​ಅಧಿಕಾರಕ್ಕಾಗಿ ಕುತಂತ್ರ: ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ವಿದೇಶಗಳಲ್ಲಿ ಹೂಡಿಕೆ ಮಾಡಲಾಗುತ್ತಿದ್ದು, ಸ್ವಪಕ್ಷದವರನ್ನೇ ತುಳಿದು ಅಧಿಕಾರ ಹಿಡಿಯಲು ನಾಯಕರು ನಿರಂತರ ಸಂಚು ರೂಪಿಸುತ್ತಿದ್ದಾರೆ.

​ಇ.ಡಿಗೆ ದೂರು ನೀಡುವ ಹಂತ: ಕಾಂಗ್ರೆಸ್ ನಾಯಕರು ತಮ್ಮದೇ ಸಚಿವರ ಭ್ರಷ್ಟಾಚಾರದ ಜಾತಕವನ್ನು ತನಿಖಾ ಸಂಸ್ಥೆಗಳಿಗೆ ನೀಡುವ ಹಂತಕ್ಕೆ ತಲುಪಿರುವುದು ಸರ್ಕಾರದ ನೈತಿಕ ಕುಸಿತಕ್ಕೆ ಸಾಕ್ಷಿಯಾಗಿದೆ.

​ಅಭಿವೃದ್ಧಿ ಶೂನ್ಯ: ಜನತೆಗೆ ನೀಡಿದ್ದ ಅಭಿವೃದ್ಧಿಯ ಆಶ್ವಾಸನೆಗಳು ಗಾಳಿಯಲ್ಲಿ ತೂರಿಹೋಗಿದ್ದು, ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಚಿವರ ಕಾಲೆಳೆಯುವ ತಂತ್ರಗಳಲ್ಲೇ ಸರ್ಕಾರ ಮುಳುಗಿದೆ.

​ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಕೇವಲ ಲೂಟಿ ಮತ್ತು ಅಧಿಕಾರದ ಪೈಪೋಟಿಗಾಗಿ ಕಿತ್ತಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಿಜಯನಗರದ ಮಹಾನವಮಿ; ಸಾಮ್ರಾಜ್ಯದ ವೈಭವದಿಂದ ಶ್ರೀರಂಗಪಟ್ಟಣ ದಸರಾವರೆಗೆ:ಮೂರ್ಖನಾದ ಮಹಾರಾಜನ್ : ವೆಂಕಟೇಶ್, ಚಿತ್ರದುರ್ಗಚಳ್ಳಕೆರೆಯಲ್ಲಿ ಇಂದು 'ಮಾತೃಶ್ರೀ ಪ್ರಸಾದ ನಿಲಯ' ಉದ್ಘಾಟನೆಕಾಶಿಯಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಾಂಸ್ಕೃತಿಕ ಸಂಭ್ರಮ: 30 ಪ್ರವಾಸಿಗರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ಪ್ರದಾನವಿಜೃಂಭಣೆಯ 'ರೈತ ಸ್ವಾಭಿಮಾನ ಯಾತ್ರೆ': ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ನಡೆಸಿದ ನಿಖಿಲ್ಕವಿತೆ ಬರೆಯುವುದು, ಸಾಹಿತಿಯಾಗುವುದು ಲೋಕದ ಜವಾಬ್ದಾರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ತುಮಕೂರು ದಸರಾ ಮಹೋತ್ಸವಕ್ಕೆ ಸಿದ್ಧಗಂಗಾ ಶ್ರೀ ಚಾಲನೆ: 5 ಸಾವಿರಕ್ಕೂ ಅಧಿಕ ಕಲಾವಿದರಿಂದ ಕಲಾ ಪ್ರದರ್ಶನಬಿಜೆಪಿ ಕೋರ್ ಕಮಿಟಿ ಸಭೆ: ಹಿರಿಯೂರು ಉಪಚುನಾವಣೆಗೆ ಕಮಲ ಪಕ್ಷದ ಕಸರತ್ತುಐಐಟಿ ಮದ್ರಾಸ್‌ನ ಶ್ರೀ ಜಲಕಂಠೇಶ್ವರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ