Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂ ನಾಯಕರ, ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಬಲವಂತದ ಕ್ರಮ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರು ಭಾಗದಲ್ಲಿ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಬಿಜೆಪಿ ದೂರಿದೆ.

ಎಸ್‌ಡಿಪಿಐ ಕಾರ್ಯಕರ್ತ ರೆಹಮಾನ್‌ ಹತ್ಯೆಯ ಬಳಿಕ ಕಾಂಗ್ರೆಸ್‌ ವಿರುದ್ಧ ರೊಚ್ಚಿಗೆದ್ದಿರುವ ಮುಸ್ಲಿಮ್‌ ಸಮುದಾಯದ ಆಕ್ರೋಶ ತಣ್ಣಗಾಗಿಸಲು ಅವರ ಬೇಡಿಕೆಯಂತೆ ಹಿಂದೂ ನಾಯಕರ, ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಬಲವಂತದ ಪೊಲೀಸ್‌ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಸಲ್ಮಾನರನ್ನು ಓಲೈಸಲು ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ದಾಂಧಲೆ ಪ್ರಕರಣಗಳನ್ನು ಹಿಂದಕ್ಕೆ ಪಡೆದ ಈ ಸರ್ಕಾರ, ಉದಯಗಿರಿ ಗಲಭೆ ಪ್ರಕರಣದಲ್ಲಿ ಬಹಿರಂಗವಾಗಿ ಸವಾಲು ಹಾಕಿದ ಮುಲ್ಲಾನ ಮೇಲೆ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಿತ್ತು. ಆದರೆ ರೆಹಮಾನ್‌ ಹತ್ಯೆಯ ಬೆನ್ನಲ್ಲೇ ಸರ್ಕಾರವನ್ನು ತಂದಿದ್ದೇ ನಾವು ಎನ್ನುತ್ತಿರುವ ಮುಸಲ್ಮಾನರನ್ನು ಓಲೈಸಲು ಹಿಂದೂಗಳ ಮೇಲೆ ತ್ವರಿತವಾಗಿ ಕ್ರಮಕೈಗೊಳ್ಳುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್‌ ಸರ್ಕಾರ ಈ ಕೂಡಲೇ ತನ್ನ ಮತೀಯ ಓಲೈಕೆ ನೀತಿಯಿಂದ ಹಿಂದಕ್ಕೆ ಸರಿಯಬೇಕು, ಇಲ್ಲದಿದ್ದರೆ ಕರಾವಳಿ ಭಾಗದಲ್ಲಿ ಶಾಂತಿ ಎನ್ನುವುದು ಕನಸಿನ ಮಾತಾಗಬಹುದು ಎಂದು ಬಿಜೆಪಿ ಎಚ್ಚರಿಸಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST