Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಪ್ರಜ್ವಲ್ ರೇವಣ್ಣ ಅವರ ಪೆನ್​​​​ಡ್ರೈವ್‌ಸಂಬಂಧ ದೋಷಾರೋಪಣ ಪಟ್ಟಿ ಸಲ್ಲಿಸಿದ ಎಸ್‌ಐಟಿ

ಚಂದ್ರವಳ್ಳಿ ನ್ಯೂಸ್, ಹಾಸನ:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್​​​​ಡ್ರೈವ್‌ಹಂಚಿಕೆ ಸಂಬಂಧ ಎಸ್‌ಐಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ಇದರಲ್ಲಿ ಪ್ರಮುಖರ ಹೆಸರುಗಳು ಕಣ್ಮರೆಯಾಗಿರುವ ಕುರಿತು ಚರ್ಚೆ ನಡೆದಿದೆ.

ಪೆನ್​​​ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಎಸ್‌ಐಟಿ 13,712 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ತಾಂತ್ರಿಕ ವರದಿ, ಎಫ್‌ಎಸ್‌ಎಲ್ ಸಾಕ್ಷಿಗಳ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ ಎಂದು ವಕೀಲ ಪೂರ್ಣಚಂದ್ರ ತಿಳಿಸಿದ್ದಾರೆ.

ಆರೋಪಿಗಳ ಪಟ್ಟಿ: ಎ1 ನವೀನ್, ಎ2 ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್.ಎನ್, ಎ3 ಚೇತನ್.ಬಿ.ಸಿ., ಎ4 ಚೇತನ್.ವೈ.ಎಸ್, ಎ5 ಲಿಖಿತ್‌ಗೌಡ, ಎ6 ದೇವರಾಜೇಗೌಡ, ಎ7 ಗಿರೀಶ್.ಎಸ್, ಎ8 ಯೊಗೇಶ್.ವೈ.ಡಿ., ಎ9 ನಿಶಾಂತ್, ಎ10 ಹರೀಶ್.ಎಸ್.ಎನ್, ಎ11 ಸುಮಂತ್, ಎ12 ಕೃಷ್ಣೇಗೌಡ, ಎ13 ಕಿರಣ್.ಎಸ್.ಕೆ, ಎ14 ಶರತ್.ಎಂ.ಕೆ., ಎ15 ತೇಜಸ್.ಡಿ.ಎನ್, ಎ16 ಗಗನ್‌ಕುಮಾರ್, ಎ17 ರೇವಂತ್, ಎ18 ಶಿವಪ್ರಸಾದ್, ಎ19 ನಾಗೇಂದ್ರ ಜೈನ್, ಎ20 ವಸಂತ್‌ಕುಮಾರ್, ಎ21 ಸಮೀರ್‌ಅಹ್ಮದ್, ಎ22 ಬಾಲಸುಬ್ರಹ್ಮಣ್ಯ, ಎ23 ಚಿರಂತ್, ಎ24 ದೇವರಾಜ್.ಡಿ.ಹೆಚ್, ಎ25 ಜಯಸೂರ್ಯ, ಎ26 ಚಂದ್ರಶೇಖರ್.ಬಿ.ಕೆ., ಎ27 ಕುಮಾರ್, ಎ28 ದಿನೇಶ್.ಕೆ.ಕೆ., ಎ29 ನವೀನ್‌ಕುಮಾರ್.ಎನ್.ವಿ., ಎ30 ಪ್ರಶಾಂತ್.ಬಿ.ಎಸ್., ಎ31 ಅನಿಲ್.ಹೆಚ್.ವಿ., ಎ32 ಹರ್ಷವರ್ದನ್.ಹೆಚ್.ಎಂ., ಎ33 ಅಕ್ಷಯ್‌ಕುಮಾರ್, ಎ34 ಪ್ರವೀಣ್‌ಕುಮಾರ್, ಎ35 ಹರೀಶ್.ಎನ್.ಸಿ., ಎ36 ಶಶಾಂಕ್.ಹೆಚ್.ಎಂ., ಎ37 ಭರತ್, ಎ38 ಚೇತನ್​​ಕುಮಾರ್, ಎ39 ಸೋಮಶೇಖರ್.ಕೆ.ಕೆ. ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವ ಇರುವವರೆಗೂ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಡಿಎನ್ಎ ಮತ್ತು ಡಿಜಿಟಲ್ ಸಾಕ್ಷಿಗಳ ರೆಕಾರ್ಡಿಂಗ್ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ದಳಕ್ಕೆ ಹೈಕೋರ್ಟ್ ಕಳೆದ ಜನವರಿಯಲ್ಲಿ ಸೂಚಿಸಿತ್ತು.

ತಮಗೆ ವಿಧಿಸಲಾಗಿರುವ ಶಿಕ್ಷೆ ರದ್ದುಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಮತ್ತು ಟಿ.ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ, ಆತ್ಮವಿಶ್ವಾಸ ಬೆಳೆಸುವುದೇ ಕ್ರೀಡೆಯ ಉದ್ದೇಶ ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:ಮನಸ್ಸಿನ ಆರೋಗ್ಯಕ್ಕೆ ಅರಿವೇ ಮೊದಲ ಚಿಕಿತ್ಸೆ:ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ  ದೃಷ್ಟಿಕೋನ ಚಿಂತನೆ ಕಾರ್ಯಕ್ರಮ ಆಯೋಜನೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಸರ್ಕಾರದಿಂದ ಆಹ್ವಾನಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಶೀಘ್ರ ಬಿಡುಗಡೆಗೆ ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ ಶಿವಲಿಂಗಪ್ಪಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿರಾಹುಲ್ ಗಾಂಧಿ ಪ್ರಧಾನಿಯಾಗಲು ಹುಚ್ಚರಂತೆ ಓಡಾಡುತ್ತಿದ್ದಾರೆ: ಸಂಸದ ಗೋವಿಂದ್ ಕಾರಜೋಳ ವಾಗ್ದಾಳಿಅನುಭವ ಮತ್ತು ಜ್ಞಾನ ಎರಡೂ ನನ್ನಲ್ಲಿಲ್ಲ- ಸಂಸದ ಗೋವಿಂದ್ ಕಾರಜೋಳ