Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ- 44073 ಮತದಾರರು ಅ.23 ರಂದು ಮತದಾನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ-2026ಕ್ಕೆ ಇದೇ ತಿಂಗಳ ಅಕ್ಟೋಬರ್ 23 ರಂದು ಮತದಾನ ಜರುಗಲಿದೆ. ಜಿಲ್ಲೆಯಲ್ಲಿ 44,073 ಮತದಾರರು ಇದ್ದು
, ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

2025 ಡಿಸೆಂಬರ್ ಅಂತ್ಯಕ್ಕೆ ಪದವೀಧರ ಕ್ಷೇತ್ರದ ಮತಪಟ್ಟಿಯಲ್ಲಿ 41,358 ಪದವಿಧರ ಮತದಾರರಿದ್ದರು, ಸದ್ಯ 2715 ಪದವೀಧರ ಮತದಾರರ ಸೇರ್ಪಡೆಯಾಗಿದ್ದು, ಈ ಹಿಂದಿನ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕಿಲ್ಲ. 25,551 ಪುರುಷ ಹಾಗೂ 18,522 ಮಹಿಳೆಯರು ಸೇರಿ ಒಟ್ಟು 44,073 ಪದವೀಧರ ಮತದಾರ ಅಂತಿಮ ಪಟ್ಟಿಯಲ್ಲಿದ್ದು, ಇವರು ಮಾತ್ರ ಮತಚಲಾಯಿಸಲು ಅರ್ಹರಾಗಿರುತ್ತಾರೆ. ಈ ಹಿಂದಿನ 2022ರ ಚುನಾವಣೆಯಲ್ಲಿದ್ದ 22 ಮತಗಟ್ಟೆಗಳೊಂದಿಗೆ, ಈ ಬಾರಿ 33 ಹೆಚ್ಚುವರಿ ಮತಗಟ್ಟೆಗಳನ್ನು ಸೇರಿಸಿ ಒಟ್ಟು ಮತಗಟ್ಟೆಗಳ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.

ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಒಟ್ಟು 350 ಜನ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಇವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ.  70 ಮತಗಟ್ಟೆ ಅಧಿಕಾರಿ, 70 ಸಹಾಯಕ ಮತಗಟ್ಟೆ ಅಧಿಕಾಗಳು, ಇದರೊಂದಿಗೆ ಎರಡು ಹಾಗೂ ಮೂರನೇ ಮತಗಟ್ಟೆ ಅಧಿಕಾರಿಗಳಾಗಿ ತಲಾ 70, ಸೂಕ್ಷ ವೀಕ್ಷಕರಾಗಿ 68 ಹಾಗೂ 2 ಮಾಸ್ಟರ್ ಟ್ರೈನರ್‍ಗಳು ಮತದಾನ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.

ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು: ಅಕ್ಟೋಬರ್ 6 ರಂದು ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದ್ದು,  ಪರಿಶೀಲನೆ ನಂತರ ಒಟ್ಟು 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಶಿ ಹುಲಿಕುಂಟೆ ಮಠ್, ಭಾರತೀಯ ಜನತಾ ಪಕ್ಷದಿಂದ ಕೆ.ಎಂ.ಸುರೇಶ(ಸೋಮೇಶ್ವರ), ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಾಟೀಲ್ ಅಭ್ಯರ್ಥಿಗಳಾಗಿದ್ದರೆ, ಪಕ್ಷೇತರರಾಗಿ ಕಪನಿ ಗೌಡ, ಚಿಕ್ಕರಾಜು ಎಸ್ ಯಾದವ್, ಲಕ್ಷ್ಮಯ್ಯ.ಆರ್, ಲಕ್ಷ್ಮಿಕಾಂತ್ ಎಸ್  ಯಾದವ್, ಶಶಿ ಹುಲಿಕಟ್ಟೆ, ಸೈಯದ್ ಅಕ್ಫಾ ಅಹಮದ್, ಅಡ್ವಕೇಟ್ ಬರೀದ್ ಸ್ಪರ್ಧಿಸಿದ್ದಾರೆ.

ಮತದಾನವು ಬ್ಯಾಲೆಟ್ ಪೇಪರ್ ಮೇಲೆ ನಡೆಯಲಿದ್ದು, ಮತದಾರು ಪ್ರಾಶಸ್ತ್ಯ ಆಧಾರದಲ್ಲಿ ಮತಚಲಾಯಿಸಬೇಕು. ಮತದಾನ ಮಾಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಾದರಿ ವೀಡಿಯೊ ಸಿದ್ದಪಡಿಸಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದಾಗಿ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ಈಗಾಗಲೇ ಭಾವಚಿತ್ರ ರಹಿತ ಅಂತಿಮ ಮತದಾರ ಪಟ್ಟಿ ವೆಬ್ ಸೈಟ್‍ನಲ್ಲಿ ಲಭ್ಯವಿದ್ದು, ಪದವಿಧರ ಮತದಾರರು  https://ceo.karnataka.gov.in/393/election-rolls-of-graduates-and-teachers-constituencies--2026/en   ಪರಿಶೀಲಿಸಿಕೊಳ್ಳಬಹುದು. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಸಂದೇಹಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.

ಎಸ್.ಐ.ಆರ್: ಮತದಾರರ ಪರಿಶೀಲನೆ ಕಾರ್ಯ ಪೂರ್ಣ
ಪತ್ರಿಕಾಗೋಷ್ಠಿ ತರುವಾಯ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ವಿಶೇಷ ಮತಪಟ್ಟಿ ಪರಿಷ್ಕರಣೆ ಅಂಗವಾಗಿ ಅನರ್ಹರೆಂದು ಗುರುತಿಸಲಾಗಿದ್ದ ಮತದಾರರ ವಿಚಾರಣೆ ಕಾರ್ಯ ಪ್ರಗತಿಯಲ್ಲಿದ್ದು
, ಮಂಗಳಾವರ 250 ಮತದಾರ ವಿಚಾರಣೆ ಪೂರ್ಣಗೊಂಡರೆ, ನೋಟಿಸ್ ನೀಡಿದ ಎಲ್ಲ 2,372 ಮತದಾರರ ವಿಚಾರಣೆ ಪೂರ್ಣಗೊಳ್ಳಿದೆ. ಶೀಘ್ರದಲ್ಲೇ ಅಂತಿಮ ಆದೇಶ ನೀಡಲಾಗುವುದು. ಜಿಲ್ಲೆಯಲ್ಲಿ ಫಾರಂ 7 ಅರ್ಜಿಗಳ ಆಧಾರದಲ್ಲಿ ಯಾವುದೇ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಬಿ.ಎಲ್.ಓ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹರಾದ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡದಿರುವುದಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ಜಿಲ್ಲೆಯಲ್ಲೇ ಅತಿ ಹೆಚ್ಚು ಪದವೀಧರ ಮತದಾರರು: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1.78 ಲಕ್ಷ ಪದವೀಧರ ಮತದಾರರು ಇದ್ದರೆ, ಈ ಪೈಕಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 44,073  ಮತದಾರರು ಇದ್ದು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆ. ಈ ಹಿನ್ನಲೆಯಲ್ಲಿಯೇ 22 ಮೂಲ ಸೇರಿ 33 ಹೆಚ್ಚುವರಿ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ-2026 ಸಂಬಂಧಿಸಿದ ಭಾಚಿತ್ರಗಳು ಇರುವ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚುನಾವಣೆ ತಹಶೀಲ್ದಾರ್ ಫಾತೀಮ ಬಿಬಿ, ಕಾಂಗ್ರೇಸ್ ಪಕ್ಷದ ಡಿ.ಎನ್.ಮೈಲಾರಪ್ಪ, ಜೆ.ಡಿ.ಎಸ್ ಪಕ್ಷದ ಗೋಪಾಲಸ್ವಾಮಿ ನಾಯಕ, ಆಪ್ ಪಕ್ಷದ ರಾಮಪ್ಪ ಸೇರಿದಂತೆ ಮತ್ತರರು ಇದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಆಯುಧ ಪೂಜೆಕೆಪಿಸಿಸಿ ನಿಧಿಗೆ ಶಾಲೂ-ಹಾರದ ಬದಲು ದೇಣಿಗೆ ನೀಡಿ: ಬಿ.ಕೆ. ಹರಿಪ್ರಸಾದ್ ಕರೆ ಹಿರಿಯೂರು ತಾಲೂಕಿನಲ್ಲಿ ಮಳೆ ಅಬ್ಬರ: ಬಬ್ಬೂರು ಸಮೀಪದ ಜಮೀನಿನಲ್ಲಿ ನಿಂತ ಮಳೆ ನೀರುಸಮಾನತೆಗಾಗಿ ಸಹಭೋಜನ: ಅರಿವು ಭಾರತದಿಂದ ವಿಶಿಷ್ಟ ಚಿಂತನೆ–ರಾಹುಲ್ ಗಾಂಧಿ ವಿರುದ್ಧ ಗರ್ಭಿಣಿ ಪತ್ರಕರ್ತೆಯ ಗಂಭೀರ ಆರೋಪ: ಪೊಲೀಸ್ ಆಯುಕ್ತರಿಗೆ ಕ್ರಿಮಿನಲ್ ದೂರುಸರ್ಕಾರಿ ನೌಕರರು ಹಾಗೂ ಗುತ್ತಿಗೆ ಸಿಬ್ಬಂದಿಗೆ ರಾತ್ರಿ ಹಾಜರಾತಿ ಕಡ್ಡಾಯ: ರಾಜ್ಯ ಸರ್ಕಾರದ ಮಹತ್ವದ ಆದೇಶಮಹತ್ವದ ಆಡಳಿತಾತ್ಮಕ ಸುಧಾರಣೆ: ಸಕಾಲ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಸೇವೆಗಳು ಹಾಗೂ ಆರ್‌ಟಿಐ ಆನ್‌ಲೈನ್ ಕಡ್ಡಾಯನೈಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ: ಮುಗಿಲು ಮುಟ್ಟಿದ ದಟ್ಟ ಕಪ್ಪು ಹೊಗೆ, ಟ್ರಾಫಿಕ್ ಜಾಮ್!