Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ವಿದ್ಯಾರ್ಥಿ, ಯುವ ಜನಾಂಗ ಪಾರಂಪರಿಕ ಕಲೆ ತಿಳಿದುಕೊಳ್ಳಬೇಕು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಂಗ ಕಲೆಗಳಿಗೆ ಆರ್ಥಿಕವಾಗಿ ಬಲ ತುಂಬದಿದ್ದರೆ ಬಹಳ ಕಾಲ ಉಳಿಯುವುದಿಲ್ಲ ಎಂದು ರಂಗಾಯಣ ನಿರ್ದೇಶಕ ಮೈಸೂರಿನ ಸತೀಶ ತಿಪಟೂರು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಚಿತ್ರದುರ್ಗ ಪರಿಸರದ ಬಯಲಾಟಗಳು ಎರಡು ದಿನಗಳ ವಿಚಾರ ಸಂಕಿರಣವನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಮೃದಂಗ ಬಾರಿಸುವ ಮೂಲಕ ಶನಿವಾರ ಉದ್ಗಾಟಿಸಿ ಮಾತನಾಡಿದರು.

ದೊಡ್ಡಾಟ, ಬಯಲಾಟ, ಇನ್ನಿತರೆ ರಂಗ ಪ್ರಾಕಾರಗಳು ಜನಪದರ ಬದುಕಿನ ಒಂದು ಭಾಗ. ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ ಕಲೆಗಳ ಪುನಶ್ಚೇತನಕ್ಕೆ ಯೋಚಿಸುತ್ತಿದ್ದೇವೆ. ಶೂದ್ರ ಸಮುದಾಯದವರು ಕಲೆಗಳನ್ನು ಕಟ್ಟಿ ಬೆಳೆಸಿದ್ದಾರೆಯೇ ವಿನಃ ಮೇಲ್ವರ್ಗದವರಲ್ಲ. ಆರ್ಥಿಕವಾಗಿ ಕಲೆಗಳು ಸದೃಢವಾಗದಿದ್ದರೆ ಅಸ್ಪಶ್ಯ ಕಲೆಗಳಾಗಿಯೇ ಉಳಿದುಬಿಡುತ್ತವೆಂದು ವಿಷಾದಿಸಿದರು.

ಆರ್ಥಿಕ ಲಾಭಕ್ಕಾಗಿ ಕಲೆಗಳನ್ನು ಮೇಲ್ವರ್ಗದವರು ಹೈಜಾಕ್ ಮಾಡುತ್ತಿರುವುದರ ವಿರುದ್ದ ಕಲಾವಿದರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಸಾಂಸ್ಕತಿಕ ನುಸುಳುಕೋರರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವರ್ಷದ ರಂಗಕಲೆ ಡಿಪ್ಲೋಮಾ ಕೋರ್ಸ್ನ್ನು ಎರಡು ವರ್ಷಗಳಿಗೆ ವಿಸ್ತರಿಸಿ ದಕ್ಷಿಣ ಭಾರತಕ್ಕೆ ವ್ಯಾಪಿಸಬೇಕು. ಬಯಲಾಟ ಕಾರ್ಯಾಗಾರವಾಗಬೇಕು. ರಂಗಕಲೆಗಳು ಯೂರೋಪಿಯನ್ ಮಾಡಲ್ಗಳಿರುವುದರಿಂದ ರಂಗಾಯಣ ರಂಗಶಾಲೆಯನ್ನು ದ್ರವಿಡಿಯನ್ ಇನ್ಸಿಟಿಟ್ಯೂಟ್ ಶಾಲೆಗಳನ್ನಾಗಿ ಮಾರ್ಪಡಿಸಬೇಕಿದೆ ಎಂದು ಸಲಹೆ ನೀಡಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ವಿದ್ಯಾರ್ಥಿಗಳು, ಯುವ ಜನಾಂಗ ಪಾರಂಪರಿಕ ಕಲೆಗಳನ್ನು ತಿಳಿದುಕೊಳ್ಳಬೇಕು. ರಂಗಭೂಮಿಯನ್ನು ಕಟ್ಟಿದವರು ಅನಕ್ಷರಸ್ಥರು, ರೈತರು, ಕೂಲಿಕಾರರು. ಇವರುಗಳಿಗೆ ಪುರಾಣಗಳಲ್ಲಿ ವಾದ್ಯಗಳನ್ನು ನುಡಿಸುವುದು ಗೊತ್ತು. ಕಲಾವಿದರ ಪ್ರದರ್ಶನಕ್ಕೆ ಆರ್ಥಿಕ ಸಂಪನ್ಮೂಲ ಗಟ್ಟಿಯಾಗಬೇಕು. ಶ್ರಮಿಕ ವರ್ಗದಿಂದ ಮಾತ್ರ ಇನ್ನು ಬಯಲಾಟ ಕಲೆ ಉಳಿದಿದೆ. ಚಿತ್ರದುರ್ಗಕ್ಕೆ ಹತ್ತಿರವಾಗಿರುವ ಹಳ್ಳಿಗಳಲ್ಲಿ ಅನೇಕ ಕಥೆಗಾರರಿದ್ದಾರೆ. ಬಯಲಾಟ ಸರಳ ಮತ್ತು ಸುಲಭವಾದ ಸಂವಹನ. ಜಿಲ್ಲೆಯ ಪಾರಂಪರಿಕ ಕಲೆ ಬಯಲಾಟವನ್ನು ಉಳಿಸಬೇಕಿದೆ ಎಂದು ಮನವಿ ಮಾಡಿದರು.

ರಂಗ ಸಮಾಜ ಸದಸ್ಯ ಡಾ.ರಾಜಪ್ಪ ದಳವಾಯಿ ಮಾತನಾಡಿ ಜಾತ್ಯತೀತ, ಮಾನವೀಯ ಮೌಲ್ಯಗಳು ಬಯಲಾಟದಲ್ಲಿದೆ. ಊರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಬಯಲಾಟಗಳು ನಾಶವಾಗುತ್ತಿವೆ. ರಂಗ ಶಿಕ್ಷಣ ವ್ಯಾಪಕವಾಗಿ ಕರ್ನಾಟಕದಲ್ಲಿ ಬೆಳೆದಿದೆ. ಬಯಲಾಟ ದೊಡ್ಡ ಕಲಾ ಮಾಧ್ಯಮ. ಸ್ಥಳಿಯ ರಂಗಕಲೆ ಹಾಗೂ ಹಳ್ಳಿಗಳಲ್ಲಿ ವಿಭಿನ್ನ ಬದಲಾವಣೆಯಾಗಿರುವುದರಿಂದ ಬಯಲಾಟವನ್ನು ಉಳಿಸಬೇಕಿದೆ ಎಂದರು.

ಬಯಲಾಟ ಪ್ರಯೋಗ ಸವಾಲಾಗಿ ಪರಿಣಮಿಸಿದೆ. ವಿದ್ವತ್ಗೆ ಸಮಸ್ಯೆಯಿಲ್ಲ. ಇರುವುದು ಪ್ರಯೋಗದ ಸಮಸ್ಯೆ. ಯಾವುದೇ ಕಲಾವಿದರನ್ನು ಅಗೌರವದಿಂದ ಕಾಣಬಾರದು. ಬಯಲಾಟಕ್ಕೆ ಪ್ರೋತ್ಸಾಹ ಬೇಕು. ಸರಳಗೊಳಿಸಿ ಬಯಲಾಟವನ್ನು ಪ್ರೇಕ್ಷಕರ ಮುಂದಿಡಬೇಕು. ಬಯಲಾಟದ ಪಲ್ಲವಿತ ಪ್ರದೇಶ ಚಿತ್ರದುರ್ಗವಾಗಿರುವುದರಿಂದ ಪ್ರಯೋಗವಾಗದಿದ್ದರೆ ಬಯಲಾಟ ಉಳಿಯುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಅಧ್ಯಯನ ವಿಭಾಗ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಂ.ಮೈತ್ರಿ ಮಾತನಾಡಿ ಬಯಲಾಟ ಬದುಕಿನ ಭಾಗ. ಬಹಳಷ್ಟು ಹಳ್ಳಿಗಳಲ್ಲಿ ಬಯಲಾಟ ಕಲಾವಿದರಿದ್ದಾರೆ. ವೇಷಭೂಷಣ ಆಕರ್ಷಣೀಯವಾಗಿರುವುದರಿಂದ ಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಹಬ್ಬಗಳು ಕಲೆಗಳ ಹಿಂದೆ ಜ್ಞಾನ ವಿಜ್ಞಾನವಿದೆ. ಕಲೆಗಳ ಉಳಿವಿಗೆ ಸರ್ಕಾರ ಗಮನ ಕೊಡಬೇಕೆಂದು ವಿನಂತಿಸಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಬಯಲು ಪ್ರದೇಶ ಚಿತ್ರದುರ್ಗ ಶ್ರಮಿಕರ ನೆಲ. ಹೆಚ್ಚಾಗಿ ತಳ ಸಮುದಾಯದವರೆ ವಾಸಿಸುವ ಪ್ರದೇಶ. ನೆಲವನ್ನು ನಂಬಿ ಬದುಕುತ್ತಿರುವ ಇಲ್ಲಿ ತಳ ಶ್ರಮಿಕ ಸಮುದಾಯ ಬುಡಕಟ್ಟು ಮೂಲದವರು ಅಕ್ಷರದಿಂದ ವಂಚಿತರಾದರು ಕಲೆಯನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಬಡತನವನ್ನು ಮರೆತು ಇಲ್ಲಿನ ಕಲೆ ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆಂದು ಹೇಳಿದರು.

ಹಣ, ಅಧಿಕಾರ, ಪ್ರಶಸ್ತಿ, ಸನ್ಮಾನಗಳಿಂದ ದೂರವಿದ್ದು, ಕಲೆಯನ್ನು ಗೌರವಿಸಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಇಂತಹ ಕಲಾವಿದರಿದ್ದಾರೆ. ಆದರೆ ಸಮಕಾಲೀನ ಸಂದರ್ಭ ವ್ಯವಹಾರಿಕ ಬದುಕನ್ನೆ ಮುಖ್ಯ ಎಂದು ಭಾವಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಥಿತ್ಯಂತರಗೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ ವ್ಯವಹಾರಿಕ ಜಗತ್ತಿನಿಂದ ದೂರವೆ ಉಳಿದು ನೆಲ, ಕಲೆಯನ್ನು ಜನರನ್ನು ನಂಬಿ ಜೀವಿಸುತ್ತಿರುವ ಅಪರೂಪದ ಕಲಾವಿದರಿದ್ದಾರೆಂದರು.

ಎನ್.ಸಿ.ಸಿ. ಅಧಿಕಾರಿಗಳಾದ ಪ್ರೊ.ಮಂಜುನಾಥ, ಡಾ.ವಿ.ಪ್ರಸಾದ, ಡಾ.ಬಿ.ಕೆ.ಬಸವರಾಜು, ವ್ಯವಹಾರ ನಿರ್ವಹಣಾಶಾಸ್ತ್ರ ಮುಖ್ಯಸ್ಥರಾದ ಡಾ.ಮೇಘನಾ, ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಪ್ರೊ.ಜಮುನಾರಾಣಿ ಇವರುಗಳು ವೇದಿಕೆಯಲ್ಲಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!