Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿದ್ಯಾರ್ಥಿಗಳು ಸೃಜನ ಶೀಲತೆ ಹಾಗೂ ಕೌಶಲ್ಯ ರೂಢಿಸಿಕೊಳ್ಳಬೇಕಿದೆ-ಧೀರಜ್ ಮುನಿರಾಜ್

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಂದಿನ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸೃಜನಶೀಲತೆ ಹಾಗೂ ಕೌಶಲ್ಯ ರೂಢಿಸಿಕೊಳ್ಳಬೇಕಿದೆ  ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ರೈಲ್ವೆ ನಿಲ್ದಾಣದ ಸಮೀಪದ  ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ವತಿಯಿಂದ ರಾಯಲ್ ನಂದನ ಹಾಲ್ ನಲ್ಲಿ ನಡೆದ ನವೋತ್ಸವ-2026 ಪ್ರತಿಭಾ ಪುರಸ್ಕಾರ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದೊಡ್ಡಬಳ್ಳಾಪುರದ ಸಮೀಪ ಪಾಕ್ಸ್ಕಾನ್ ಮೊದಲಾದ ಹೊಸ ಕಂಪನಿಗಳು ಸೇರಿದಂತೆ  ನೂರಾರು ಕಂಪನಿಗಳು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕೌಶಲ್ಯ ಹಾಗೂ  ಸೃಜನಶೀಲತೆಯಿದ್ದರೆ ಯಾವುದೇ ಉದ್ಯೊಗದಲ್ಲಾದರೂ ಯಶಸ್ಸು ಗಳಿಸಬಹುದಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯ ರೂಢಿಸಿಕೊಂಡರೆ ಕಂಪನಿಗಳಲ್ಲಿ ಕೆಲಸ ಪಡೆಯಲು ಸಾಧ್ಯ. ಸಣ್ಣ ಕೆಲಸ ಮಾಡುವವರೂ ಇನ್ನೊಬ್ಬರ ಒತ್ತಡ ಅಥವಾ ಬಲವಂತದಿಂದ ವ್ಯಾಸಂಗ ಮಾಡುವುದಕ್ಕಿಂತ ಸ್ವಇಚ್ಛೆಯಿಂದ ಓದಿದಾಗ ಮಾತ್ರ ಯಶಸ್ಸು ಸಾಧ್ಯ.  ಮಣ್ಣಿಗೆ ಬಿದ್ದ ಬೀಜ ಹಾಗೂ ಮನಸ್ಸಿಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವುದಿಲ್ಲ, ಎಂದಾದರೂ ಒಂದು ದಿನ ಫಲ ನೀಡೇ ನೀಡುತ್ತದೆ ಎಂದರು.

Advertisement

ಬೆಂಗಳೂರು ದಾಸರಹಳ್ಳಿಯ ನಾರಾಯಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣ ಕುಮಾರ್ ಮಾತನಾಡಿ, ಮಾನವ ದೇಹವು ದೇವರು ಸೃಷ್ಟಿ ಮಾಡಿರುವ ಒಂದು ಅದ್ಬುತ ಕಂಪ್ಯೂಟರ್. ಇದಕ್ಕೆ ನಾವು ಮೊದಲು ಸರಿಯಾದ ಆಪರೇಟಿಂಗ್ ಸಿಸ್ಟಮ್ ಹಾಕಬೇಕು. 16 ವರ್ಷದ ನಂತರ ಆಯಾ ಕಾಲಘಟ್ಟದ ಸಾಫ್ಟ್ ವೇರ್ ಗಳನ್ನು ಹಾಕಬೇಕು. ಆದರೆ ನಾವು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಯಾವುದೇ ಪ್ರಯೋಜನವಿಲ್ಲ.ಜ್ಞಾನ ಎನ್ನುವುದು ಶಿಕ್ಷಕರು ಹಾಗೂ ಪುಸ್ತಕಗಳಲ್ಲಿ ಇದ್ದರೆ ಯಾವುದೇ ಉಪಯೋಗವಿಲ್ಲ. ಅದು ವಿದ್ಯಾರ್ಥಿಗಳಿಗೆ ತಲುಪಿದಾಗ ಮಾತ್ರ ಸಾರ್ಥಕ. ಪಿಯುಸಿ ಎರಡು ವರ್ಷಗಳು ಬದುಕಿನ ಕಾಲಘಟ್ಟಲ್ಲಿ ಬಹು ಮುಖ್ಯವಾಗಿದ್ದು, ಈ ವೇಳೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಷ್ಟು ನಮ್ಮ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲಿದೆ ಎಂದರು.

ಶ್ರೀ ರಾಮ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಾತ್ಕಾಲಿಕ ಆಕರ್ಷಣೆಗಳಿಗೆ ಒಳಗಾಗದೆ, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಆರೋಗ್ಯವನ್ನು ಸಹ ನಿರ್ಲಕ್ಷಿಸದೇ,  ಉತ್ತಮ ಆರೋಗ್ಯ ಕಾಪಾಡಿಕೊಂಡರೆ ನಮ್ಮ ಗುರಿ ಮುಟ್ಟಲು ಸಾಧ್ಯ. ದುಶ್ಚಟಗಳಿಂದ ನಮ್ಮ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯ ಹಾಲಾಗುವುದೆಂಬ ಎಚ್ಚರ ಇರಬೇಕು ಎಂದರು.

 ಕಾಲೇಜಿನ ಪ್ರಾಂಶುಪಾಲ ಶಶಾಂಕ್.ಎಚ್.ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸ್ವಾಗತಿಸಲಾಯಿತು. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

 ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಚೇತನ್.ಎಸ್.ಸಿ, ಕೇಶವ ಮೂರ್ತಿ.ಪಿ, ಸುಜ್ಞಾನ ದೀಪಿಕ ಜಾಗೃತಿ ಸಂಚಾಲಕ ಎಂ.ಎಸ್.ಮಂಜುನಾಥ್  ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ, ಆತ್ಮವಿಶ್ವಾಸ ಬೆಳೆಸುವುದೇ ಕ್ರೀಡೆಯ ಉದ್ದೇಶ ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:ಮನಸ್ಸಿನ ಆರೋಗ್ಯಕ್ಕೆ ಅರಿವೇ ಮೊದಲ ಚಿಕಿತ್ಸೆ:ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ  ದೃಷ್ಟಿಕೋನ ಚಿಂತನೆ ಕಾರ್ಯಕ್ರಮ ಆಯೋಜನೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಸರ್ಕಾರದಿಂದ ಆಹ್ವಾನಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಶೀಘ್ರ ಬಿಡುಗಡೆಗೆ ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ ಶಿವಲಿಂಗಪ್ಪಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿರಾಹುಲ್ ಗಾಂಧಿ ಪ್ರಧಾನಿಯಾಗಲು ಹುಚ್ಚರಂತೆ ಓಡಾಡುತ್ತಿದ್ದಾರೆ: ಸಂಸದ ಗೋವಿಂದ್ ಕಾರಜೋಳ ವಾಗ್ದಾಳಿಅನುಭವ ಮತ್ತು ಜ್ಞಾನ ಎರಡೂ ನನ್ನಲ್ಲಿಲ್ಲ- ಸಂಸದ ಗೋವಿಂದ್ ಕಾರಜೋಳ