Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಹೀಗೊಂದು ಒಳ ಮನಸ್ಸು....

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ಹೀಗೊಂದು ಒಳ ಮನಸ್ಸು....

ನೀನೊಬ್ಬ ಹುಚ್ಚ ಎಂದು ಯಾರೋ ಹೇಳಿದರು.....

ಅದಕ್ಕೆ ನನ್ನ ಉತ್ತರ,
" ಹೌದು, ಆ ಬಗ್ಗೆ ನನಗೆ ಅನುಮಾನವಿತ್ತು. ಅದನ್ನು ದೃಢಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸ ದಾರಿಯ ಹುಡುಕಾಟವೇ ಒಂದು ಹುಚ್ಚುತನ. ಈ ಹದಗೆಟ್ಟ ವ್ಯವಸ್ಥೆಯ ಬದಲಾವಣೆಗೆ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಲು ಹುಚ್ಚನ ಪಾತ್ರದ ಅವಶ್ಯಕತೆ ಇದೆ."

ನೀನೊಬ್ಬ ಸೂಳೆ ಮಗ ಎಂದು ಇನ್ನೊಬ್ಬರು ಹೇಳಿದರು..

" ಹೌದು, ನನ್ನ ತಾಯಿಯ ಸ್ವಾತಂತ್ರ್ಯವನ್ನು, ಅನಿವಾರ್ಯತೆಯನ್ನು, ಅಸಹಾಯಕತೆಯನ್ನು, ಶೋಷಣೆಯನ್ನು ಅರ್ಥಮಾಡಿಕೊಂಡು ಆ ಮಾತನ್ನು ಅಭಿಮಾನದಿಂದ ಒಪ್ಪಿಕೊಳ್ಳುತ್ತೇನೆ " ಎಂದೆ.

ಮತ್ತೊಬ್ಬರು ಹೇಳಿದರು,
ನೀನೊಬ್ಬ ದ್ವಂದ್ವ ನಿಲುವಿನ ಎಡಬಿಡಂಗಿ.....

" ಹೌದು, ಅದೇ ನನ್ನ ಸಾಮರ್ಥ್ಯ. ಏಕೆಂದರೆ ಒಮ್ಮೆ ಅಂಕಿ ಸಂಖ್ಯೆಗಳ ಗಣಿತ ಹೊರತುಪಡಿಸಿ ಇತರ ವಿಷಯಗಳಲ್ಲಿ ಸ್ಪಷ್ಟತೆ ಮೂಡಿದರೆ ಅಲ್ಲಿಗೆ ನಿಮ್ಮ ಜ್ಞಾನದ ಬೆಳವಣಿಗೆ ನಿಲ್ಲುತ್ತದೆ. ನನ್ನಲ್ಲಿ ಅದು ನಿಲ್ಲಬಾರದು. ಬದುಕಿನ ಕೊನೆಯವರೆಗೂ ಜ್ಞಾನದ ಹಸಿವು ನಿರಂತರವಾಗಿ ಮತ್ತು ಅದರ ಎಲ್ಲಾ ಮಗ್ಗುಲುಗಳನ್ನು ನೋಡಲು ಪ್ರಯತ್ನಿಸುತ್ತಿರಬೇಕು. ಅದಕ್ಕಾಗಿ ನಾನು ಎಡಬಿಡಂಗಿಯಾಗಿರಲು ಇಷ್ಟಪಡುತ್ತೇನೆ."

ಯಾರೋ ಹೇಳಿದರು,
" ನೀವು ಅಧ್ಯಯನ ಮಾಡಿ, ಚಿಂತಿಸಿ, ಓದಿ, ದಾಖಲೆ ಸಾಕ್ಷಿಗಳ ಸಮೇತ ಬರೆಯಿರಿ ಎಂದು. "

ಅದಕ್ಕೆ ನಾನು ಹೇಳಿದೆ,
" ನಾನು ವಾಸಿಸುತ್ತಿರುವುದು ಭಾರತೀಯ ಸಮಾಜದಲ್ಲಿ. ಇಲ್ಲಿನ ಬಹುತೇಕ ಜನರಿಗೆ ಇನ್ನೂ ಸರಿಯಾಗಿ ಅಕ್ಷರ ಜ್ಞಾನವೇ ತಿಳಿದಿಲ್ಲ. ಕೆಲವರಿಗೆ ಅಕ್ಷರ ತಿಳಿದಿದ್ದರೂ ಓದುವಷ್ಟು ಸಮಯ ಮತ್ತು ಆಸಕ್ತಿ ಇಲ್ಲ. ಅದು ಇದ್ದರೂ ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು ಅವರ ದಿನನಿತ್ಯದ ಅನಿವಾರ್ಯತೆಗಳು ಬಿಡುವುದಿಲ್ಲ. ಆದ್ದರಿಂದ ಅಧ್ಯಯನ, ಚಿಂತನೆ, ದಾಖಲೆ, ಸಾಕ್ಷಿಗಳಿಗಿಂತ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಆಸಕ್ತರು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ನೋವಿನಲ್ಲಿರುವ, ಸಂಕಷ್ಟದಲ್ಲಿರುವ, ಅಸಹಾಯಕರು ನನಗೆ ಮುಖ್ಯವೇ ಹೊರತು ಪ್ರಕಾಂಡ ಪಾಂಡಿತ್ಯದ, ಅಪಾರ ಓದಿನ, ಸಿದ್ಧಾಂತಗಳನ್ನು ಅರೆದು ಕುಡಿದವರಲ್ಲ.
ಸಾಮಾನ್ಯ ಜನರ ಭಾವನೆಗಳೇ ನನ್ನ ಭಾಷೆ. "

ಕೆಲವರು ಹೇಳಿದರು.
" ನೀವು ಪ್ರಚಾರಕ್ಕಾಗಿ, ಸನ್ಮಾನಕ್ಕಾಗಿ, ಪ್ರಶಸ್ತಿಗಾಗಿ, ಮೆಚ್ಚುಗೆಗಾಗಿ ಬರೆಯುವಿರಿ ಎಂದು "

ನಾನು ಹೇಳಿದೆ,
" ನಾನು ಬರೆಯುವುದರಿಂದ ಓದುಗರು ನೀಡುವ ಪ್ರತಿಕ್ರಿಯೆಯ ಪ್ರಚಾರ ಬಿಟ್ಟರೆ ನೀವು ಪ್ರಶಸ್ತಿಯೋ, ಸನ್ಮಾನವೋ ಮಾಡಲು ಕರೆದರೂ ಅದನ್ನು ಒಪ್ಪಿಕೊಳ್ಳುವ ಮತ್ತು ಸ್ವೀಕರಿಸುವ ಸ್ಥಿತಿಯಲ್ಲಿಯೇ ನಾನು ಇಲ್ಲ. ಇನ್ನು ಅದಕ್ಕಾಗಿ ಪ್ರಯತ್ನಿಸುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ. ನಾನು ಕೇವಲ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಮಾತ್ರ ಕಾರ್ಯಕ್ರಮಗಳಿಗೆ ಹೋಗುತ್ತೇನೆ"...

ಮಾತುಗಳಿಗಿಂತ, ಅಕ್ಷರಗಳಿಗಿಂತ, ನಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಗಳೇ
ಬಹುಮುಖ್ಯ ಮತ್ತು ಅಮೂಲ್ಯ....

ಕೆಲವರು ಬರೆಯುತ್ತಾರೆ, ಅತ್ಯುತ್ತಮ ಭಾಷೆ, ಭಾವ, ವಾಕ್ಯ, ಛಂದಸ್ಸುಗಳ ಸಮಾಗಮದಂತೆ. ಆದರೆ ಅವರ ನಿಜ ಜೀವನದ ವರ್ತನೆ ತುಂಬಾ ಬಾಲಿಶವಾಗಿ, ಅಪಾಯಕಾರಿಯಾಗಿ ಮತ್ತು ಆತ್ಮಸಾಕ್ಷಿ ಮರೆಮಾಚಿ ಮುಖವಾಡವನ್ನು ಹೊಂದಿರುತ್ತದೆ....

ಓದುಗರ ಸಂಖ್ಯೆ ಮುಖ್ಯವಲ್ಲ. ಅವರ ವ್ಯಕ್ತಿತ್ವ, ಪ್ರಬುದ್ಧ ಮನಸ್ಸುಗಳ ಗುಣಮಟ್ಟ ಮುಖ್ಯ. ...

ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತಾ ಮತ್ತು ಸ್ವೀಕರಿಸುತ್ತಾ......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ. ಎಚ್.ಕೆ.
9844013068.......

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!