Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಶಿಕ್ಷಕರಲ್ಲಿ ಪೂರ್ವ ಸಿದ್ಧತೆ ಹಾಗೂ ಸಮಯ ಪಾಲನೆ ಇರಬೇಕು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರುಗಳಲ್ಲಿ ಪೂರ್ವಸಿದ್ದತೆ ಹಾಗೂ ಸಮಯ ಪಾಲನೆಯಿರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದರು.


ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ(ಬಿಇಡಿ) ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂ ನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇ.ಡಿ ಶಿಕ್ಷಣ ಪಡೆದಾಕ್ಷಣ ಶಿಕ್ಷಕರಾಗಬೇಕೆಂದನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಬಹುದು. ಅದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಕರುಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡಲು ಟಿ.ಇ.ಟಿ.ಪರೀಕ್ಷೆಗಳನ್ನು ನಡೆಸುತ್ತಿದೆ. ಮಹತ್ವಪೂರ್ಣ ಸ್ಥಾನ ಗುರುವಿಗಿದೆ. ಮಕ್ಕಳಲ್ಲಿ ನೆನಪಿನ ಸಾಮರ್ಥ್ಯವಿರಬೇಕು. ಶಿಕ್ಷಕ ಎಂದು ಹೇಳಿಕೊಳ್ಳಲು ಹಿಂಜರಿಯುವಂತ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದರೆ ವೃತ್ತಿಯನ್ನು ಗೌರವಿಸಲು ಆಗುವುದಿಲ್ಲ. ವೃತ್ತಿ ಮತ್ತು ವಿಷಯವನ್ನು ಶಿಕ್ಷಕ ಗೌರವಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಬಹುದು. ಕಲಿಕೆ ಅನುಕರಣೀಯವಾಗಿರಬೇಕು. ಮೌಲ್ಯಗಳು ಕಡಿಮೆಯಾಗುತ್ತಿವೆ. ಕಲಿಕೆಯೆಂದರೆ ಬರವಣಿಗೆಯಲ್ಲ. ಅನುಭವದಿಂದ ಬರಬೇಕು. ಮಕ್ಕಳಿಗೆ ಪಾಠ ಮಾಡುವುದಷ್ಟೆ ಅಲ್ಲ. ಪೂರಕ ಮಾಹಿತಿ ಕೊಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಪ್ರತಿ ಮಗುವಿನ ಕಡೆ ವೈಯಕ್ತಿಕ ಗಮನ ಕೊಟ್ಟಾಗ ಬೆಳವಣಿಗೆಯಾಗುತ್ತದೆ. ಶಿಕ್ಷಕರ ಸಂವಹನ, ಭಾಷೆ ಮಕ್ಕಳಿಗೆ ತಲುಪಬೇಕು ಎಂದರು.

ಸಾಮರಸ್ಯ ಪ್ರಶಸ್ತಿ ಪುರಸ್ಕೃತರಾದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾದರೆ ನಿಮ್ಮ ಅರಿವಿಲ್ಲದೆ ಗುರಿ ಮುಟ್ಟುತ್ತೀರ. ಸಾಧನೆಯ ಮೆಟ್ಟಿಲು ಹತ್ತುವ ಒಂದು ಕ್ಷಣ ಖುಷಿ ಪಡಬೇಕು. ಉಳಿದಂತೆ ಹಿಂದಿನದನ್ನು ಮರೆಯಬಾರದು. ಎರಡು ಸಾವಿರ ವರ್ಷಗಳ ಹಿಂದಿನ ಬುದ್ದ, ಎಂಟು ನೂರು ವರ್ಷಗಳ ಬಸವಣ್ಣ ಸೇರಿದಂತೆ ಕ್ರಾಂತಿಕಾರಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಗುರು ಪೂರ್ಣಿಮೆಗೆ ಮಹತ್ವವಿದೆ. ಪಾಠ ಕಲಿಸುವ ಶಿಕ್ಷಕರುಗಳಷ್ಟೆ ಗುರುಗಳಲ್ಲ. ಮಾರ್ಗದರ್ಶನ ಮಾಡುವವರು ಗುರುಗಳೆ ಎಂದು ಹೇಳಿದರು.

ನಿತ್ಯದ ಜೀವನದಲ್ಲಿ ದಾರ್ಶನಿಕರನ್ನು ಸ್ಮರಿಸಬೇಕು. ವೃದ್ದರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿಯೆಂದು ಅಂದುಕೊಳ್ಳಬೇಕು. ಆಗ ವೃತ್ತಿಯ ಪಾವಿತ್ರತೆ ಕಾಪಾಡಿದಂತಾಗುತ್ತದೆ. ಸಮಾನತೆ, ಸೌಹಾರ್ಧತೆಯಿಂದ ಸಾಮರಸ್ಯ ಬದುಕು ಕಟ್ಟಿಕೊಳ್ಳಬಹುದು. ಆಗ ಮಾತ್ರ ಸಮಾಜ, ದೇಶ, ಜಗತ್ತು ಉಳಿಯುತ್ತದೆಂದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವವರಿಗೆ ಗುರುವಿನ ಸ್ಥಾನವಿದೆ.

ಒಂದು ಅಕ್ಷರ ಕಲಿಸಿದವರನ್ನು ಗುರು ಎನ್ನುತ್ತೇವೆ. ತಾಯಿಯೆ ಮೊದಲ ಗುರು. ವ್ಯಾಸ ಮಹರ್ಷಿಗಳ ನೆನಪಿಗಾಗಿ ಗುರು ಪೂರ್ಣಿಮೆಯನ್ನು ಆಚರಿಸಲಾಗುವುದು. ಜಗತ್ತಿಗೆ ಸಾಮರಸ್ಯದ ಅಗತ್ಯವಿದೆ. ಶಿಕ್ಷಕನಿಗೆ ಸೇವಾ ಮನೋಭಾವವಿರಬೇಕು. ಸ್ವತಂತ್ರ ಪೂರ್ವದಲ್ಲಿ ಶೇ.೧೩ ರಷ್ಟು ಸಾಕ್ಷರತೆಯಿತ್ತು. ಈಗ ಸಾಕ್ಷರತೆ ಪ್ರಮಾಣ ಶೇ.೭೫ ರಷ್ಟಿದೆ. ಆದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕನಾದವನು ಉತ್ತಮ ನಡೆ, ನುಡಿ ಹೊಂದಿರಬೇಕು. ಎಷ್ಟೆ ಜ್ಞಾನವಂತರಾದರೂ ಅಹಂ ಇರಬಾರದು. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆಯನ್ನು ಜೀವನದಲ್ಲಿ ರೂಢಿಸಿಕೊಂಡು ಗುರುವಿಗೆ ಗೌರವಿಸುವುದನ್ನು ಕಲಿಯಬೇಕೆಂದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯರಾದ ಪ್ರೊ.ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಹನುಮಂತರೆಡ್ಡಿ ಜಿ. ಪ್ರೊ.ಮಂಜುನಾಥ್ ಒ.ಎಂ. ಇವರುಗಳು ವೇದಿಕೆಯಲ್ಲಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!