Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಶೋಷಿತರ ವಿಮೋಚನೆಗೆ ಧಮ್ಮ ಪಥವೇ ಹೆದ್ದಾರಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬುದ್ಧ ಬಹುತ್ವ ಭಾರತಕ್ಕೆ ಜ್ಞಾನವನ್ನು ಬೋಧಿಸಿದರು. ಚಾರ್ತುವರ್ಣಗಳಿಂದ ಬೇಸತ್ತ ಜನರಿಗೆ ಒಳ್ಳೆಯ ಜೀವನ ಕಟ್ಟಿಕೊಳ್ಳುವುದಕ್ಕೆ ಬುದ್ಧ ಸಂದೇಹ ಸಹಕಾರಿಯಾಗಿವೆ
,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರು ಅನುಭವಿಸುತ್ತಿರುವ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು  ತೊಲಗಿಸಿ  ಸ್ವಾಭಿಮಾನ ಮತ್ತು ಘನತೆಯ ಬದುಕನ್ನು ನಡೆಸುವಂತಾಗಲು ಶೋಷಿತರು ಪ್ರಜ್ಞಾಪೂರ್ವಕವಾಗಿ

ಬುದ್ದನ ಹಾದಿಯಲ್ಲಿ ಸಾಗುತ್ತ ಧಮ್ಮಪಥದಲ್ಲಿ ನಡೆದಾಗಲೇ ಆ ಸಮುದಾಯಗಳು ವಿಮೋಚನೆ ಕಡೆ ದೃಢತೆಯ ಹೆಜ್ಜೆ ಹಾಕಲು ಸಾಧ್ಯ ಎಂದು ಡಯಟ್ ಉಪನ್ಯಾಸಕರಾದ ರಾಮಚಂದ್ರಪ್ಪ ಅವರು ಮಂಗಳವಾರ ಅಂಬೇಡ್ಕರ್ ವಿಚಾರ ವೇದಿಕೆ ಚಿತ್ರದುರ್ಗ  ಮತ್ತು ಜಂಬೂದ್ವೀಪ ಕರ್ನಾಟಕ ಇವರ ಸಹಯೋಗದಲ್ಲಿ ಪುಲೆ ಅಧ್ಯಯನ  ಕೇಂದ್ರದಲ್ಲಿ ನಡೆದ ಧಮ್ಮದೀಕ್ಷಾ ದಿನದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕಾರ್ಯಕ್ರಮಕ್ಕೆ ಮೊದಲು ಬುದ್ದರ ಪ್ರತಿಮೆಗೆ ಪುಷ್ಪಾರ್ಚನೆಗೈದು ಸಾಮೂಹಿಕವಾಗಿ  ತ್ರಿಸರಣವನ್ನು ಪಠಿಸಲಾಯಿತು.

ಬುದ್ದಧಮ್ಮವನ್ನು ಅಂಬೇಡ್ಕರ್ ಅವರು ನವಬೌದ್ಧ ಧಮ್ಮವೆಂದೇ ಕರೆದಿದ್ದು ಈ ಧಮ್ಮದಲ್ಲಿ ಸಮತೆ ,ಕರುಣೆ ,ಮೈತ್ರಿ ಅಂತರ್ಗತವಾಗಿದೆ ಈ ಧಮ್ಮವು ವೈಚಾರಿಕ ನೆಲೆಯದ್ದಾಗಿದ್ದು ಎಲ್ಲಾ ಬಗೆಯ ಮೂಢನಂಬಿಕೆ ಮತ್ತು  ಕಂದಾಚಾರಗಳಿಂದ ಮುಕ್ತವಾಗಿದ್ದು 'ಬುದ್ದ ಮತ್ತು ಆತನ ಧಮ್ಮ' ಗ್ರಂಥವು ಬುದ್ದ ಧಮ್ಮವನ್ನು ತಿಳಿಯಲು ಮಹತ್ವದ್ದಾಗಿದೆ ಎಂದು ಕವಿ ಚಿಂತಕ ಎಚ್.ಆನಂದಕುಮಾರ್ ರವರು ಹೇಳಿದರು.

ವೈಜ್ಞಾನಿಕ ಅರಿವಿರುವ ಸಮಾಜ ಒಪ್ಪಿಕೊಳ್ಳಬಹುದಾದ ಒಂದೇ ಧಮ್ಮವೆಂದರೆ ಬೌದ್ದಧಮ್ಮವೆಂದೂ  ಸಂವಿಧಾನ ಮತ್ತು ಬೌದ್ದಧಮ್ಮವೇ ಶೋಷಿತರ ಪಾಲಿನ ಆಶಾಕಿರಣವಾಗಿವೆ ಎಂದು ಪ್ರಾಧ್ಯಾಪಕರಾದ ಎಚ್.ಡಿ.ಪೋತೆ ಮಾತನಾಡಿದರು.

ಬುದ್ಧ ಧಮ್ಮ ಅನುಸರಣೆ ಸರಳವಾಗಿದ್ದು, ಬುದ್ಧ ಚಿಂತನೆಗಳಿಂದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆಂದು ವೇದಾಂತ ಏಳಂಜಿ ತಿಳಿಸಿದರು. ನಂತರ ಜಿಲ್ಲೆಯಲ್ಲಿ ಬುದ್ಧನ ಉಪಾಸಕರು ಲಕ್ಷಾಂತರ ಜನರಿದ್ದಾರೆ ಅದಕ್ಕಾಗಿ ಬುದ್ಧ ವಿಹಾರದ ಸ್ಥಾಪನೆ ಬಗ್ಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕರಾದ ರಾಮಣ್ಣ ಬಾಲೇನಹಳ್ಳಿ ಹೇಳಿದರು.

ಜಂಬೂದ್ವೀಪದ ಕಾರ್ಯದರ್ಶಿ ಸಿದ್ದೇಶ್ ಬಾಬಾಸಾಹೇಬರ ೨೨ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ  ಗೀತೆಗಳನ್ನು ಚಿಂತಕ ಕವಿ ಸೀಗೆಹಟ್ಟಿ ಶಿವಶಂಕರ್ ರವರು ಹೇಳಿದರು.

ಕಾರ್ಯಕ್ರಮವನ್ನ ಯಾದಲಗಟ್ಟೆ ಪ್ರಕಾಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಇಂಗ್ಲೀಷ ಪರಿವೀಕ್ಷಕರಾದ ರಾಘವೇಂದ್ರ, ರಾಮಶೇಖರ, ಹನುಮಂತಪ್ಪ, ಪಾತಪ್ಪ,ಸಿದ್ದಪ್ಪ ಟಿ, ಪ್ರದೀಪ್, ಕುಮಾರ್ ಹೆಚ್ ಮತ್ತಿತರು ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!