Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
*
ನಾಯಕನ ಗೆಲುವಿನ ಸಂಭ್ರಮದಲ್ಲಿ ಸಾವಿರಾರು ಸಹಕಲಾವಿದರು ಭಾಗಿ*
ಸೋಮಶೇಖರ್ ಕಟ್ಟಿಗೇನಹಳ್ಳಿ  ನಿರ್ಮಾಣದ ಜೋಡೆತ್ತು ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಚಿಕ್ಕಣ್ಣ, ಸುನಿಲ್ (ತೆಲುಗು) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ 'ಜೋಡೆತ್ತು' ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮೈಸೂರಿನ ಹೊರ ಭಾಗದ ಇಮ್ಮಾವು ಬಳಿ ಅದ್ದೂರಿಯಾಗಿ ನಡೆಯುತ್ತಿದೆ. ಅಲ್ಲಿ ಛಾಯಾಗ್ರಾಹಕ ಕಮ್ ನಿರ್ದೇಶಕ ಸುಧಾಕರ್ ಈ ರೋಮಾಂಚನಕಾರಿ ಎತ್ತಿನಗಾಡಿ ಚೇಸಿಂಗ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು‌. ಸುಮಾರು ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಮತ್ತು ನೂರಾರು ಎತ್ತಿನ ಗಾಡಿಗಳನ್ನು ಬಳಸಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು.     

ಈ ರೇಸ್ ನಲ್ಲಿ ಅದ್ಭುತ ಫೈಟ್ ಕೂಡ ಕಂಪೋಸ್ ಮಾಡಲಾಯಿತು. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ  ಪತ್ರಕರ್ತರನ್ನು ಮೈಸೂರಿಗೆ ಆಹ್ವಾನಿಸಿತ್ತು. ಈ ವೇಳೆ ರೇಸ್ ನಲ್ಲಿ ಗೆದ್ದ ನಂದಿ (ಚಿಕ್ಕಣ್ಣ)ಯನ್ನು ಹೆಗಲಮೇಲೆ ಹೊತ್ತು ಗ್ರಾಮಸ್ಥರೆಲ್ಲ  ಸಂಭ್ರಮಿಸುತ್ತಿದ್ದರು.         

ವಿರಾಮದ ವೇಳೆ ನಡೆದ ಮಾಧ್ಯಮದ ಮುಂದೆ ಕಲಾವಿದರು, ತಂತ್ರಜ್ಞರು  ಮಾಹಿತಿ ಹಂಚಿಕೊಂಡರು. ಚಿಕ್ಕಣ್ಣ ಮಾತನಾಡುತ್ತ 'ಕಳೆದ ಒಂದು ವಾರದಿಂದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುತ್ತಿದ್ದೇವೆ‌. ಇದರೊಂದಿಗೆ ಟಾಕಿ ಪೋರ್ಷನ್  ಮುಕ್ತಾಯವಾಗಿದ್ದು, ಎರಡು ಹಾಡು ಮಾತ್ರ ಬಾಕಿಯಿದೆ. ಈ ರೇಸ್ ಗಾಗಿ ನಿರ್ಮಾಪಕರು ಸುತ್ತಮುತ್ತಲ ಊರುಗಳಿಂದ ಎತ್ತಿನ ಗಾಡಿಗಳನ್ನು ತರಿಸಿದ್ದರು. ಇನ್ನೆರಡು ಗೀತೆಗಳನ್ನು ಮುಂದಿನ ತಿಂಗಳು  ಶೂಟ್ ಮಾಡುತ್ತೇವೆ' ಎಂದರು.

ನಿರ್ದೇಶಕ ಸುಧಾಕರ್ ಮಾತನಾಡಿ,'ನಮ್ಮ ಚಿತ್ರದ 95% ಶೂಟಿಂಗ್ ಮುಕ್ತಾಯವಾಗಿದೆ. ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರನ್ನು ಬಳಸಿ ಕ್ಲೈಮ್ಯಾಕ್ಸ್ ಸೀನ್ ಮಾಡಿದ್ದೇವೆ. ಚಿತ್ರದ ಎಲ್ಲಾ ಕಲಾವಿದರು  ಇದರಲ್ಲಿ ಭಾಗವಹಿಸಿದ್ದರು. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೆ  ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈಸೂರು, ಮಂಡ್ಯ,ಮದ್ದೂರು, ಚನ್ನಪಟ್ಟಣ ಮುಂತಾದ ಕಡೆ ನೈಜವಾಗಿ ಶೂಟ್ ಮಾಡಲಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿದಿದ್ದು, ಇನ್ನೆರಡು ಬಾಕಿ ಸಾಂಗ್ ಬಾಕಿಯಿದೆ. ಜೋಡೆತ್ತು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, 1990-95ರ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ. ಚಿತ್ರದಲ್ಲಿ ಎಮೋಷನ್, ಕಾಮಿಡಿ, ಲವ್, ಸೆಂಟಿಮೆಂಟ್   ಜತೆ ಗ್ರಾಮೀಣ ಸೊಗಡಿನ ಅದ್ಭುತವಾದ  ಕಥೆಯಿದೆ' ಎಂದು ಮಾಹಿತಿ ನೀಡಿದರು.

ತೆಲುಗು ನಟ ಸುನಿಲ್ ಮಾತನಾಡುತ್ತ ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ‌. ಸೀರಿಯಸ್ ಜತೆ  ಕಾಮಿಡಿಯಾಗಿ  ಸಾಗುವ ಪಾತ್ರ. ಇದೊಂದು ಸಂಪೂರ್ಣ ಫ್ಯಾಮಿಲಿ ಎಅಮಡರ್ ಟೈನರ್ ಎಂದು ಹೇಳಿದರು.

ನಾಯಕನ ತಾಯಿ ಪಾತ್ರ ಮಾಡುತ್ತಿರುವ ನಟಿ ಕಲ್ಯಾಣಿ ಮಾತನಾಡಿ 'ಕಥೆಯಲ್ಲಿ  ಮುಖ್ಯವಾದ ಪಾತ್ರ ನನ್ನದು. ಸುಧಾಕರ್  ಅವರ ಜೊತೆ ಈ ಮೊದಲು 'ಕಾಟೇರ' ಚಿತ್ರದಲ್ಲಿ ಕೆಲಸ ಮಾಡಿದ್ದೆ. ನನಗೆ ಮಂಡ್ಯ ಭಾಷೆ ಅಷ್ಟಾಗಿ ಬರ್ತಿರಲಿಲ್ಲ. ಚಿಕ್ಕಣ್ಣ ನನಗೆ  ಹೇಳಿಕೊಟ್ಟರು' ಎಂದು ಶೂಟಿಂಗ್ ಅನುಭವ ಹಂಚಿಕೊಂಡರು.

ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಮಾತನಾಡಿ, 'ನಾನೀ ಕಥೆಯನ್ನು ಹಲವು ನಟರಿಗೆ ಹೇಳಿದಾಗ, ಎಲ್ಲರೂ ಕಥೆ ಚನ್ನಾಗಿದೆ ಎಂದರು, ಆದರೆ ಯಾರೂ ಅಭಿನಯಿಸಲು ಸಿದ್ದರಿರಲಿಲ್ಲ. ಕೊನೆಗೆ ಚಿಕ್ಕಣ್ಣ ಕಥೆಯನ್ನು ತುಂಬಾ ಇಷ್ಟಪಟ್ಟು ನಟಿಸಲು ಒಪ್ಪಿದರು. ನಂತರ ಸುನಿಲ್ ನಮ್ಮ ತಂಡಕ್ಕೆ ಸೇರಿದರು' ಎಂದು ಹೇಳಿದರು. ಈ ಚಿತ್ರದಲ್ಲಿ ಚಿಕ್ಕಣ್ಣ ರೈತನಾಗಿ ಅಭಿನಯಿಸಿದ್ದಾರೆ. ವೇದಿಕೆಯಲ್ಲಿ  ಫೈಟ್ ಮಾಸ್ಟರ್ ಅರ್ಜುನ್ ರಾಜ್, 'ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಎತ್ತಿನಗಾಡಿ ಚೇಸ್ ದೃಶ್ಯವನ್ನು ಯಾರೂ ಮಾಡಿಲ್ಲ. ಆ ದೃಷ್ಟಿಯಿಂದ ನಾವೇ ಮೊದಲಿಗರು' ಎಂದರು.

ಇದೇ ವೇಳೆ ಸುನಿಲ್ ಅವರ ಪತ್ನಿ ಪಾತ್ರ ಮಾಡುತ್ತಿರುವ ಜಯಶ್ರೀ, ಕಲಾವಿದರಾದ ಉಗ್ರಂ ಮಂಜು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ, ಹುಲಿ ಕಾರ್ತಿಕ್  ಇವರೆಲ್ಲ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!