ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ನಾಗೇನಹಳ್ಳಿ ಹಾಗು ನೆಲ್ಲುಗುದಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳಗಳಿಂದ ಕೂಡಿದ್ದು ಜನ ಸಾಮಾನ್ಯರು ಓಡಾಡಲು ಹಾಗು ವಾಹನ ಸವಾರರಿಗೆ ತೊಂದರೆ ಯಾಗಿದೆ.ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ಜನಸಾಮಾನ್ಯರು ಮತ್ತು ವಾಹನ ಸವಾರರು ದಿನನಿತ್ಯ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಇದು ಕೇವಲ ಸಂಚಾರಕ್ಕೆ ಅಡ್ಡಿಯಾಗುತ್ತಿಲ್ಲ, ಬದಲಿಗೆ ಅನೇಕ ಪ್ರಾಣಾಂತಿಕ ಅಪಘಾತಗಳಿಗೂ ಕಾರಣವಾಗುತ್ತಿದೆ ದೊಡ್ಡಬಳ್ಳಾಪುರ ದಿಂದ ಮುಂಚೇನಹಳ್ಳಿಗೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸುಮಾರು ಹಳ್ಳಿಗಳಿಗೆ ಹೋಗುವ ವಾಹನ ಸವಾರರಿಗೆ ಅದರಲ್ಲೂ ರಾತ್ರಿ ಸಂಚಾರದ ವೇಳೆಯಲ್ಲoತು ತುಂಬಾ ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕರು ಪಂಚಾಯತಿಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮೀಣ ಬಾಗದ ರಸ್ತೆ ಸಮಸ್ಯೆ ಬಗೆಹರಿಸುವುದು ಯಾವಾಗ ಜನಪ್ರತಿನಿಧಿಗಳಿಗೆ ಸಾಮಾನ್ಯ ಜನರ ಕೂಗು:
ಹಳ್ಳಿಗಳಲ್ಲಿ ಮಳೆ ಬಂದಾಗ ರಸ್ತೆಗಳು ಹಾಳಾಗಿ, ಗುಂಡಿಗಳಲ್ಲಿ ನೀರು ತುಂಬಿ ಹೊಂಡಗಳಾಗುವುದು ಮತ್ತು ಸಂಚಾರಕ್ಕೆ ತೊಂದರೆಯಾಗುವುದು ನಮ್ಮ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ. ಗ್ರಾಮೀಣ ರಸ್ತೆಗಳ ದುರಸ್ತಿ, ಅಭಿವೃದ್ಧಿ ಕಾಣದೆ ಸಮಸ್ಯೆ ಇದ್ದಾರೆ. ಇದರ ಬಗ್ಗೆ ಜನ ಪ್ರತಿ ನಿದಿಗಳಾಗಲಿ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿದರೆ ಸಾಕು ಎನ್ನುತ್ತಿದ್ದಾರೆ ವಾಹನ ಸವಾರರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು.
“ಮೂರ್ನಾಲ್ಕು ವರ್ಷದ ಹಿಂದೆ ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿದ್ದು ಅದು ತುಂಬಾ ಕಳಪೆ ಕಾಮಗಾರಿಯಾಗಿದೆ.ಕಾಮಗಾರಿಯ ಗುತ್ತಿಗೆ ಧಾರನನ್ನು ಯಾವ ಅಧಿಕಾರಿಯು ಸಹ ಪ್ರಶ್ನೇ ಮಾಡಲಿಲ್ಲ. ಕಳಪೆ ಡಾಂಬರಿಕಾರಣದಿಂದಾಗಿ ರಸ್ತೆ ಗುಂಡಿಗಳಾಗಿ ಮಾರ್ಪಾಡಾಗಿದೆ ಅದರೆ ರಸ್ತೆಯಲ್ಲಿ ವೃದ್ದರು ಮಹಿಳೆಯರು ಮಕ್ಕಳು ಓಡಾಡಲು ಸಾದ್ಯವಾಗುತ್ತಿಲ್ಲ ಸಂಬಂದ ಪಟ್ಟ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಪ್ರಯೋಜನ ವಾಗಿಲ್ಲ”.
ಗಂಗಾಧರ, ಸ್ಥಳಿಯ ನೆಲ್ಲುಗುದಿಗೆ.




