Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಜನರಲ್ಲಿ ಸ್ವದೇಶಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಸ್ವದೇಶಿ ಚಿಂತಕ, ಸ್ವದೇಶಿ ಬಂಧು, ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರರು. ಭಾರತದ ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ರಾಸಾಯನಿಕಗಳು ಹಾಗೂ ವಸ್ತುಗಳ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ  ತಿಳಿಸಿದರು.

ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸ್ವದೇಶಿ ಪ್ರೇಮಿ ರಾಜೀವ್ ದೀಕ್ಷಿತ್ ರವರ ಕೊಡುಗೆಗಳು ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ವಿಶ್ವದ ಶ್ರೇಷ್ಠ ವಿಜ್ಞಾನಿ, ಐಐಟಿ  ಪದವಿ ಪಡೆದು ಭಾರತದ ಕೋಟಿ ಕೋಟಿ ಭಾರತೀಯರಲ್ಲಿ ಸ್ವದೇಶಿ ಪ್ರಜ್ಞೆ ಜಾಗೃತಿ ಗೊಳಿಸಿ ಯುವಕರ ಆದರ್ಶರಾದರು. ರೈತರು, ಆಹಾರ ಉತ್ಪಾದನೆ, ವಿದೇಶಿಯ ವ್ಯಾಪಾರದ  ಮೋಸದ ಜಾಲವನ್ನು ಎಳೆ ಎಳೆ ಯಾಗಿ ವಿವರಿಸಿ, ಆಧಾರ ಸಮೇತ ಜಗತ್ತಿಗೆ ತಿಳಿಸಿದರು.

ಚಾಮರಾಜನಗರಕ್ಕೆ 3 ಬಾರಿ ಭೇಟಿ ನೀಡಿ ಜೈಹಿಂದ್ ಕಟ್ಟೆಯಲ್ಲಿ  ಶುಭಕೋರಿದ ದೀಕ್ಷಿತ್ ಅತ್ಯಂತ ಸರಳ ವ್ಯಕ್ತಿ. ಎಂಟೆಕ್ ಪದವಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ, ಸ್ವದೇಶಿ ಚಳುವಳಿ, ರಾಷ್ಟ್ರಧರ್ಮ,ಸ್ವಾಭಿಮಾನದ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಿ ರೈತರು ಯುವಕರು ಹಾಗೂ ದೇಶಿಯ ಜನರಲ್ಲಿ ಸ್ವದೇಶಿಯ ಜಾಗೃತಿಯನ್ನು ಮೂಡಿಸಿದೆ ಮಹಾನ್ ವ್ಯಕ್ತಿ. ಬಾಲ್ಯದಲ್ಲಿಯೇ ಚಂದ್ರಶೇಖರ್ ಆಜಾದ್ ,ಭಗತ್ ಸಿಂಗ್ ,ಉದಂ ಸಿಂಗ್ ಮುಂತಾದ ಕ್ರಾಂತಿಕಾರರ ಪ್ರಭಾವಕ್ಕೆ ಒಳಗಾಗಿದ್ದರು .ಅತ್ಯಂತ ಸರಳ ವ್ಯಕ್ತಿಯಾಗಿ ಬದುಕಿ ಆದರ್ಶವಾಗಿದ್ದಾರೆ ಎಂದರು.

ರಾಜೀವ್ ದೀಕ್ಷಿತ್ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟನೆ ನೆರೆವೇರಿಸಿದ ಹಸಿರುಪಡೆಯ ಸಂಚಾಲಕ ಸತೀಶ್ ರವರು ಮಾತನಾಡಿ   ನಮ್ಮೆಲ್ಲರಿಗೂ  ಪರಿಸರ ಸಂರಕ್ಷಣೆ ,ಕ್ರಿಮಿ ನಾಶಕಗಳ ಬಳಕೆಯ ಅಪಾಯ, ಆಹಾರ ಉತ್ಪಾದನೆ ಯಲ್ಲಿ ರಾಸಾಯನಿಕಗಳ ಬಳಕೆಯ ಪರಿಣಾಮ ಮುಂತಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದ ಮಹಾನ್ ವ್ಯಕ್ತಿ.

ಅವರ ಆಹಾರ ಸೂತ್ರಗಳು ವಿಶ್ವ ಖ್ಯಾತಿಯನ್ನು ಪಡೆದಿದೆ. ಭಾರತೀಯರಾದ ಪ್ರತಿಯೊಬ್ಬರು ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವದೇಶಿ ಜಾಗೃತಿ ,ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಸದಾ ಕಾಲ ಜಾಗೃತಿ ಆಗಬೇಕು ಎಂದರು.


ಬಿಕೆ ಆರಾಧ್ಯ ಮಾತನಾಡಿ ಆಜಾದಿ ಬಚಾವೋ ಆಂದೋಲನದ  ದೀಕ್ಷಿತ್ 1967 ನವಂಬರ್ 30ರಂದು ಜನಿಸಿದರು ಉದಾರಿಕರಣ ,ಜಗತೀಕರಣ ಖಾಸಗಿಕರಣದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಚಿಕ್ಕವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದವರು , ನಗರದ ಋಗ್ವೇದಿ ಕುಟೀರಕ್ಕೆ  ಭೇಟಿ ನೀಡಿದ ಸವಿನೆನಪಿನಲ್ಲಿ ಪ್ರತಿವರ್ಷ ಅವರ ಕುರಿತು ಕಾರ್ಯಕ್ರಮ ರೂಪಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮಾದರಿಯಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಮ್ ಪ್ರಸಾದ್, ಮಹೇಶ್, ಜೀವನ್ , ಶ್ರಾವ್ಯ ಋಗ್ವೇದಿ ಇದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!