ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ ನೈಜೀರಿಯನ್ ದೇಶದ ಮೂವರು ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂದಿತರನ್ನು ಮ್ಯಾಕ್ಸ್ವೆಲ್, ವ್ಯಾಕೋಬ್, ಅದ್ಭುತ ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಖಚಿತ ಮಾಹಿತಿಯ ಮೇರೆಗೆ ಮೂವರು ನೈಜೀರಿಯನ್ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ವಿಚಾರಣೆ ಹಾಗೂ ಪರಿಶೀಲನೆ ವೇಳೆ ವಿದೇಶಿ ಪ್ರಜೆಗಳು ಪಾಸ್‌ಪೋರ್ಟ್ ಹಾಗೂ ವೀಸಾ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದಿದೆ.
ಈ ಸಂಬಂಧ ಮೂವರು ನೈಜೀರಿಯನ್ ಪ್ರಜೆಗಳನ್ನು FRRO (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಮುಂದೆ ಹಾಜರುಪಡಿಸಿ, ಅವರ ವಲಸೆ/ವೀಸಾ ಸ್ಥಿತಿಗೆ ಅನುಗುಣವಾಗಿ ಕಾನೂನುಬದ್ಧವಾಗಿ ಅವರ ಸ್ವದೇಶಕ್ಕೆ ಕಳುಹಿಸುವ (ಗಡೀಪಾರು/ತೆಗೆಯುವಿಕೆ)ಕ್ರಮ ಕೈಗೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.




