Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಸ್ಪೃಶ್ಯತೆ ಸಾಮಾಜಿಕ ಪಿಡುಗು:ಸಿ. ಎನ್. ಶೇಷಾದ್ರಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಯು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಅಪರಾಧವಾಗಿದೆ. ಈ ಸಾಮಾಜಿಕ ಪಿಡುಗು ಸಂಪೂರ್ಣವಾಗಿ  ತೊಲಗಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಿ ಎನ್ ಶೇಷಾದ್ರಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಇಂಚರ ಸಾಂಸ್ಕೃತಿಕ ಕಲಾ ಸಂಘ ದೊಡ್ಡಬಳ್ಳಾಪುರ  ಇವರ ಸಹಯೋಗದೊಂದಿಗೆ ಕೊನಘಟ್ಟ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ನಗರದ ತೇರ ಬೀದಿ, ಅರಳು ಮಲ್ಲಿಗೆ, ಚಿಕ್ಕಮಧುರೆ ಗ್ರಾಮಗಳಲ್ಲಿ  ಅಸ್ಪೃಶ್ಯತೆ ಆಚರಣೆ ಕುರಿತಾಗಿ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ  ಅಸ್ಪೃಶ್ಯತೆ ಎನ್ನುವುದು ಸಮಾಜದಲ್ಲಿ ಕೆಲವು ಜನರನ್ನು 'ಅಶುದ್ಧ' ಅಥವಾ 'ಕೀಳು' ಎಂದು ಪರಿಗಣಿಸಿ ಅವರನ್ನು ದೂರವಿಡುವ ಹಳೆಯ ಮತ್ತು ಕೆಟ್ಟ ಸಾಮಾಜಿಕ ಪದ್ಧತಿಯಾಗಿದೆ. ಇದು ಮೂಲತಃ ಜಾತಿ ವ್ಯವಸ್ಥೆಯಲ್ಲಿ ಹಲವಾರು ವರ್ಷಗಳಿಂದ ವಿಷ ವೃಕ್ಷದಂತೆ ಅರಳಿ ಕೊಂಡಿರುವಂತಹ ಸಾಮಾಜಿಕ ಪಿಡುಗಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಉಂಟು ಮಾಡಿದ  ಅಸ್ಪೃಶ್ಯತೆಯನ್ನು ಬೇರು ಸಮೇತ ಕೀಳಲು ಶಿಕ್ಷಣ  ಹೋರಾಟ  ಹಾಗು ಜಾಗೃತಿ ಬಹಳ ಮುಖ್ಯ. ಆದ್ದರಿಂದ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಪಿಡುಗನ್ನು ಹೋಗಲಾಡಿಸಲು    ಬೀದಿ ನಾಟಕ ಹಾಗು ಜಾಗೃತಿ ಗೀತೆ ಗಳು ಮೂಲಕ ಸಾರ್ವಜನಿಕರಲ್ಲಿ  ಜಾಗೃತಿ ಮೂಡಿಸಿ  ಅಸ್ಪೃಶ್ಯತೆ ಯನ್ನು ಹೋಗಲಾಡಿಸಿ  ಸಮಾನತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ವ್ಯವಸ್ಥಾಪಕರಾದ ನರಸಿಂಹಮೂರ್ತಿ, ಸಿಬ್ಬಂದಿಗಳಾದ ನವೀನ್, ಸಂದೀಪ್  ಹಾಗೂ ಇಂಚರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ಶಿವಶಂಕರ್, ನಿರ್ದೇಶಕರಾದ ಬಚ್ಚಹಳ್ಳಿ ನಾಗರಾಜು, ಗೌತಮ್ ವಿ.ಎಮ್. ಮತ್ತು ಸಂಘದ ಕಲಾವಿದರು ಉಪಸ್ಥಿತರಿದ್ದರು.

ಅಸ್ಪೃಶ್ಯತೆ ಎಂದರೆ ಸಮಾಜದಲ್ಲಿ ಕೆಲವು ಜನರನ್ನು ಜಾತಿಯ ಆಧಾರದ ಮೇಲೆ ಕೀಳು ಎಂದು ಪರಿಗಣಿಸಿ ಅವರನ್ನು ಮುಖ್ಯವಾಹಿನಿಯಿಂದ ದೂರವಿಡುವ ಮತ್ತು ಬಹಿಷ್ಕರಿಸುವ ಒಂದು ಅಮಾನತೆ ಸಾಮಾಜಿಕ ಪಿಡುಗು. ಇದು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಮಾಜದ ಶಾಂತಿ ಹಾಗೂ ಸಮಾನತೆಗೆ ದೊಡ್ಡ ಕಳಂಕವಾಗಿದೆ.
ಶಿವಶಂಕರ್ ಅಧ್ಯಕ್ಷರು, ಇಂಚರ ಸಾಂಸ್ಕೃತಿಕ ಕಲಾ ಸಂಘ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!