Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

“ಚುನಾವಣೆಗಳ ಮುಖವಾಡದ ಹಿಂದೆ: ನಗ್ನ ಸತ್ಯದ ಅನಾವರಣ”

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆಗಳ ಮುಖವಾಡದ ಹಿಂದೆ: ನಗ್ನ ಸತ್ಯದ ಅನಾವರಣ
ಚುನಾವಣೆ ಎಂದರೆ ಜನತಂತ್ರದ ಹಬ್ಬ ಎಂದು ನಾವು ಹೆಮ್ಮೆಪಡುವುದು ಸಹಜ. ಆದರೆ ಈ ಹಬ್ಬದ ಹಿಂದಿನ ವಾಸ್ತವ ಚಿತ್ರವನ್ನು ನೋಡಿದಾಗ
, ಅದು ಹಬ್ಬವೋ ಅಥವಾ ಹಣದ ಹೋರಾಟವೋ ಎಂಬ ಪ್ರಶ್ನೆ ಅನಿವಾರ್ಯವಾಗಿ ಉದ್ಭವಿಸುತ್ತದೆ.

ಚುನಾವಣೆ ಘೋಷಣೆ ಆಗುತ್ತಿದ್ದಂತೆ ದೇಶದ ಅತ್ಯುನ್ನತ ಸಂಸ್ಥೆಯಾದ ಭಾರತ ಚುನಾವಣಾ ಆಯೋಗ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತದೆ. ಮಾದರಿ ಆಚಾರ ಸಂಹಿತೆ (Model Code of Conduct) ಜಾರಿಯಾಗುತ್ತದೆ. ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳು, ವಾಹನ ತಪಾಸಣೆ, ಅಕ್ರಮ ಹಣ ಮತ್ತು ಮದ್ಯ ಸಾಗಣೆ ಮೇಲೆ ಕಣ್ಣಿಡುವ ವ್ಯವಸ್ಥೆಗಳು, ಅಗತ್ಯವಿದ್ದರೆ ಭದ್ರತಾ ಪಡೆಗಳ ನಿಯೋಜನೆಇವೆಲ್ಲವೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕಠಿಣವಾಗಿ ಜಾರಿಯಾಗುತ್ತವೆ.

ಆದರೆ, ಮೇಲ್ನೋಟಕ್ಕೆ ಇಷ್ಟು ಬಿಗಿಯಾದ ನಿಯಮಗಳಿದ್ದರೂ, ಒಳಗಡೆ ನಡೆಯುವ ಆಟವೇ ಬೇರೆ. ಕಾನೂನುಗಳು ಒಂದೆಡೆ ಇದ್ದರೆ, ವಾಸ್ತವಿಕ ರಾಜಕೀಯ ಇನ್ನೊಂದೆಡೆ ಸಾಗುತ್ತದೆ. ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚ ಮಿತಿಯು ಕೇವಲ ಕಾಗದದಲ್ಲೇ ಉಳಿಯುತ್ತದೆ ಎಂಬ ಆರೋಪಗಳು ಹೊಸದೇನಲ್ಲ.

ವಿಧಾನಸಭಾ ಚುನಾವಣೆಗಳ ಉದಾಹರಣೆಯನ್ನು ತೆಗೆದುಕೊಂಡರೆ, ಅಭ್ಯರ್ಥಿಗೆ ಖರ್ಚು ಮಾಡಲು ಒಂದು ಮಿತಿ ನಿಗದಿ ಇರುತ್ತದೆ. ಆದರೆ ನೆಲದ ಮಟ್ಟದಲ್ಲಿ ನಡೆಯುವ ವೆಚ್ಚಗಳು ಆ ಮಿತಿಯನ್ನು ಹಲವಾರು ಪಟ್ಟು ಮೀರುತ್ತವೆ ಎನ್ನುವುದು ಬಹಿರಂಗ ರಹಸ್ಯ. ಕೆಲ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಹಣ ಹರಿದು ಹೋಗುವುದು, ಮತದಾರರಿಗೆ ಪ್ರಭಾವ ಬೀರುವ ಪ್ರಯತ್ನಗಳು, ಕಾರ್ಯಕರ್ತರಿಗೆ ಹಣ ಹಂಚಿಕೆ, ಭರ್ಜರಿ ಸಭೆಗಳು, ಮೆರವಣಿಗೆಗಳುಇವೆಲ್ಲವೂ ಅತಿದೊಡ್ಡ ಹಣಕಾಸಿನ ಚಟುವಟಿಕೆಯಾಗಿಬಿಡುತ್ತವೆ.

ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆ:
ಇಷ್ಟು ಕಠಿಣ ತಪಾಸಣೆಗಳ ನಡುವೆಯೂ
, ಈ ಹಣ ಕ್ಷೇತ್ರದೊಳಗೆ ಹೇಗೆ ಪ್ರವೇಶಿಸುತ್ತದೆ?

ಈ ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿದ್ದರೂ, ಯಾರೂ ಬಾಯಿಬಿಟ್ಟುಕೊಳ್ಳುವುದಿಲ್ಲ. ಕಾನೂನು ರೂಪಿಸುವವರಿಗೆ ಗೊತ್ತು, ಕಾನೂನು ಜಾರಿಗೆ ತರುವವರಿಗೆ ಗೊತ್ತು, ರಾಜಕಾರಣಿಗಳಿಗೆ ಗೊತ್ತುಆದರೂ ನಗ್ನ ಸತ್ಯಎಂದಿಗೂ ಅಧಿಕೃತವಾಗಿ ಬೆಳಕಿಗೆ ಬರುವುದಿಲ್ಲ.

ಇದಕ್ಕಿಂತಲೂ ಗಂಭೀರವಾದ ಸಂಗತಿ ಎಂದರೆ, ಚುನಾವಣೆಗೆ ಮುನ್ನ ಅಭ್ಯರ್ಥಿಗಳು ತಮ್ಮ ಆಸ್ತಿ-ಪಾಸ್ತಿ, ಆದಾಯ, ಬಾಕಿ ಹಾಗೂ ವೈಯಕ್ತಿಕ ವಿಚಾರಗಳು ಕ್ರಿಮಿನಲ್ ವಿಚಾರಗಳು ಸಂಪೂರ್ಣ ಮಾಹಿತಿಯನ್ನು ಘೋಷಿಸಬೇಕೆಂಬ ನಿಯಮವಿದ್ದರೂ, ವಾಸ್ತವದಲ್ಲಿ ಬಹುಪಾಲು ಮಾಹಿತಿ ಅಪೂರ್ಣವಾಗಿಯೇ ಸಲ್ಲಿಕೆಯಾಗುತ್ತದೆ ಎಂಬ ಆರೋಪಗಳು ಈಗಲೂ ಕೇಳಿಬರುತ್ತವೆ. ಇದು ಜನತಂತ್ರದ ಪಾರದರ್ಶಕತೆಯನ್ನೇ ಪ್ರಶ್ನಿಸುವ ಸಂಗತಿಯಾಗಿದೆ.

ಇದರಿಂದ ಪರಿಣಾಮವೇನು?
ರಾಜಕೀಯವು ಸಮಾಜ ಸೇವೆಯ ವೇದಿಕೆಯಿಂದ ದೂರವಾಗಿ
, ಬೃಹತ್ ವ್ಯವಹಾರವಾಗಿ ರೂಪಾಂತರಗೊಳ್ಳುತ್ತಿದೆ ಎಂಬ ಅಭಿಪ್ರಾಯ ಗಟ್ಟಿಯಾಗುತ್ತಿದೆ. ಯಾರು ಹೆಚ್ಚು ಹಣ ಹೂಡುತ್ತಾರೆ, ಅವರು ಅಧಿಕಾರಕ್ಕೆ ಬಂದ ನಂತರ ಅದಕ್ಕಿಂತ ಹಲವಾರು ಪಟ್ಟು ವಾಪಸ್ ಪಡೆಯಲು ಯತ್ನಿಸುತ್ತಾರೆ ಎಂಬ ಜನಮನದ ನಂಬಿಕೆ ಹೆಚ್ಚುತ್ತಿದೆ. ಇದು ಆಡಳಿತದ ಗುಣಮಟ್ಟಕ್ಕೂ, ಜನರ ವಿಶ್ವಾಸಕ್ಕೂ ದೊಡ್ಡ ಸವಾಲಾಗಿದೆ.

ಹಾಗಾದರೆ, ಈ ರೀತಿಯ ವ್ಯವಸ್ಥೆಯಲ್ಲಿ ನಿಜವಾದ ಪರಿವರ್ತನೆ ಸಾಧ್ಯವೇ?
ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಆದರೆ ಒಂದು ವಿಷಯ ಸ್ಪಷ್ಟ.
ನಗ್ನ ಸತ್ಯವನ್ನು ಅರಿಯದೆ
, ಪರಿವರ್ತನೆ ಸಾಧ್ಯವಿಲ್ಲ.

ಆದ್ದರಿಂದ, ಚುನಾವಣಾ ವ್ಯವಸ್ಥೆಯ ಒಳಹೊರಗಿನ ವಾಸ್ತವಾಂಶಗಳನ್ನು ಬಹಿರಂಗಪಡಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಜಾಗೃತ ಮತದಾರನೇ ನಿಜವಾದ ಬದಲಾವಣೆಯ ಬೀಜ ಬಿತ್ತಬಲ್ಲನು.



ಕೊನೆಗೆ, ಜನತಂತ್ರದ ಶಕ್ತಿ ಕೇವಲ ಕಾನೂನುಗಳಲ್ಲಿ ಅಲ್ಲ. ಜನರ ಮನಸ್ಸಿನಲ್ಲಿ, ಅವರ ಜಾಗೃತಿಯಲ್ಲಿ, ಮತ್ತು ಅವರ ಮತದ ಮೌಲ್ಯದಲ್ಲಿ ಇದೆ.......
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.


 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!