Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಿಂಗನಹಳ್ಳಿ ಗ್ರಾಮದಲ್ಲಿ
 ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅವಸಾನದ ಅಂಚಿನಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಿಯರ ನೆರವಿನೊಂದಿಗೆ  ರಕ್ಷಣೆ ಮಾಡಿದ್ದಾರೆ. 

ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕಾಮಗಾರಿಯಲ್ಲಿ  ಕಾರ್ಮಿಕರು ಅವುಗಳನ್ನು ಮಣ್ಣಿ ನಡಿ ಮುಚ್ಚಲು ಮುಂದಾಗ ಸ್ಥಳಿಯರು ಗಮನಿಸಿ  ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ  ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಪುರಾತತ್ವ ಇಲಾಖೆಯ ಉಪ ನಿರ್ದೇಶಕಿ ಕಾವ್ಯಶ್ರೀ ಅವರು ಕಾಮಗಾರಿ ಸ್ಥಗಿತಗೊಳಿಸಿ, ಮಣ್ಣಿನಡಿ ಹುದುಗಿದ್ದ ಶಿಲೆಯ  ಕಲ್ಲುಗಳನ್ನು ಹೊರತೆಗೆಸುವ ಮೂಲಕ ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. 

Advertisement

ಮೂರು ವೀರಗಲ್ಲು, ಮೂರು ಮಾಸ್ತಿಕಲ್ಲು: ಲಿಂಗನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿರುವ ಆರು ಶಿಲೆಗಳ ‌ ಪೈಕಿ 4 ಉುದ್ಧ ವೀರಗಲ್ಲುಗಳು ಹಾಗೂ ಮೂರು ವೀರ ಮಾಸ್ತಿಕಲ್ಲುಗಳಿವೆ.ಇವುಗಳ ಕೆತ್ತನೆ ಮತ್ತು ಕಲಾತ್ಮಕ ವಿನ್ಯಾಸಗಳು ವಿಜಯನಗರ ಅರಸರ ಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದ್ದಾರೆ. 

ಒಂದು ವೀರಗಲ್ಲಿನಲ್ಲಿ ವೀರನು ಬಿಲ್ಲು ಮತ್ತು ಕತ್ತಿ ಹಿಡಿದಿರುವ ಚಿತ್ರವಿದೆ. ಆತನ ಬಲಭಾಗದಲ್ಲಿ ಸರ್ವಾಲಂಕಾರಭೂಷಿತಳಾದ ಪತ್ನಿ ನಿಂತ ದೃಶ್ಯವಿದೆ. ಇತರ ಕಲ್ಲುಗಳಲ್ಲೂ ಆಕರ್ಷಕ ಕೆತ್ತನೆಗಳಿದ್ದು, ಅಂದಿನ ಕಾಲದ ಶಿಲ್ಪಕಲೆ, ಸಾಮಾಜಿಕ ಜೀವನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಅಧ್ಯಯನ ‌ ಮಾಡಲು ಇವು ಸಹಕಾರಿಯಾಗಲಿವೆ ಎಂದರು.

ಲಿಂಗನಹಳ್ಳಿ ಹಾಗೂ ಸುತ್ತಮುತ್ತಲಿನ ‌ ಪ್ರದೇಶಗಳಲ್ಲಿ ಇನ್ನಷ್ಟು ಐತಿಹಾಸಿಕ ಅವಶೇಷಗಳು ದೊರೆಯುವ ಸಾಧ್ಯತೆಯಿದ್ದು, ಅವುಗಳನ್ನು ಗುರುತಿಸಿ ಸಂರಕ್ಷಿಸಲಾಗುವುದು ಹಾಗು ಕಾಮಗಾರಿಯಲ್ಲಿ ದೊರೆತಿರುವ ವೀರಗಲ್ಲುಗಳನ್ನು ಹೊರತೆಗೆಸಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಂರಕ್ಷಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.

ಈ ಸಂದರ್ಭದಲ್ಲಿ  ಕೆಐಎಡಿಬಿ ವ್ಯವಸ್ಥಾಪಕ ಡಾ.ಆ‌ರ್.ಯುವರಾಜು, ಮಧುಸೂದನ್, ಕೆ.ಆ‌ರ್. ಹರ್ಷಿತ್, ರಾಮಚಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ