ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ತಾಲ್ಲೂಕಿನ ಕಣಕುಪ್ಪೆ ಗ್ರಾಮದ ಹಿರಿಯ ಉದ್ಯಮಿ ಪಟೇಲ್ ಮರಿಸಿದ್ದೇಗೌಡ (77) ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಮೃತರು ಮಹಾತ್ಮ ಗಾಂಧೀಜಿಯವರ ಚಳ್ಳಕೆರೆ ಭೇಟಿ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಟೇಲ್ ಮರಿಸಿದ್ದನಗೌಡ ಅವರ ಪುತ್ರರಾಗಿದ್ದರು. ಮೊಳಕಾಲ್ಮೂರಿನ ಐಶ್ವರ್ಯ ಬಾರನ್ ರೆಸ್ಟೋರೆಂಟ್ ಹಾಗೂ ಕಣಕುಪ್ಪೆಯ ಐಶ್ವರ್ಯ ಎಂಟರ್ಪ್ರೈಸಸ್ ಸಂಸ್ಥೆಗಳ ಮಾಲೀಕರಾಗಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಗೌಡರ ಮರಿಯಮ್ಮ, ಐವರು ಪುತ್ರರು (ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಹಾಗೂ ವಕೀಲ ಜಿ.ಎಸ್. ಕುಮಾರ್ ಗೌಡ ಸೇರಿದಂತೆ), ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಸೊಸೆ ದೀಪಾ ಕುಮಾರ್ ಗೌಡ ಅವರು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದಾರೆ.
ಪಟೇಲ್ ಮರಿಸಿದ್ದೇಗೌಡ ಅವರ ಅಂತ್ಯಸಂಸ್ಕಾರ ಬುಧವಾರ ಬೆಳಿಗ್ಗೆ 11 ಗಂಟೆಗೆ ಕಣಕುಪ್ಪೆ ಗ್ರಾಮದ ಅವರ ತೋಟದಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.



