Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ವಿಜಯಲಕ್ಷ್ಮಿ vs ಧನ್ವೀರ್‌ಶೀತಲ ಸಮರ ತೀವ್ರ; 'ದೆನ್ ನೌ ಫಾರೆವರ್' ಪೋಸ್ಟ್‌ಮೂಲಕ ದರ್ಶನ್ ಆಪ್ತನ ತಿರುಗೇಟು!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಆಪ್ತ ಸ್ನೇಹಿತ, ನಟ ಧನ್ವೀರ್ ಗೌಡ ನಡುವಿನ ವೈಷಮ್ಯ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಈಗ ಕಾನೂನು ಮತ್ತು ಸಾಮಾಜಿಕ ಮಾಧ್ಯಮಗಳ ಅಖಾಡಕ್ಕೆ ತಿರುಗಿದೆ.

ವಿಜಯಲಕ್ಷ್ಮಿ ಅವರಿಗೆ ದೂರವಾಣಿ ಮೂಲಕ ಕಿರುಕುಳ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಕಾನೂನು ನಡಾವಳಿಗಳ ಬೆನ್ನಲ್ಲೇ, ನಟ ಧನ್ವೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.

'ನನ್ನ ಹೃದಯದಿಂದ ದರ್ಶನ್ ಸರ್ ಅವರನ್ನು ದೂರವಿಡಲು ಸಾಧ್ಯವಿಲ್ಲ':
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಧನ್ವೀರ್, "ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು, ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ತೋರಿಸಲು ಎಷ್ಟೇ ನೆಗೆಟಿವ್ ಪಿಆರ್ ಮಾಡಿದರೂ, ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ," ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಅಲ್ಲದೆ, "ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ, ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ... ದರ್ಶನ್ ಸರ್! ದೆನ್, ನೌ, ಫಾರೆವರ್" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಆಡಿಯೋ ಬಾಂಬ್ ಸಿಡಿಸುವ ಎಚ್ಚರಿಕೆ!:
ಇತ್ತೀಚೆಗಷ್ಟೇ ಈ ವಿವಾದದ ಕುರಿತು ಮಾತನಾಡಿದ್ದ ಧನ್ವೀರ್, ತಮ್ಮ ಬಳಿಯೂ ಸೂಕ್ತ ಆಡಿಯೋ ಆಧಾರಗಳಿದ್ದು, ಶೀಘ್ರದಲ್ಲೇ ಅವುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಇದೀಗ ಈ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ವಿರುದ್ಧ ನೇರ ತಿರುಗೇಟು ನೀಡಿದ್ದು, ದರ್ಶನ್ ಕುಟುಂಬ ಹಾಗೂ ಅವರ ಆಪ್ತ ವಲಯದ ನಡುವಿನ ಬಿರುಕು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ — ಪ್ರೀತಿಯ ಹಸಿರಿಗೆ ನಂಬಿಕೆಯೇ ಬೇರು!: ವಿಮರ್ಶೆ: ಈ. ರವೀಶ ಅಕ್ಕರಕನ್ನಡ ರಾಜ್ಯೋತ್ಸವ: ಕನ್ನಡಿಗರ ಸ್ವಾಭಿಮಾನ ಮತ್ತು ಏಕತೆಯ ಪ್ರತೀಕಅರ್ನಾಬ್ ಚಂಡಮಾರುತದ ಭೀತಿ: ಭಾರಿ ಮಳೆಯ ಮುನ್ನೆಚ್ಚರಿಕೆಚುನಾವಣಾ ಅಕ್ರಮ ವಿರೋಧಿಸಿ ನ.1ಕ್ಕೆ ಇಂಡಿಯಾ ಬೃಹತ್ ರ‍್ಯಾಲಿ: ಪೊಲೀಸರ ತಡೆಗೆ ಕಾಂಗ್ರೆಸ್ ಆಕ್ರೋಶ ಕಿಟಕಿ ಸರಳು ಕತ್ತರಿಸಿ ನೈಜೀರಿಯಾ ಮಹಿಳೆ ಪರಾರಿ; ಭದ್ರತಾ ಲೋಪ ಬಯಲಿಗೆಇಸಿಐ-ವಿರೋಧ ಪಕ್ಷಗಳ ನಡುವೆ ಹೆಚ್ಚಿದ ಸಂಘರ್ಷ: 'ಸತ್ಯಂ ಶಿವಂ ಸುಂದರಂ' ಎಂದ ರಾಹುಲ್ ಗಾಂಧಿಗರ್ಭಿಣಿ ಪತ್ರಕರ್ತೆಯ ಮೇಲೆ ದೌರ್ಜನ್ಯ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್  ವೀಟೋ ಅಧಿಕಾರವಿಲ್ಲದ ಖಾಯಂ ಸ್ಥಾನವು ‘ಎರಡನೇ ದರ್ಜೆ’ಯ ಸದಸ್ಯತ್ವಕ್ಕೆ ಸಮ– ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಮೇಳ: ಅಕ್ಟೋಬರ್ 30ರಿಂದ ಶಿವಮೊಗ್ಗದಲ್ಲಿ ನಾಲ್ಕು ದಿನಗಳ ಮಹಾಮೇಳಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ: ಜಿಲ್ಲಾ ಅಧ್ಯಕ್ಷರಾಗಿ ಸಿದ್ದರಾಜು ಆಯ್ಕೆ