Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಸಿಬಿ ಮೂಲಕ ನರೇಗಾ ಕಾಮಗಾರಿ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

Advertisement
Advertisement
ಚಂದ್ರವಳ್ಳಿ ನ್ಯೂಸ್, ಪಾವಗಡ:
ಕೂಲಿ ಕಾರ್ಮಿಕರು ಮಾಡುವಂತಹ ಕೆಲಸವನ್ನು ಜೆಸಿಬಿ ಮೂಲಕ ಮಾಡಿಸಲಾಗುತ್ತಿದೆ ಎಂದು ವಿರೋಧಿಸಿ ಪಾವಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಅವರಿಗೆ ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೋಟ ಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಕೆರೆ ಗ್ರಾಮದ ಗ್ರಾಮಸ್ಥರು ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದರು.


ಗ್ರಾಮದ ಮುಖಂಡ ನಾಗರಾಜ್ ಮಾತನಾಡಿ ಕೆಲ ದಿನಗಳ ಹಿಂದೆ ನಾವು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನರೇಗಾ ಕೆಲಸಗಳನ್ನ ಜೆಸಿಬಿ ಮೂಲಕ ಮಾಡಿಸಲಾಗುತ್ತಿದ್ದು ಅವರ ವಿರುದ್ಧ ಫೋಟೋ ವಿಡಿಯೋಗಳ ಸಮೇತ ನಾವು ದೂರು ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಓ ಕಚೇರಿಗೆ ಹೋಗಿ ಇ ಓ ಜಾನಕಿ ರಾಮ್ ಅವರನ್ನು ಪ್ರಶ್ನಿಸಿದಾಗ ಏಕವಚನದಲ್ಲಿ ಮಾತನಾಡಿ ಅನಗತ್ಯವಾದ ಉತ್ತರ ನೀಡಿದ್ದಾರೆ. ಜೆಸಿಪಿಗಳಿಂದ ಕಾಮಗಾರಿ ನಿರ್ವಹಿಸಿದರೂ ಅವರಿಗೆ ಬಿಲ್ ಪಾಸ್ ಮಾಡುತ್ತೇನೆ, ನೀವು ಅದೇನು ಮಾಡ್ಕೊಂತಿರೋ ಮಾಡ್ಕೊಳ್ಳಿ ಎಂದು ಇಓ ಜಾನಕಿ ರಾಮ್ ಪ್ರತಿಕ್ರಿಯೆ ನೀಡುವ ಮೂಲಕ ನರೇಗಾ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ಮಾಡಿರುವ ಅಕ್ರಮದಲ್ಲಿ ಪಿಡಿಒ ಭವ್ಯ, ಎನರ್ಜಿ ನೆರೇಗಾ ಇಂಜಿನಿಯರ್ ಅಶ್ವಿನಿ, ಕಂಪ್ಯೂಟರ್ ಆಪರೇಟರ್ ಯಶು, ಕಾರ್ಯನಿರ್ವಹಣಾ ಅಧಿಕಾರಿ ಜಾನಕಿ ರಾಮ್  ಅವರು ಶಾಮೀಸು ಆಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದರು.

ಪ್ರತಿಭಟನೆಯಲ್ಲಿ ರಾಜಕುಮಾರ್, ಮಂಜುನಾಥ್, ನಾಗಾರ್ಜುನ್, ಮಂಜೇಶ್, ಭಾಸ್ಕರ್, ಪ್ರದೀಪ್, ರಮೇಶ್, ನಾಗರಾಜು ಮತ್ತಿತರರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ!ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಲೋಕಭವನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್: ಸೋನಿಯಾ ಗಾಂಧಿ ಶುಭ ಹಾರೈಕೆ!ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಮುಹೂರ್ತ: ಡಿಸಿಎಂ ಆಗಿ ಜಿ. ಪರಮೇಶ್ವರ್ ಪದಗ್ರಹಣ, ರಾಜ್ಯಾದ್ಯಂತ ನೇರ ಪ್ರಸಾರ!ರಾಜ್ಯದ ಇತಿಹಾಸದಲ್ಲೇ ಪ್ರಥಮ: ಸ್ವಾಮೀಜಿ, ಫಾದರ್, ಮೌಲ್ವಿಗಳ ಸಮ್ಮುಖದಲ್ಲಿ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪದಗ್ರಹಣ!ಡಿ.ಕೆ.ಶಿವಕುಮಾರ್ ಸಿಎಂ ಬೆನ್ನಲ್ಲೇ ಕೆಪಿಸಿಸಿಗೆ ನೂತನ ಸಾರಥಿ: ಬಿ.ಕೆ. ಹರಿಪ್ರಸಾದ್ ಹೆಗಲಿಗೆ ಕೈ ಪಟ್ಟ?ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: 21 ಮಂದಿ ಸಜೀವ ದಹನ!ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ: ಇತಿಹಾಸ ಬರೆದ ಅದ್ಧೂರಿ ಸಮಾರಂಭ!ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ವಿ. ಸೋಮಣ್ಣಜಲ್ ಜೀವನ್ ಮಿಷನ್ 2.0: ನಾಗಾಲ್ಯಾಂಡ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿಜೆಡಿಎಸ್ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರ ಯಶಸ್ವಿ: ಪ್ರಮುಖ ನಾಯಕರಿಗೆ ಅಭಿನಂದನೆ