Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುವ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರ ಪಟ್ಟಿಯಲ್ಲಿ
2863 ಶಿಕ್ಷಕ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ಕೆ.ಎನ್ ಅನುರಾಧ ತಿಳಿಸಿದರು. 

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರ ಪಟ್ಟಿಯನ್ನು ಅಕ್ಟೋಬರ್ 06 ರಂದು ಪ್ರಕಟಿಸಲಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ(ದೊಡ್ಡಬೆಳವಂಗಲ,ಸಾಸಲು ಸೇರಿ) 811, ದೇವನಹಳ್ಳಿ ತಾಲ್ಲೂಕಿನಲ್ಲಿ 593, ಹೊಸಕೋಟೆ 814, ನೆಲಮಂಗಲ ತಾಲ್ಲೂಕಿನಲ್ಲಿ(ಸೋಂಪುರ, ತ್ಯಾಮಗೊಂಡ್ಲು ಸೇರಿ) 645 ಶಿಕ್ಷಕರ ಇದ್ದು, ಒಟ್ಟು 1411 ಪುರುಷ, 1452 ಮಹಿಳಾ ಶಿಕ್ಷಕರು ಸೇರಿ 2863 ಶಿಕ್ಷಕ ಮತದಾರರು ಅಂತಿಮ ಮತದಾರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

Advertisement

ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ 6 ನಾಮಪತ್ರಗಳು ಸಲ್ಲಿಕೆಯಾಗಿದೆ. ಅಧಿಸೂಚನೆ ಅನ್ವಯ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ದಿನಾಂಕ: 23.10.2026 ರಂದು ಮತದಾನ, 27.10.2026 ರಂದು ಮತ ಎಣಿಕೆ ಜರಗಲಿದೆ. ಚುನಾವಣಾ ಪ್ರಕ್ರಿಯೆ ದಿನಾಂಕ 31.10.2026 ರಂದು ಕೊನೆಗೊಳ್ಳಲಿದೆ ಎಂದರು. 

ಜಿಲ್ಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ಷೇತ್ರದಾದ್ಯಂತ ವಿವಿಧ ತಂಡಗಳನ್ನು ರಚಿಸಿದ್ದು, 24 ಗಂಟೆಗಳ ಕಾಲ ನಿರಂತರ ನಿಗಾ ಇಡಲಾಗುತ್ತಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ, ಎಂ.ಸಿ.ಸಿ ತಂಡ, ಎಂ.ಸಿ.ಎಂ.ಸಿ ಸಮಿತಿ, ಮೀಡಿಯಾ ವೀವಿಂಗ್ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

6 ಮತಗಟ್ಟೆ ಸ್ಥಾಪನೆ: ಅಕ್ಟೋಬರ್ 23ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಮತದಾನಕ್ಕಾಗಿ ಜಿಲ್ಲೆಯಲ್ಲಿ 6 ಸ್ಥಳಗಳಲ್ಲಿ ಮತಗಟ್ಟೆ (ಪೊಲಿಂಗ್ ಸ್ಟೇಷನ್) ಸ್ಥಾಪನೆ ಮಾಡಲಾಗಿದೆ.

1. ತಾಲ್ಲೂಕು ಆಡಳಿತ ಸೌಧ ದೊಡ್ಡಬಳ್ಳಾಪುರ ಟೌನ್.

2. ಕೊ.ಸಂ 02, ಕರ್ನಾಟಕ ಪಬ್ಲಿಕ್ ಶಾಲೆ, ದೊಡ್ಡಬೆಲವಂಗಲ.

3. ತಾಲ್ಲೂಕು ಆಡಳಿತ ಸೌಧ, ದೇವನಹಳ್ಳಿ ಟೌನ್.

4. ತಾಲ್ಲೂಕು ಕಾರ್ಯನಿರ್ವಾಹಕ ಕಚೇರಿ, ತಾಲ್ಲೂಕು ಪಂಚಾಯಿತಿ, ಹೊಸಕೋಟೆ ಟೌನ್.

5. ತಾಲ್ಲೂಕು ಆಡಳಿತ ಸೌಧ, ನೆಲಮಂಗಲ ಟೌನ್.

6. ಸರ್ಕಾರಿ ಮಾದರಿ ಪ್ರೌಢಶಾಲೆ, ರೂ.ನಂ 02, ಸೋಂಪುರ ಹೋಬಳಿ ನೆಲಮಂಗಲ ತಾಲ್ಲೂಕು. 

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರು/ಅಹವಾಲುಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆರವರ ಕಛೇರಿ ಹಾಗೂ ಜಿಲ್ಲೆಯ ಉಪವಿಭಾಗಾಧಿಕಾರರಿಗಳ ಕಛೇರಿ  ಮತ್ತು ತಹಸೀಲ್ಧಾರ್ ಕಛೇರಿಗಳಲ್ಲಿ ದೂರು ನೀಡಬಹುದಾಗಿರುತ್ತದೆ ಎಂದರು. ಚುನಾವಣೆ ಪಾರದರ್ಶಕತೆ, ಮುಕ್ತ, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಜರುಗುವಲ್ಲಿ ಪ್ರತಿಯೊಬ್ಬ ಮತದಾರರು, ಎಲ್ಲಾ ರಾಜಕೀಯ ಪಕ್ಷಗಳು,ಸಾರ್ವಜನಿಕರ ಸಹಕಾರ ಅಗತ್ಯ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರು ಡಿ. ಅಶೋಕ್ ಕುಮಾರ್ ಡಿ. ಉಪಸ್ಥಿತರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ