Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಮಹಿಳಾ ದಿನಾಚರಣೆ: ವರ್ಷಕ್ಕೊಮ್ಮೆ ಅವಳ ದಿವಸ ಮಾತ್ರವೇ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದಾಕ್ಷಣ ನೆನಪು ಬರೋದು ನಮ್ಮ ಮನೆಗಳಲ್ಲಿ ಏನೂ ಅಪೇಕ್ಷೆ ಮಾಡದೆ ಕೆಲಸ ಮಾಡುವ ಅಮ್ಮಂದಿರು. ಎಲ್ಲರೂ ರಜೆ ಇರಬೇಕು
, ಬಿಡುವಿರಬೇಕು, ಸಂಬಳ ಬರಬೇಕು ಎಂದು ಮನಸ್ಸಿನಲ್ಲಿ ಚಿಂತನೆ ಮಾಡುವ ಸಾಮಾಜಿಕ ನ್ಯಾಯ ನಮ್ಮ ಮನೆಯಲ್ಲೆ ಠುಸ್ಸೆಂದು ಕೈ ಕೊಡುತ್ತದೆ. ಅವಳಿಗೆ ಕೊಂಚ ಬಿಡುವು ಕೊಡುವ ಯೋಚನೆಯನ್ನೂ ಸಹ ನಾವು ಮಾಡುವುದಿಲ್ಲ. ಪ್ರಾಯಶಃ ಇದನ್ನು ಅವಳೇ ಎಸಗಿಕೊಂಡ ಸ್ವಯಂಕೃತ ಅಪರಾಧ ಎಂದೂ ನಾವು ತಿಳಿದುಕೊಳ್ಳುತ್ತೇವೆ.

ಏನನ್ನೂ ಹೇಳದೆ ಎಲ್ಲಾ ಕೆಲಸವನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಮಾತೆಯರಿಗೆ ತಮ್ಮನ್ನು ಬದಲಾವಣೆ ಮಾಡಿಕೊಳ್ಳುವ ಮನಸ್ಸು ಮಾತ್ರ ಬರುವುದಿಲ್ಲ. ಮಗ ಯಾವತ್ತೂ ಆ ಕೆಲಸ ಮಾಡಿಲ್ಲ... ಈಗಲೂ ಮಾಡಲ್ಲ.. ಈ ರೀತಿಯ ಭಾವನೆಯನ್ನು ಅಮ್ಮಂದಿರು ಹೊರಹಾಕದಿದ್ದರೆ ಮನೆಯಲ್ಲಿ ಬದಲಾವಣೆ ಬರೋದು ತುಂಬಾ ಕಷ್ಟ.

ಬದಲಾವಣೆ ತರಬೇಕು :-
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಇವತ್ತು ತನ್ನ ಮಗಳಿಗೆ ಕೆಲಸ ಮಾಡಲು ಕಲಿಸುವ ಹೆಣ್ಣುಮಕ್ಕಳೇ ಜಾಸ್ತಿ ಆಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ..

ಗಂಡು ಮತ್ತು ಹೆಣ್ಣು ಭೇದವಿಲ್ಲದೆ ಅಡಿಗೆಮನೆ ಸೇವಿದಂತೆ ಮನೆಯ ಕಾರ್ಯ ಚಟುವಟಿಕೆಯನ್ನು ಇಬ್ಬರು ಸೇರಿ ಮಾಡಿದರೆ ಜೀವನ ರಥ ಉತ್ತಮವಾಗಿ ಸಾಗಬಲ್ಲದು.

ಇಂದಿನ ಸಮಾಜದಲ್ಲಿ ಜನರು:
ಬಹಳ ಓದಿರ್ತಾರೆ. ಸಂಬಳ ಬರುತ್ತದೆ. ಲೋಕ ಜ್ಞಾನವೂ ಇರುತ್ತದೆ. ಆದರೂ ಸಹ ಮಾತಿಗೂ ವಿದ್ಯೆಗೆ ಸಂಬಂಧವೇ ಇರುವುದಿಲ್ಲ ಎನ್ನುವಂತೆ ವರ್ತಿಸುತ್ತಾರೆ. ನೀವು ಯಾವುದೇ ಮನೆಯನ್ನು ನೋಡಿ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ, ಸಮಯ ಸಂದರ್ಭ ಏನೇ ಇದ್ದರೂ ಅಡುಗೆ ಕೆಲಸ ಹೆಣ್ಣುಮಕ್ಕಳದೇ; ಇಷ್ಟ ಇದೆಯೋ ಇಲ್ಲವೋ ಅವರದನ್ನು ಮಾಡಲೇಬೇಕು.

ಮನೆಯಲ್ಲಿ ಕಸ ಗುಡಿಸೋಕೆ ಹೆಣ್ಣಿಗೆ ಮಾತ್ರ ಹೇಳಿಕೊಟ್ಟು, ಗಂಡು ಮಕ್ಕಳಿಗೆ ಅದರ ಅವಶ್ಯಕತೆ ಇಲ್ಲ ಎನ್ನುವ ಮನೋಭಾವ ಬದಲಾವಣೆಯಾಗಬೇಕು.

ದೇವತೆ ಎಂದು ಪೂಜಿಸುವ ಹೆಣ್ಣುಮಕ್ಕಳನ್ನು ಈಗಲೂ ಅಳೆಯುವುದು ಅವಳ ಬುದ್ಧಿಮತ್ತೆಯಿಂದ, ಅವಳ ಕಲೆಯಿಂದ, ಅವಳ ಸೌಂದರ್ಯದಿಂದ; ಅಲ್ಲದೇ ಅವಳ ಅಡಿಗೆ ಕಲೆ, ಮನೆ ನಡೆಸುವ ಕಲೆಯಿಂದಷ್ಟೇ ಎನ್ನುವುದು ಸತ್ಯ. ಮೊನ್ನೆ ನಾ ಅಂದುಕೊಳ್ಳುತ್ತಿದ್ದೆ, "ಎಲ್ಲರೂ ಊಟ ಮಾಡುತ್ತಾರೆ. ಆದರೆ ಅಡಿಗೆ ಕೆಲಸದ ಜವಬ್ದಾರಿಯನ್ನು ಮಾತ್ರ ಯಾಕೆ ಒಂದು ಗುಂಪಿಗೆ ಹೊರಿಸಲಾಗಿದೆ ಇದು ಬದಲಾವಣೆಯಾದಾಗ ಮಾತ್ರ ಮನೆಯಲ್ಲಿ ನೆಮ್ಮದಿ ಸಿಗಲ್ಲ ಅಲ್ಲವೇ

ತನ್ನ ಕೆಲಸ ಕಾರ್ಯ, ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕಿದೆ.

ನಮ್ಮ ಸಮಾಜದಲ್ಲಿ ನಡೆಯುವ ಮಹಿಳಾ ದೌರ್ಜನ್ಯ ನಿಲ್ಲಬೇಕಾಗಿದೆ ಮಹಿಳೆಯರಿಗೆ ರಕ್ಷಣೆ ಕೊಡುವ ಕಟ್ಟುನಿಟ್ಟಿನ ಕಾಯ್ದೆಗಳು ಬರಬೇಕಾಗಿದೆ. ಧಾರ್ಮಿಕ ಕಾರಣದಿಂದ ಮಹಿಳೆಯರ ಮೇಲೆ ನಡೆಯುವ ಅನೇಕ ಹಿಂಸೆ ಸೇರಿದಂತೆ ಅವರಿಗೂ ಕೂಡ ಸ್ವಾತಂತ್ರ್ಯವಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಹೆಣ್ಣು ಮತ್ತು ಗಂಡು ಎಂಬ ಜಾತಿಗಳು ಒಂದು ರಥದ ಚಕ್ರದಂತೆ ಆ ರಥ ಮುಂದೆ ಸಾಗಬೇಕಾದರೆ ಇಬ್ಬರು ಬೇಕು ಹೀಗಾಗಿ ವರ್ಷದಲ್ಲಿ ಕೇವಲ ಒಂದು ದಿನ ಮಹಿಳೆಯರಿಗೆ ಸ್ವಾತಂತ್ರ್ಯ ಹೇಳಿದರೆ ಸಾಲದು. ಪ್ರತಿದಿನ ಕೂಡ ಇರಬೇಕು.
ಲೇಖನ
: ರಾಘವೇಂದ್ರ ಪ್ರಭು ಕರ್ವಾಲು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!