ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನೆಹರು ನಗರದ ಬಳಿ ವಾಸವಿದ್ದ, ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಯಶೋಧ ಕೋಂ ಮಾರಣ್ಣ (ವಯಸ್ಸು 48) ಕಾಣೆಯಾದ ಕುರಿತು ಸೆ.9 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯಶೋಧ 5 ಅಡಿ ಎತ್ತರವಿದ್ದು, ಕೋಲು ಮುಖ ಎಣ್ಣೆಗೆಂಪು ಮೈ ಬಣ್ಣ, ಸಾಧರಣಾ ಮೈ ಕಟ್ಟು ಹೊಂದಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ನೈಟಿ, ಕಪ್ಪು ಬಣ್ಣದ ಸ್ವೆಟ್ಟರ್, ತಲೆಗೆ ಪಾಚಿ ಹಸಿರು ಬಣ್ಣದ ಸ್ಕಾರ್ಫ್ ಕಟ್ಟಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ಸಂಖ್ಯೆ 08194-222933, 9480803145 ಚಿತ್ರದುರ್ಗ ಪೊಲೀಸ್ ಉಪಧೀಕ್ಷಕ ಕಛೇರಿ ಸಂಖ್ಯೆ 08194-222430, 9480803120 ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.




