Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗೂಳ್ಯ ಗ್ರಾಮದಲ್ಲಿ ZECC ಪ್ರಾತ್ಯಕ್ಷಿಕೆ ಹಾಗೂ ಅಡಿಕೆ–ತೆಂಗು ಕೀಟ ನಿರ್ವಹಣೆ ಜಾಗೃತಿ ಕಾರ್ಯಕ್ರಮ

ಚಂದ್ರವಳ್ಳಿ ನ್ಯೂಸ್, ಹಿರಿಯೂರು/​ಗೂಳ್ಯ:
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದಡಿ ಗೂಳ್ಯ ಗ್ರಾಮದಲ್ಲಿ ಶೂನ್ಯ ಶಕ್ತಿ ಶೀತಲೀಕರಣ (ZECC) ಪ್ರಾತ್ಯಕ್ಷಿಕೆ ಹಾಗೂ ಅಡಿಕೆ–ತೆಂಗು ಕೀಟ ನಿರ್ವಹಣೆ ಜಾಗೃತಿ ಕಾರ್ಯಕ್ರಮ ನಡೆಯಿತು.

​​ZECC ತಂತ್ರಜ್ಞಾನ ಪ್ರಾತ್ಯಕ್ಷಿಕೆ: ಡಾ. ಪ್ರವೀಣ್ ಗಿಡಗಿರಿ ಅವರು ಶೂನ್ಯ ಶಕ್ತಿ ಶೀತಲೀಕರಣ ಘಟಕದ ನಿರ್ಮಾಣ, ಕಾರ್ಯವೈಖರಿ ಹಾಗೂ ಕಡಿಮೆ ವೆಚ್ಚದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ತಾಜಾವಾಗಿಟ್ಟು ಕೊಯ್ಲೋತ್ತರ ನಷ್ಟ ತಡೆಯುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

Advertisement

​ಸಮಗ್ರ ಕೀಟ ನಿರ್ವಹಣೆ(IPM): ಡಾ. ಸಯ್ಯದ್ ಇಮ್ರಾನ್ ಖಾನ್ ಅವರು ಅಡಿಕೆ ಮತ್ತು ತೆಂಗಿನ ಬೆಳೆಗಳನ್ನು ಕಾಡುವ ಕೀಟಗಳು, ಹಾನಿಯ ಲಕ್ಷಣಗಳು ಹಾಗೂ ಪರಿಸರ ಸ್ನೇಹಿ ಸಮಗ್ರ ಕೀಟ ನಿಯಂತ್ರಣ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.

​ರೈತರ ಸಂವಾದ: ಭಾಗವಹಿಸಿದ್ದ ರೈತರು ತಮ್ಮ ತೋಟದ ಬೆಳೆಗಳ ಸಮಸ್ಯೆಗಳನ್ನು ಹಂಚಿಕೊಂಡು, ತಜ್ಞರಿಂದ ತಾಂತ್ರಿಕ ಸಲಹೆ ಮತ್ತು ಸೂಕ್ತ ಮಾರ್ಗದರ್ಶನ ಪಡೆದುಕೊಂಡರು.

​ಕಾರ್ಯಕ್ರಮದಲ್ಲಿ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸಯ್ಯದ್ ಇಮ್ರಾನ್ ಖಾನ್, ಡಾ. ಪ್ರವೀಣ್ ಗಿಡಗಿರಿ ಭಾಗವಹಿಸಿದ್ದರು.

ಅಂತಿಮ ವರ್ಷದ ತೋಟಗಾರಿಕೆ ವಿದ್ಯಾರ್ಥಿಗಳಾದ ಚೇತನ್ ಆನ್ವೇರಿ, ಈಶ್ವರ್ ಎಸ್. ಅಗಸರ, ಮಹೇಶ್ ಕೊಣ್ಣೂರ, ಮಾಳಪ್ಪ ಜಿ., ಪದ್ಮನಾಭ ಜೋಶಿ, ಶಿವಕುಮಾರ್ ಬನ್ನಿಗೋಳಮಠ, ಶ್ರೇಯಸ್ ಬಿ. ಆರ್. ಹಾಗೂ ಎಸ್. ಎಂ. ವಿಶ್ವನಾಥ್ ಕಾರ್ಯಕ್ರಮದ ಸಂಘಟನೆ ಮತ್ತು ಸಂವಾದದಲ್ಲಿ ಸಕ್ರಿಯವಾಗಿ ಸಹಕರಿಸಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಿಜಯನಗರದ ಮಹಾನವಮಿ; ಸಾಮ್ರಾಜ್ಯದ ವೈಭವದಿಂದ ಶ್ರೀರಂಗಪಟ್ಟಣ ದಸರಾವರೆಗೆ:ಮೂರ್ಖನಾದ ಮಹಾರಾಜನ್ : ವೆಂಕಟೇಶ್, ಚಿತ್ರದುರ್ಗಚಳ್ಳಕೆರೆಯಲ್ಲಿ ಇಂದು 'ಮಾತೃಶ್ರೀ ಪ್ರಸಾದ ನಿಲಯ' ಉದ್ಘಾಟನೆಕಾಶಿಯಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಾಂಸ್ಕೃತಿಕ ಸಂಭ್ರಮ: 30 ಪ್ರವಾಸಿಗರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ಪ್ರದಾನವಿಜೃಂಭಣೆಯ 'ರೈತ ಸ್ವಾಭಿಮಾನ ಯಾತ್ರೆ': ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆ ನಡೆಸಿದ ನಿಖಿಲ್ಕವಿತೆ ಬರೆಯುವುದು, ಸಾಹಿತಿಯಾಗುವುದು ಲೋಕದ ಜವಾಬ್ದಾರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ತುಮಕೂರು ದಸರಾ ಮಹೋತ್ಸವಕ್ಕೆ ಸಿದ್ಧಗಂಗಾ ಶ್ರೀ ಚಾಲನೆ: 5 ಸಾವಿರಕ್ಕೂ ಅಧಿಕ ಕಲಾವಿದರಿಂದ ಕಲಾ ಪ್ರದರ್ಶನಬಿಜೆಪಿ ಕೋರ್ ಕಮಿಟಿ ಸಭೆ: ಹಿರಿಯೂರು ಉಪಚುನಾವಣೆಗೆ ಕಮಲ ಪಕ್ಷದ ಕಸರತ್ತುಐಐಟಿ ಮದ್ರಾಸ್‌ನ ಶ್ರೀ ಜಲಕಂಠೇಶ್ವರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ