i
ಸಿನಿಮಾ
ಕೊರೊನ ವೈರಸ್ ಸೋಂಕು ತಗುಲಿದರೆ ಎದೆಗುಂದಬಾರದು, ಧೈರ್ಯದಿಂದ ಎದುರಿಸಬೇಕು, ನಮ್ಮ ಎದರಿಕೆಯೆ ನಮ್ಮ ಶತೃ, ಕೊರೊನ ಸೋಂಕಿನಿಂದ ಗೆದ್ದು ಬಂದ ಸುಮಲತಾ ಅಂಬರೀಶ್ ರವರು ಹೇಳಿದ ಮಾತುಗಳಿವು.
ಸುಮಲತಾ ಅಂಬರೀಶ್ ರವರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗುಣಮುಖರಾಗಿರುವ ಬಗ್ಗೆ ಟ್ವೀಟ್ ಮಾಡಿ ಶೀಘ್ರವೇ ಜನಸೇವೆಗೆ ಮರಳುತ್ತೇನೆ ಎಂದಿದ್ದಾರೆ.
ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ ನಂತರ ನಾನೀಗ #ಕೋವಿಡ್19 ನೆಗೆಟಿವ್ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲಕ್ಕು ವಾರದ ವಿಶ್ರಾಂತಿ ಪಡೆದು, ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ. 🙏🏼 pic.twitter.com/ChrB6nTEXx
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) July 22, 2020