i
ಸುಂದರವಾದ 14 ವರ್ಷದ ಬಾಲಕಿ ಐಶ್ವರ್ಯ ನಾಪತ್ತೆಯಾಗಿದ್ದಾರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಗ್ರಾಮದ ರೂಪ ಗೋಪಾಲ ಎಂಬುವವರ ಮಗಳು ಐಶ್ವರ್ಯ ಎಂಬ 14 ವರ್ಷದ ಯುವತಿಯು ದಿ: 20/08/2022 ರಿಂದ ಕಾಣೆಯಾಗಿರುತ್ತಾರೆ.
ಈಕೆಯ ಎತ್ತರ 155 ಸೆ.ಮೀ., ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕನ್ನಡ ಭಾಷೆ ಮಾತಾನಾಡುತ್ತಾರೆ. ಕಾಣೆಯಾಗುವಾಗ ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.
ಈ ಯುವತಿಯನ್ನು ಕಂಡಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ದೂ.ಸಂ.: 08282-235494/ 08182-261400/ 9480803359 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.