i
ಅಚ್ಚುಕಟ್ಟು ಪ್ರದೇಶಕ್ಕೆ ಒಟ್ಟಾರೆ 119 ದಿನಗಳಿಗೆ ಹಿಂಗಾರು ನೀರು ಪೂರೈಸಲು ತೀರ್ಮಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚಿತ ಅಚ್ಚುಕಟ್ಟು ಪ್ರದೇಶಕ್ಕೆ 2022 -23 ನೇ ಸಾಲಿನ ಹಿಂಗಾರು ಹಂಗಾಮಿಗೆ ದಿನಾಂಕ: 12-12-2022 ರಿಂದ 30-03-2023 ರವರೆಗೆ 14 ದಿನ ಚಾಲೂ ಹಾಗೂ 10 ದಿನ ಬಂದ್ ಪದ್ದತಿಯನ್ನು ಅನುಸರಿಸಿ 5 ಪಾಳೆಯಲ್ಲಿ 69 ದಿನಗಳಿಗೆ ಪೂರೈಸಲಾಗುವುದು. ಹಾಗೂ 05 ಪಾಳೆಯಲ್ಲಿ ಬಂದ್ ಅನುಸರಿಸಿ ಒಟ್ಟಾರೆ 119 ದಿನಗಳಿಗೆ ಹಿಂಗಾರು ನೀರು ಪೂರೈಸಲು ತೀರ್ಮಾನಿಸಲಾಯಿತು.
ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 318 ರಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯು 2022 -23 ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯ ಸಭೆಯು ಲೋಕೋಪಯೋಗಿ ಸಚಿವರು ಮತ್ತು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಸಿ.ಸಿ.ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರೈತಾಪಿ ಸಮೂಹಕ್ಕೆ ದಿನಾಂಕ: 24-11-2022 ರಿಂದ 11-12-2022 ರವರೆಗೆ ಹಿಂಗಾರು ಹಂಗಾಮಿಗೆ ಭಿತ್ತನೆ ಕಾರ್ಯವನ್ನು ಏಕ ಕಾಲಕ್ಕೆ ಕೈಗೊಳ್ಳಲು ಕೋರಿದೆ.. ಕೃμÁ್ಣ ಮೇಲ್ದಂಡೆ ಯೋಜನೆಯ ಬೆಳೆ ಪದ್ದತಿ ಅನುಸಾರವಾಗಿ (ಹಿಂಗಾರು 35% ದ್ವಿಋತು 15%) ಅಚ್ಚುಕಟ್ಟು ಪ್ರದೇಶದ 50 ಕ್ಷೇತ್ರಕ್ಕೆ ನೀರನ್ನು ಹಿಂಗಾರು ಹಂಗಾಮಿಗೆ ಲಘು ನೀರಾವರಿ ಬೆಳೆಗಳಗೆ ಮಾತ್ರ ಹಾಗೂ ಹಾಲಿ ಬೆಳೆದು ನಿಂತಿರುವ ದ್ವಿಋತು ಬೆಳೆಗಳಿಗೆ ನೀರನ್ನು ಪೂರೈಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಿμÉೀದಿತ ಬೆಳೆಗಳಾದ ಭತ್ತ, ಕಬ್ಬು, ಬಾಳೆ ಇತ್ಯಾದಿ ಬೆಳೆಯದಿರಲು ಹಾಗೂ ಲಘು ನೀರಾವರಿ ಬೆಳೆಗಳಾದ ಜೋಳ, ಮೆಕ್ಕೆಜೋಳ, ಗೋಧಿ, ಸೂರ್ಯಕಾಂತಿ, ಸಾಸಿವೆ, ಕಡಲೆ, ಗೆಜ್ಜಿ, ಸೇಂಗಾ, ಕುಸುಬಿ, ಸಜ್ಜೆ, ಸೊಪ್ಪು, ತರಕಾರಿ ಇತ್ಯಾದಿಗಳನ್ನು ಮಾತ್ರ ಬೆಳೆಯಲು ರೈತರಿಗೆ ತಿಳಿಸುವಂತೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಸ್ತ ಅಚ್ಚುಕಟ್ಟಿನ ರೈತ ಬಾಂಧವರಲ್ಲಿ ನೀರು ಪೋಲಾಗದಂತೆ ಕೃμÁ್ಣ ಭಾಗ್ಯ ಜಲ ನಿಗಮದ ನೀರಾವರಿ ಅಧಿಕಾರಿಗಳೊಂದಿಗೆ ಸಹಕರಿಸಿ ಉತ್ಕøಷ್ಟ ನೀರಿನ ಬಳಕೆಗೆ ಸಹಭಾಗಿತ್ವ ನೀಡಲು ವಿನಂತಿಸಲಾಗಿದೆ. ಒಂದು ವೇಳೆ ಸದ್ಯ ನೀರಾವರಿಗೆ ಲಭ್ಯವಿರುವ 68.977 ಟಿ.ಎಂ.ಸಿಯಲ್ಲಿ ನೀರು ಪೋಲಾಗದಂತೆ, ಮಿತವಾಗಿ ನೀರನ್ನು ಬಳಸಿ ಉಳತಾಯ ಮಾಡಿದರೆ ಹಾಗೂ ಜಲಾಶಯಗಳಗೆ ಒಳಹರಿವು ಲಭ್ಯವಾದರೆ ಹಿಂಗಾರು ಹಂಗಾಮಿನ ಅವಧಿಯನ್ನು ನೀರಾವರಿಗೆ ಲಭ್ಯವಿರುವ ನೀರಿನ ಸಂಗ್ರಹಣೆಯ ಅನುಸಾರ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ದಿನಾಂಕ: 23-11-2022 ರಂದು ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಒಟ್ಟಾರೆ ಜೀವ ಜಲ 108.663 ಟಿ.ಎಂ.ಸಿ. (ಆಲಮಟ್ಟಿ ಜಲಾಶಯ 103.473 ಟಿ.ಎಂ.ಸಿ + ನಾರಾಯಣಪೂರ ಜಲಾಶಯ 5.19 ಟಿ.ಎಂ.ಸಿ) ಲಭ್ಯವಿದ್ದು, ದಿನಾಂಕ: 24-11-2022 ರಿಂದ 30-06-2023 ರವರೆಗೆ ಅಗತ್ಯ ಬಳಕೆಗಳಾದ ಕುಡಿಯುವ ನೀರು, ಭಾಷ್ಪೀಕರಣ, ಹಿನ್ನೀರಿನ ಬಳಕೆ, ಕೈಗಾರಿಕೆ ಇತ್ಯಾದಿಗಳಿಗೆ ಒಟ್ಟು 38.544 ಟಿ.ಎಂ.ಸಿ. ಬೇಕಾಗಿದ್ದು, ನೀರಾವರಿಗೆ ಅಂದಾಜು 68.977 ಟಿ.ಎಂ.ಸಿ ಲಭ್ಯವಿರುವುದು ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 5.919 ಟಿ.ಎಂ.ಸಿ ನೀರು ಹೆಚ್ಚುವರಿಯಾಗಿ ಇರುವುದು ಎಂದು ತಿಳಿಸಿದರು.