i
ಪೊಲೀಸ್ ಪೇದೆ ಪತ್ನಿ ರಾಜೇಶ್ವರಿ ಅನುಮಾನಾಸ್ಪದವಾಗಿ ಸಾವು…
ಚಂದ್ರವಳ್ಳಿ ನ್ಯೂಸ್, ತೆಕ್ಕಲಕೋಟೆ:
ತೆಕ್ಕಲಕೋಟೆ ಪೊಲೀಸ್ ಠಾಣೆ ಪೇದೆಯ ಪತ್ನಿ ರಾಜೇಶ್ವರಿ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಪೊಲೀಸ್ ಪೇದೆ ರಮೇಶ್ ಎಂಬಾತನ ಪತ್ನಿ ರಾಜೇಶ್ವರಿ ಮೃತ ಮಹಿಳೆ ಆಗಿದ್ದಾರೆ.
ಸೋಮವಾರ ಬೆಳಗಿನ ಜಾವ ರಾಜೇಶ್ವರಿ ಮೃತಪಟ್ಟಿದ್ದು, ಮೃತದೇಹವನ್ನು ರಮೇಶ್ ಇದ್ದಕ್ಕಿದ್ದ ಹಾಗೆ ತವರು ಮನೆ ಸಿಂಧನೂರಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಗೃಹಿಣಿಯ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಈ ಹಿನ್ನೆಲೆಯಲ್ಲಿ ಮೃತ ರಾಜೇಶ್ವರಿ ಪೋಷಕರು ಪೊಲೀಸರಿಗೆ ಕೊಲೆ ಶಂಕೆ ವ್ಯಕ್ತ ಪಡಿಸಿ ದೂರು ನೀಡಿದ್ದಾರೆ. ಪೋಸ್ಟ್ ಮಾರ್ಟಮ್ ವರದಿಗಾಗಿ ಬಳ್ಳಾರಿಯ ವಿಮ್ಸ್ಗೆ ರಾಜೇಶ್ವರಿ ಮೃತದೇಹವನ್ನು ರವಾನೆ ಮಾಡಲಾಗಿದೆ.