i
ಪ್ರಯಾಣಿಕರೇ ಮಾರ್ಗ ಬದಲಾವಣೆಯಾಗಿದ್ದು ಸರಿಯಾಗಿ ಕಾರ್ಯಾಚರಣೆ ಮಾಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕೆಂಗೇರಿ ಟಿಟಿಎಂಸಿ ಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ಕೇಂಗೇರಿ ಉಪನಗರ, ಗೊರಗುಂಟೆಪಾಳ್ಯ, ಯಶವಂತಪುರ, ಮತ್ತಿಕೆರೆ, ಬಿ.ಇ.ಎಲ್ ಸರ್ಕಲ್, ಹೆಬ್ಬಾಳ ಮಾರ್ಗವಾಗಿ ಆಚರಣೆಯಲ್ಲಿದ್ದ ಮಾರ್ಗಸಂಖ್ಯೆ ಕೆಐಎ-17ನ್ನು ಡಿಸೆಂಬರ್ 05 ರಿಂದ ಜಾರಿಗೆ ಬರುವಂತೆ ಬಿ.ಇ.ಎಂ.ಎಲ್ ಲೇ ಔಟ್ 5ನೇ ಹಂತದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಯಂಡಹಳ್ಳಿ, ನಾಗರಬಾವಿ ಸರ್ಕಲ್, ಮಾಳಗಾಳ, ಸುಮನಹಳ್ಳಿ, ಗೋರಗುಂಟೆಪಾಳ್ಯ, ಬಿ.ಇ.ಎಲ್ ಸರ್ಕಲ್ ಹಾಗೂ ಹೆಬ್ಬಾಳ ಮಾರ್ಗವಾಗಿ ಕಾರ್ಯಚರಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.