i
ಆರು ತಿಂಗಳ ಮೈಸೂರು ಶೈಲಿ ಚಿತ್ರಕಲಾ ತರಬೇತಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಚಿತ್ರಕಲಾ ಪರಿಷತ್ತು ಕನ್ನಡ ನಾಡಿನ ಹೆಮ್ಮೆಯ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯನ್ನು ಕಲಿಸುವ ಆರು ತಿಂಗಳ ತರಬೇತಿಯನ್ನು ಇದೇ ತಿಂಗಳ 20ರಿಂದ ಪ್ರಾರಂಭ ಮಾಡಲಿದೆ.
ವಾರದಲ್ಲಿ ಮೂರು ದಿನ (ಸೋಮವಾರ, ಮಂಗಳವಾರ ಹಾಗೂ ಬುಧವಾರಗಳಂದು) ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ.
ಹೆಸರಾಂತ ಸಾಂಪ್ರದಾಯಿಕ ಚಿತ್ರಕಲಾವಿದರಾದ ಶ್ರೀಮತಿ ನೀಲಾಪಂಚ್ ಅವರು ತರಬೇತಿ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ವಿವರಗಳನ್ನು ಮೊಬೈಲ್ ಸಂಖ್ಯೆ: 90363 30928 ಮತ್ತು ದೂರವಾಣಿ ಸಂಖ್ಯೆ 080-22261816 ಅಥವಾ ಚಿತ್ರಕಲಾ ಪರಿಷತ್ತಿನಿಂದ ಪಡೆಯಬಹುದೆಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎನ್.ಶಶಿಧರ್, ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.