
ಕಿಚ್ಚ ಸುದೀಪ್ ಬರ್ಲಿಲ್ಲ, ಅಭಿಮಾನಿಗಳಿಂದ ಚೇರ್ ಗಳು ಪೀಸ್ ಪೀಸ್…
ಚಂದ್ರವಳ್ಳಿ ನ್ಯೂಸ್, ದಾವಣೆಗೆರೆ:
ನಾಯಕ ನಟ ಕಿಚ್ಚ ಸುದೀಪ್ ದಾವಣಗೆರೆ ಜಿಲ್ಲೆ ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಆದರೆ ಸುದೀಪ್ ಬರ್ಲಿಲ್ಲ, ಸಿಟ್ಟಿಗೆದ್ದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಚೇರ್ ಗಳನ್ನು ಪೀಸ್ ಪೀಸ್ ಮಾಡಿದ ಘಟನೆ ಜರುಗಿತು.
ನಟ ಸುದೀಪ್ ಬರುತ್ತಾರೆಂದು ಪ್ಲಕ್ಸ್, ಬ್ಯಾನರ್ ಹಾಕಿದ್ದರಿಂದ ಹಾಗೂ ಕಾರ್ಯಕ್ರಮ ಆಯೋಜಕರು ಸಹಾ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ಪ್ರಚಾರ ಮಾಡಿದ್ದರಿಂದಾಗಿ ಅಭಿಮಾನಿಗಳು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರನ್ನು ಆಹ್ವಾನಿಸಿರಲಿಲ್ಲವಾದ್ದರಿಂದಾಗಿ ಅವರು ಹಾಜರಾಗಲಿಲ್ಲ.
ಇನ್ನು ತಮ್ಮ ನೆಚ್ಚಿನ ನಟನ ಆಗಮನಕ್ಕೆಂದು ಕಾದುಕುಳಿತಿದ್ದ ಅಭಿಮಾನಿಗಳಿಗೆ, ಸುದೀಪ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬ ವಿಷಯ ತಿಳಿದು ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಆಸನಗಳನ್ನು ತೂರಾಡಿ ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಕೊನೆಗೆ ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಸುದೀಪ್ ಬಂದೇ ಬರ್ತಾರೆ ಎಂದು ಜಾತ್ರಾ ಸಮಿತಿಯವರು ಸಂಜೆವರೆಗೂ ಹೇಳುತ್ತಾ ಬಂದಿದ್ದಾರೆ. ಸಿಎಂ ಕೂಡ ಸುದೀಪ್ ಬರುತ್ತಾರೆ. ನಾನು ಬಾ ಅಂತ ಪೋನ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಸುದೀಪ್ ಬಂದಿಲ್ಲವೆಂದು ಅಭಿಮಾನಿಗಳು ಬೇಸರ ಹೊರಹಾಕಿ ಚೇರ್ ಗಳನ್ನು ಪೀಸ್ ಪೀಸ್ ಮಾಡಿದ್ದಾರೆ.