i
ಗ್ರಾಮ ಪಂಚಾಯತ್ ಪಿಡಿಓ ಎಂ.ಉಷಾ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಿಡಿಓ ಒಬ್ಬರು ಲಂಚ ಸ್ಪೀಕರಿಸುವಾದ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಟಿ.ಬೇಗೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಟಿ.ಬೇಗೂರು ಗ್ರಾಮ ಪಂಚಾಯತ್ ಪಿಡಿಓ ಎಂ.ಉಷಾ ಲೋಕಾಯುಕ್ತ ಬಲೆಗೆ ಬಿದ್ದವರು. ಕಾಮಗಾರಿಯೊಂದಕ್ಕೆ ಬಿಲ್ ಮಾಡಿಸಿಕೊಡಲು ಗುತ್ತಿಗೆದಾರರೊಬ್ಬರಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಗುತ್ತಿಗೆದಾರನಿಂದ 25,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿವೈ ಎಸ್ ಪಿ ವೆಂಕಟೇಶ್ ಆರೋಪಿ ಪಿಡಿಓ ಉಷಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.